ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಸದಾ ಸುದ್ದಿಯಾಗುವ ಬಿ ಟೌನಿನ ಬ್ಯಾಡ್ ಬಾಯ್ ಸಲ್ಮಾನ್ ಖಾನ್. ಇತ್ತೀಚಿಗೆ ಪ್ರಭುದೇವ್, ಕಿಚ್ಚ ಸುದೀಪ್ ಜತೆ ಕುಣಿದು ಕುಪ್ಪಳಿಸಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಸದ್ಯ ತಮ್ಮ ತಾಯಿಯೊಂದಿಗೆ ಡ್ಯಾನ್ಸ್ ಮಾಡಿರುವ ಸಲ್ಮಾನ್ ಖಾನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಹಳಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದೆ.
Mom is saying band karo yeh naach ganna..
Gepostet von Salman Khan am Montag, 22. Juli 2019
ಸಲ್ಲು ಭಾಯ್, ತಾಯಿ ಸಲ್ಮಾ ಖಾನ್ ಜೊತೆ ಮನೆಯಲ್ಲಿಯೇ ಫೇಮಸ್ ಸಾಂಗ್ ಸಿಯಾ ಚೀಪ್ ಥ್ರಿಲ್ಸ್ಗೆ ಹೆಜ್ಜೆ ಹಾಕಿದ್ದು, ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿ ಸಲ್ಮಾ ವಿಡಿಯೋ ಮಾಡುತ್ತಿರುವ ವ್ಯಕ್ತಿಗೆ ವಿಡಿಯೋವನ್ನು ಮಾಡಬೇಡ, ಬಂದ್ ಕರೋ ತಮಷಾ ಅನ್ನುತ್ತಲೇ ಹೆಜ್ಜೆ ಹಾಕಿದ್ದಾರೆ.
Comments