ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಯಾಕೆ ಇನ್ನೂ ಮದುವೆಯಾಗದೆ ಒಬ್ಬಂಟಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಊಹಾಪೋಹಗಳಿರಬಹುದು. ಆದರೆ ಅವರಿಗೆ ತಮ್ಮ ಕುಟುಂಬದ ಬಗ್ಗೆ ಇರುವ ಅತಿಯಾದ ಕಾಳಜಿ ಅವರನ್ನು ಮದುವೆ ವಿಚಾರದಲ್ಲಿ ದೂರ ಉಳಿಯುವಂತೆ ಮಾಡುತ್ತಿದೆಯಂತೆ.
ಸಾಕಷ್ಟು ಬಾರಿ ಇನ್ನೇನು ಸಲ್ಮಾನ್ ಮದುವೆಯಾಗಿ ಬಿಡುತ್ತಾರೆ ಎಂದುಕೊಳ್ಳುವಾಗಲೇ ಅವರ ಮದುವೆ ನಿಂತು ಹೋಗಿರುವ ಉದಾಹರಣೆಯಿದೆ. ಆಗಲೂ ಸಹ ಕುಟುಂಬಕ್ಕೆ ತಾನು ತೋರುವ ಪ್ರೀತಿಯನ್ನು ಸಂಗಾತಿಯಾಗಿ ಬರುವ ಹುಡುಗಿಗೂ ಕೊಡಬೇಕು ಎಂದು ಸಲ್ಮಾನ್ ಖಾನ್ ಗೆ ಅನಿಸದೆ ಹೋಗಿರುವುದು ಅವರನ್ನ ಮದುವೆಯಿಂದ ದೂರ ಉಳಿಯುವ ಹಾಗೆ ಮಾಡಿರಲೂ ಬಹುದು.
ಸಲ್ಮಾನ್ ಪ್ರಕಾರ, “ತನ್ನನ್ನ ನಂಬಿಕೊಂಡು ಬಂದ ಸಂಗಾತಿಗೆ ಶೇ.100 ರಷ್ಟು ಸಮಯ ಕೊಡಬೇಕು. ಆಗ ಮಾತ್ರ ತಾನು ಮತ್ತು ತನ್ನ ಸಂಗಾತಿಯ ಖುಷಿಯಿಂದ ಇರಲು ಸಾಧ್ಯ” ಎಂಬ ಧೃಡವಾದ ನಂಬಿಕೆ ಅವರಲ್ಲಿದೆ. ಆದರೆ ಸಂಗಾತಿಯಾಗಿ ಬರಲಿಚ್ಚಿಸಿದ ಹುಡುಗಿ ಸಲ್ಮಾನ್ ಖಾನ್ ರಲ್ಲಿರುವ ಕುಟುಂಬ ಪ್ರೇಮವನ್ನು ಅರ್ಥೈಸಿಕೊಳ್ಳುವಲ್ಲಿಯೂ ವಿಫಲರಾದರಾ ಎಂಬ ಅನುಮಾನವೂ ಸಹ ಕಾಡತೊಡಗಿದೆ.
ಸಲ್ಮಾನ್ ಮದುವೆಯನ್ನು ಅವರು ಇಷ್ಟಪಡುವ ಹುಡುಗಿಯ ಜೊತೆಗೆ ಕುಟುಂಬವೇ ಎರಡು ಬಾರಿ ನಿಗದಿಪಡಿಸಿತ್ತು. ಆದರೆ ಕಾರಣಾಂತರಗಳಿಂದ ಆ ಮದುವೆ ಮಾತುಕತೆಗಳು ಹಳ್ಳ ಹಿಡಿದಿತ್ತು.
ಇನ್ನು ಸೋಮಿ ಅಲಿ ಹಾಗೂ ಸಂಗೀತ ಬಿಜಲಾನಿ ಇಬ್ಬರಲ್ಲಿ ಒಬ್ಬರು ಸಲ್ಮಾನ್ ಖಾನ್ ರ ಜೊತೆಯಾಗಿ ಬರಲಿದ್ದಾರೆ ಎಂದು ಬಿಂಬಿಸಲಾಗಿತ್ತು. ಏಕೆಂದರೆ ಇವರಿಬ್ಬರ ಜೊತೆಗೆ ಮದುವೆ ಮಾತುಕತೆ ಆಮಂತ್ರಣ ಪತ್ರಿಕೆಯನ್ನೂ ಪ್ರಿಂಟ್ ಹಾಕಿಸುವ ಮಟ್ಟಿಗೆ ಮುಂದುವರೆದಿದ್ದರೂ ಅದು ಕೊನೆ ಘಳಿಗೆಯಲ್ಲಿ ಮುರಿದು ಬಿತ್ತು.
ಅಂದಹಾಗೆ 2000 ನೇ ಇಸವಿಯ ಆಜುಬಾಜಿವಿನಲ್ಲಿ ಒಬ್ಬಳು ಪ್ರಮುಖ ನಟಿಯೊಂದಿಗೂ ಸಲ್ಮಾನ್ ಮದುವೆಯಾಗಬೇಕಿತ್ತು. ಅದು ಸಹ ಈಡೇರಲಿಲ್ಲ. ಇತ್ತೀಚೆಗೆ ಕತ್ರೀನಾ ಕೈಫ್ ಸಹ ಅವರ ಸಂಗಾತಿಯಾಗಿ ಬರಬೇಕಿತ್ತು. ಆದರೆ ಇವರೆಲ್ಲಾ ಸಲ್ಮಾನ್ ಖಾನ್ ರಿಗೆ ಇರುವ ನಿಸ್ವಾರ್ಥ ಪ್ರೀತಿಯನ್ನ ಅರ್ಥೈಸಿಕೊಳ್ಳಲು ವಿಫಲರಾಗಿರುವುದಕ್ಕೆ ಮದುವೆಯಾಗಲು ಸಾಧ್ಯವಾಗಿಲ್ಲವಂತೆ. ಅಂದಹಾಗೆ ಸಲ್ಮಾನ್ ಖಾನ್ ಅವರನ್ನು ಅರ್ಥೈಸಿಕೊಂಡು ಬಾಳುವ ಹುಡುಗಿ ಸಲ್ಲುಗೆ ಯಾವಾಗ ಸಿಗುತ್ತಾರೋ! ಅವರ ಮದುವೆ ಆಗುತ್ತಾರೋ! ಇಲ್ಲವೋ! ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವವರೇ ಇಲ್ಲ.
No Comment! Be the first one.