ಕೊರೊನಾ ಆರ್ಭಟದಿಂದ ಸಾಮಾನ್ಯ ಜನರಿಗಷ್ಟೇ ಅಲ್ಲ.. ಎಲ್ಲಾ ವರ್ಗದ ಜನರಿಗೂ ಸಂಕಷ್ಟ ಎದುರಾಗಿತ್ತು. ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು, ಕೆಲಸವನ್ನೇ ನಂಬಿಕೊಂಡಿದ್ದವರಂತೂ ಮನೆಯಲ್ಲಿ ಹೇಗಪ್ಪಾ ಇರೋದು ಅಂತ ಟೆನ್ಷನ್ ಮಾಡಿಕೊಂಡಿದ್ದ ದಿನಗಳು ಇದ್ದವು.. ಅದರಲ್ಲೂ ಸಿನಿಮಾ ಕ್ಷೇತ್ರದವರಿಗೂ ಭಾರೀ ಸಮಸ್ಯೆಗಳು ಎದುರಾಗಿದ್ದವು. ಇದೀಗ ಕೊರೊನಾ ನಿಯಮದಲ್ಲಿ ಕೊಂಚ ಸಡಿಲಿಕೆ, ಜೊತೆಗೆ ಸಿನಿಮಾ ಚಿತ್ರೀಕರಣಕ್ಕೆ ಛಾನ್ಸ್ ಕೊಟ್ಟಿದಕ್ಕೆ ಎಲ್ಲ ನಟ-ನಟಿಯರು ಫುಲ್ ಬ್ಯುಸಿ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಬೇಜಾನ್ ಆಕ್ಟೀವ್ ಆಗಿದ್ದಾರೆ. ಅದರಲ್ಲಿ ಕಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕೂಡ ಒಬ್ಬರು..

ಕಾಲಿವುಡ್ ನ ಖ್ಯಾತ ನಟ ವಿಜಯ್ ನಟಿಸಿದ ತೇರಿ ಸಿನಿಮಾದಲ್ಲಿ ಮಿಂಚಿದ ಹಿರೋಯಿನ್ ಅಂದರೆ ಅದು ಸಮಂತಾ.. ಆ ಸಿನಿಮಾದ ನಂತರ ಪ್ರೇಕ್ಷರಲ್ಲಿ ಬಹಳ ನಿರೀಕ್ಷೆ ಹುಟ್ಟಿಸುವಂತ ಸಿನಿಮಾ ಮಾಡೋಕೆ ಸಮಂತಾ ಕೈ ಹಾಕಿದ್ದಾರೆ ಅಂತ ಸಿನಿಗಲ್ಲಿಯಲ್ಲಿ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸಮಂತಾ ಕೂಡ, ಇತ್ತೀಚೆಗೆ ಬಹಳ ಕ್ಯೂರಿಯಾಸಿಟಿ ಹುಟ್ಟಿಸುವಂತಹ ಮೂವಿ ಮಾಡೋದಕ್ಕೆ ಮುಂದಾಗಿದ್ದಾರೆ. ಅದೇ.. ಶಕುಂಲತಾ ಎನ್ನುವ ಸಿನಿಮಾ..

ಈ ಸಿನಿಮಾ ಸೆಟ್ ನಲ್ಲಿ ಸಮಂತಾ ಕ್ಲಿಕ್ಕಿಸಿದ ಕೆಲ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ನಿರ್ದೇಶಕ ಗುಣಸೇಖರನ್ ಡೆರೆಕ್ಟ್ ಮಾಡ್ತೀರೋ ಶಕುಂತಲಾ ಸಿನಿಮಾಕ್ಕೆ ಸಹಿ ಮಾಡಿದ್ದೀನಿ ಹೊಸವರ್ಷದಂದು ಮಾಹಿತಿ ಶೇರ್ ಮಾಡಿದ್ದರು. ಅಲ್ಲದೇ, ಶಕುಂತಲಾ ಸಿನಿಮಾದ ಪ್ರೀ-ಟೀಸರ್ ರಿಲೀಸ್ ಮಾಡುವುದಕ್ಕು ಸೋಷಿಯಲ್ ಪ್ಲಾಟ್ ಫಾರಂ ಬಳಸಿದ್ದರು, ಇದಕ್ಕೆ ಗುಡ್ ರೆಸ್ಪಾನ್ಸ್ ಕೂಡ ಬಂದಿತ್ತು.

ಇವತ್ತು, ಸಮಂತಾ ತಾವಿದ್ದ ಶೂಟಿಂಗ್ ಪ್ಲೇಸ್ ನ ಕೆಲ ತುಣುಕಗಳನ್ನ ಇನ್ಸ್ಟಾ ದಲ್ಲಿ ಶೇರ್ ಮಾಡಿದ್ದಾರೆ. ಬ್ಯೂಟಿಫುಲ್ ಬಿಳಿ ಸೀರೆಯನ್ನುಟ್ಟು, ಅದಕ್ಕೆ ಮ್ಯಾಚಿಂಗ್ ಆಗುವ ಕಿವಿಯೋಲೆ ಇಟ್ಟುಕೊಂಡು ಶೂಟಿಂಗ್ ಸ್ಪಾಟ್ ನಲ್ಲಿ ಮಿಂಚಿದ್ದಾರೆ. ಇನ್ನು ಈ ಫೋಟೋದಲ್ಲಿ ಸಮಂತಾ ಕೂಡ ತುಂಬಾ ಕ್ಯೂಟ್ ಆಗಿ ಕಾಣ್ತಿದ್ದಾರೆ.. ಇದಷ್ಟೇ ಅಲ್ಲ.. ಸಮಂತ ಅಕ್ಕಿನೇನಿ ಕಾಲಿವುಡ್ ನ ಹಲವು ಸಿನಿಮಾಗಳಿಗೂ ವರ್ಕ್ ಮಾಡ್ತಿದ್ದಾರೆ.

ವಿಘ್ನೇಶ್ ಶಿವನ್ ನಿರ್ದೇಶನದ ‘ಕಾತುವಾಕುಲ ರೆಂಡು ಕಾದಲ್’ ನ ಮೂವಿಗೆ ವರ್ಕ್ ಮಾಡ್ತಿದ್ದು, ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ಲೀಡ್ ರೋಲ್ ನಲ್ಲಿ ಕಾಣಲಿದ್ದಾರೆ. ಜೊತೆಗೆ ಅಶ್ವಿನ್ ಶರವಣನ್ ನಿರ್ದೇಶನ ಮಾಡಲಿರೋ ಹಾರರ್ ಮೂವಿ ಮಾಡೋದಕ್ಕೂ ಸಮಂತಾ ವೈಟ್ ಮಾಡುತ್ತಿದ್ದಾರೆ.  ಸಮಂತಾ ಶೇರ್ ಮಾಡಿರೋ ಫೋಟೋಸ್ ಸಿನಿಮಾ ಸೆಟ್ ಹೇಗಿದೆ, ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತೆ ಎಂಬ ಕುತೂಹಲವನ್ನ ಹೆಚ್ಚು ಮಾಡಿದೆ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಒಂದಾಗ್ತಾರೆ ಹನುಮಂತನ ಪರಮ ಭಕ್ತರು!

Previous article

cinemanodi.in ವೆಬ್ ಸೈಟ್ ಮುಖಾಂತರ ಚಿತ್ರ ವೀಕ್ಷಿಸಬಹುದು!

Next article

You may also like

Comments

Leave a reply

Your email address will not be published. Required fields are marked *

More in cbn