ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಯಾವಾಗ ಮದುವೆಯಾಗ್ತಾರೆ..! ಅನ್ನೋದೆ. ವಯಸ್ಸು 53 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಉಳಿದಿರುವುದು ಸಲ್ಲು ಪ್ರಿಯರಿಗೆ ಸಂಕಟ, ಉರಿ, ಎಲ್ಲವೂ.
ಸಲ್ಲು, ಸಲ್ಲು ಅಂತ ಕನವರಿಸುತ್ತಿದ್ದ ನಟಿ ಮಣಿಯರೆಲ್ಲರೂ ಮದುವೆಯಾಗಿ ತಮ್ಮ ಮಕ್ಕಳನ್ನು ಸಿನಿಮಾಗೆ ಹೋಸ್ಟ್ ಮಾಡುವ ಮಟ್ಟಿಗೆ ಡೆವಲಪ್ ಆಗಿದ್ರೂ ಕೂಡ ಸಲ್ಲು ಮದುವೆ ಆಗುವುದರ ಕಡೆ ಇಂಟ್ರಸ್ಟ್ ತೋರಿಸ್ತಿಲ್ಲ. ಹಾಗಂತ ಸಲ್ಲು ಏನ್ ಎಲ್ಲವನ್ನೂ ಬಿಟ್ಟ ಸನ್ಯಾಸಿಯೇನಲ್ಲ. ಬಾಲಿವುಡ್ ನ ಮೆಜಾರಿಟಿ ಬೇಡಿಕೆ ನಟಿಯರೆಲ್ಲರೂ ಸಲ್ಲುಗೆ ಎಕ್ಸ್ ಗರ್ಲ್ ಫ್ರೆಂಡ್ ಗಳೇ.
ಇನ್ನು ಸಲ್ಮಾನ್ ಖಾನ್ ರನ್ನು ಆ ನಟಿ ಮದುವೆಯಾಗ್ತಾರೆ, ಈ ನಟಿ ಮದುವೆಯಾಗ್ತಾರೆ, ಎಂಗೇಜ್ ಮೆಂಟ್ ಆಗ, ಮದುವೆ ಈಗ ಅಂತೆಲ್ಲಾ ಗುಲ್ಲು ಸೋಶಿಯಲ್ ಮೀಡಿಯಾದಲ್ಲಿ ಬಿಟ್ಟೂ ಬಿಡದೇ ಹರಿದಾಡುತ್ತಿದ್ದರೂ ಸಲ್ಲು ಕೇರ್ ಮಾಡದೇ ತಾನಾಯ್ತು ತನ್ನ ಚಿತ್ರ ಜೀವನವಾಯ್ತು ಎಂದು ಉಳಿದಿದ್ದಾರೆ.
ಇತ್ತೀಚಿಗೆ ಬಾಲಿವುಡ್ ನ ನಟಿ ಶ್ರದ್ಧಾ ಕಪೂರ್ ಸಂದರ್ಶನವೊಂದನ್ನು ನೀಡಿದ್ದರು. ಸಂದರ್ಶನದಲ್ಲಿ ತನ್ನ ಮನಸ್ಸಿನಲ್ಲಿ ಸಲ್ಮಾನ್ ಖಾನ್ ಇರುವುದನ್ನು ಬಿಚ್ಚಿಟ್ಟಿದ್ದಾರೆ. ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರನ್ನು ಮದ್ವೆಯಾಗೋದು ತನ್ನ ದೊಡ್ಡ ಕನಸು ಎಂದೂ ತಿಳಿಸಿ ನೆರೆದಿದ್ದವರಲ್ಲಿ ಕಣ್ಣರಳುವಂತೆ ಮಾಡಿದ್ದಾರೆ. ಅಷ್ಟಕ್ಕೂ ಶ್ರದ್ದಾ ಏನಂದ್ರೂ ಅಂದ್ರೆ, “ನಾನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ಅವರ ದೊಡ್ಡ ಅಭಿಮಾನಿ. ನನಗಿಂತ 21 ವರ್ಷ ದೊಡ್ಡವರಾಗಿರುವ ನಟ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ನನಗೆ ಇಷ್ಟವಿದೆ. ಆದರೆ ಆ ಕಾಲ ಕೂಡಿ ಬಂದಿಲ್ಲ” ಎಂದಿದ್ದಾರೆ. ಈ ಸಂದರ್ಶನವನ್ನು ನೋಡಿಯಾದ ಮೇಲಾದರೂ ಸಲ್ಮಾನ್ ಖಾನ್ ಈ ಇಳಿವಯಸ್ಸಿನಲ್ಲಿಯಾದರೂ ಮದುವೆಯಾಗಲು ಮನಸ್ಸು ಮಾಡ್ತಾರಾ ನೋಡ್ಬೇಕು.