Sambargi Prashanth cinibuzz bigboss kichcha sudeepa chandrachud manju pavagada copy

ಸೆಲೆಬ್ರಿಟಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ಮಾಧ್ಯಮದವರಿಗೆ ಪರಿಚಯವಾಗಿದ್ದವರು ಪ್ರಶಾಂತ್‌ ಸಂಬರ್ಗಿ. ಬಿಗ್‌ ಬಾಸ್‌ ಕಾರ್ಯಕ್ರಮದ ಮೂಲಕ ಈಗ ಎಲ್ಲರಿಗೂ ಗೊತ್ತಿದ್ದಾರೆ. ಆದರೆ, ಯಾರೀತ? ಎಲ್ಲಿಂದ ಬಂದರು? ಪ್ರಶಾಂತ್‌ ಸಂಬರ್ಗಿಯ ಅಸಲೀ ಹಿನ್ನೆಲೆ ಏನು? ಎಂಬುದರ ಬಗ್ಗೆ ಮೀಡಿಯಾದವರು ಸೇರಿದಂತೆ ಯಾರಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್‌ ಒಂದಿಷ್ಟು ವಿವರ ನೀಡಿದ್ದಾರೆ… ಒಂದು ಸಲ ಓದಿಬಿಡಿ ಸಾಕು…!

ಇಂತಹದೊಂದು ವಿವರಣೆ ಬರೆಯದೇ ಹೋದರೆ ಕಲಿತ ಪತ್ರಿಕೋದ್ಯಮಕ್ಕೆ ಅಗೌರವ ಎನ್ನುತ್ತಾ…..

  • ಡಿ ಜೆ ಚಕ್ರವರ್ತಿ ಚಂದ್ರಚೂಡ್

*ಆತನಿಗೆ ಆಗತಾನೇ ರೆಬೆಲ್ ಸ್ಟಾರ್ ಅಂಬರೀಶ್ ಯಾವನೋ ಅವನು ಕಳಿಸೋ ಆಚೆಗೆ ಅವನಿಗೂ ಸಿನಿಮಾ ಇಂಡಸ್ಟ್ರೀಗೂ ಸಂಬಂಧವೇನೂ ಅಂತ ಉಗಿದು ಛೇಂಬರಿನಲ್ಲಿ ನಡೆಯುತ್ತಿದ್ದ ಮೀಟಿಂಗ್ ನಿಂದ ಉಗಿದಟ್ಟಿದ್ದರು. ಅಷ್ಟಾದರೂ ಫಿಲಂ ಛೇಂಬರ್ ನ ಮೆಟ್ಟಿಲ ಮೇಲೇ ನಿಂತು ಒಂದಷ್ಟು ಪ್ರಿಂಟ್ ಔಟ್ ಗಳನ್ನು ಎತ್ತಿ ಹಿಡಿದು ನಟಿ ಶೃತಿ ಹರಿಹರನ್ ಪ್ರಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಮಾಡಲು ವಿದೇಶಿ ಕ್ರೈಸ್ತ ಮಿಷನರಿಗಳಿಂದ ಆಕೆಗೆ ಹರಿದು ಬರುತ್ತಿರುವ ಕೋಟಿ ಕೋಟಿ ರುಪಾಯಿ ಅಮದನಿಯೇ ಕಾರಣ. ದಾಖಲೆ ಇದೆ ಕೊಡ್ತೀನಿ ಅಂದ …. ಮಾಧ್ಯಮಗಳು ಧಗ್ಗ ಧಗ್ಗ ಕುಣಿದವು.

ನಟಿ ಶೃತಿ ಹರಿಹರನ್ ಸೀದಾ ಪೋಲೀಸರಿಗೆ ದೂರಿದಳು. ಹೈಗ್ರೌಂಡ್ ಪೋಲೀಸರೆದರು ಬೆಬ್ಬೆಬ್ಬೆ ಎಂದು ಏನೋ ಸಬೂಬಿನ ಸ್ಟೇಟ್ ಮೆಂಟ್ ಕೊಟ್ಟು ಬಂದ. ಓರ್ವ ನಟಿ ಪ್ರಖ್ಯಾತ ನಟರೋರ್ವರ ವಿರುದ್ಧ ವಿದೇಶಿ ಹಣ ಅದೂ ಕೋಟಿಗಳಲ್ಲಿ ಪಡೆದು ಆರೋಪ ಮಾಡುವುದು ಅದರಲ್ಲಿ ಧರ್ಮವನ್ನ ಎಳೆತರುವ ಸುಳ್ಳೇ ಆರೋಪ ಅಂತಿಂತ ಅವಘಢವಲ್ಲ. ಇದುವರೆಗೂ ಇವನು ಕೈಲಿ ಹಿಡಿದಿದ್ದ ತನ್ನ ಭೂಹಿಡುಕತನದ ಪ್ರಿಂಟ್ ಔಟ್ ಗಳನ್ನ ಯಾವ ಮಾಧ್ಯಮಕ್ಕೂ ಶೃತಿ ಹರಿರಹರನ್ ವಿರುದ್ಧದ ದಾಖಲಾತಿಯೆಂದು ಕೊಡಮಾಡುವ ಗಂಡಸ್ತನ ಮಾಡಿಲ್ಲ…

*ಈಕೆ ಮೀಟೂ ಪ್ರಕರಣದಲ್ಲಿ ಸ್ವಯಂ ಮಾನಹಾನಿ ಮಾಡಿಕೊಂಡು ಸುಳ್ಳಿ ಅನಿಸಿಕೊಂಡಳಾದರೂ ಆಕೆ ನಟಿಸಿದ ನಾತಿ ಚರಾಮಿ ಸಿನಿಮಾ ಗೆದ್ದ ಪರಿ ಈಗ ಇತಿಹಾಸ. ಈ ದಿನಗಳಲ್ಲಿ ಗಡತ್ತಾದ ಹೆಡ್ ಬುಷ್ ಸಿನಿಮಾ ದಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಯಾವ ಪತ್ರಕರ್ತನೂ ಎಲ್ಲಯ್ಯ ವಿದೇಶಿ ಕ್ರೈಸ್ತ ಮಿಷನರಿಗಳ ಕೋಟಿ ಹಣದ ಬಾಬ್ತು… ಆಕಸ್ಮಾತ್ ನಾಡು ಹತ್ತಿ ಉರಿದಿದ್ದರೆ ಯಾರಪ್ಪನ ಹೊಣೆ ಎಂದು ಕೇಳಲಿಲ್ಲ…

*ಮತ್ತೆ ಮಾಧ್ಯಮಗಳು ಧಗ್ಗ ಧಗ್ಗ ಕುಣಿದವು. ನಾನು ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗನೆಂದ. ನನ್ನೆದುರೇ ಸಾಂಬಾರ್ ಕಾಗೆ ಚನ್ನಮ್ಮಾಜಿಯ ಹೆಸರು ಹೇಳಿದಾಗ ತಲೆಗೊಂದು ಮೊಟಕಲಿಲ್ಲ ಅಷ್ಟೇ ಬುದ್ಧಿವಾದ ಹೇಳಿದೆ. ಹಾಗೆಲ್ಲ ದುರ್ಬಳಕೆ ಮಾಡಿಕೋಬೇಡ ಆ ತಾಯಿಯ ಹೆಸರನ್ನು ಎಂದು… ಯಾರಾದರೂ ಪತ್ರಕರ್ತ; ಹಾಗೆ ಐತಿಹಾಸಿಕ ವ್ಯಕ್ತಿಗಳ ನಾಡಿನ ಐಕಾನ್ ಗಳ ಸುಳ್ಳೇ ಸಂಬಂಧ ಹೇಳಿಕೊಂಡು ಓಡಾಡಬಾರದು. ಅದೂ ಆಡಳಿತ ಪಕ್ಷ ಸೇರಲು ಹವಣಿಸಲು ಎಂದು ಕತ್ತಿನ ಪಟ್ಟಿಯ ಕೆಳಗೊಂದು ಕೊಟ್ಟು ಯಾರೂ ಹೇಳಲಿಲ್ಲ…

*ಇನ್ನು ಸಾಮಾಜಿಕ ಕಾರ್ಯಕರ್ತ (ನಿಜವಾದ ಹೋರಾಟಗಾರರಲ್ಲಿ ಕ್ಷಮೆ ಕೇಳಿ ) ನನ್ನ ಮೇಲೆ ವಿಪರೀತ ಕೇಸುಗಳನ್ನು ಹಾಕಲಾಗಿದೆ ಎಂದು ಪೋಸು ಕೊಡುವಾಗಲೇ -ಸಣ್ಣದೊಂದು ಮಾಹಿತಿ ತೆಗೆದರೆ ಈತ ಒಬ್ಬ ನೆಲಹಿಡುಕ. ಅವುಗಳ ಹಳವಂಡದ ಕೇಸುಗಳವು. ಸೋನಿಯಾ ಗಾಂಧಿ ಮತ್ತು ಕುಸುಮಾ ಹನುಮಂತರಾಯರಪ್ಪರೆಂಬ ಕಾಂಗ್ರೆಸ್ ನವರನ್ನ ವಿಧವೆಯರೆಂಬ ಮಟ್ಟಕ್ಕೆ ಸಂವಿಧಾನ ವಿರೋಧಿ ಹೇಳಿಕೆಗಳ ಕಾರಣಕ್ಕೆ ಕಾಂಗ್ರೆಸ್ ನ ಲೀಗಲ್ ಸೆಲ್ ಕೇಸು ಜಡಿದಿದೆ.

ನಂತರ ದೇವನಾಥ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಉಳಿದವುಗಳಲ್ಲೇ ಭೂತಾಯಿಯ ದಲ್ಲಾಳಿ (ಅವನದೇ ಹೇಳಿಕೆ) ತನದ ಕಾರಣದ ಕೇಸುಗಳು.

*ಇವನ ಬಳಿ ಇರುವ ರೇಂಜ್ ರೋವರ್ ಕಾರು ಸಿಸಿಬಿ ಕೇಸು, ಬಿಡಿಎ ರವಿ ಎಂಬಾತ , ದೇವನಾಥ್ ಎಂಬಾತನ ಗೆಳೆತನ -ಇವುಗಳ ಸಣ್ಣ ತನಿಖೆ ಮಾಡಿದಾಗ ತಿಳಿದದ್ದು ತನ್ನ ಹೆಸರಿನ ಲೋನ್ ಪಡೆದು ಕಾರ್ ಕೊಡಿಸಿ ಅದಕ್ಕೂ ಕಮಿಷನ್ ಪಡೆದು ರಾತ್ರೋರಾತ್ರಿ ತನ್ನದೇ ಕಾರೆಂದು ನಂಬಿದ ಸ್ನೇಹಿತನಿಗೇ ವಿಶ್ವಾಸ ದ್ರೋಹ ಮಾಡಿದ ಆಸಾಮಿ ಕಂಡವರ ಬಗ್ಗೆ ಸುಳ್ಳು ಆಸ್ತಿಗಳ ಲೆಕ್ಕ ಕೇಳುತ್ತಾನೆ. ಇವನಿಗಿರುವ ಪ್ರಚಾರದ ತೆವಲಿಗೂ ಮಾಧ್ಯಮಗಳ ಹಸಿವಿಗೂ ಸರಿಯಾದ ಈಡು ಜೋಡು. ಯಾರಾದರೂ ಒಬ್ಬ ಒಬ್ಬೇ ಒಬ್ಬ ಪತ್ರಕರ್ತ ನೀ ಇಷ್ಟೆಲ್ಲ ಮಾಡುವ ಆರೋಪಕ್ಕೆ ಒಂದೇ ಒಂದು ದಾಖಲಾತಿ ಕೊಟ್ಟು ಮಾತನಾಡು. ಮಾಧ್ಯಮಕ್ಕಲ್ಲವಾದರೂ ಸಂಬಂಧಪಟ್ಟ ಇಲಾಖೆಗಳಿಗೇ -ಬೇಡಬಿಡಿ ನ್ಯಾಯಾಧೀಶರುಗಳಿಗೇ ಕೊಡು ನೀ ಗಿಂಡಿ ಮಾಣಿಯಾಗಿರುವ ಸರಕಾರಕ್ಕಾದರೂ ದಾಖಲಾತಿ ಕೊಡು ಆಗ ನಿನ್ನ ಬೈಟ್ ಹಾಕ್ತೀನಿ ಅಂದುಬಿಟ್ಟಿದ್ದರೆ …ಯಪ್ಪೋ ದೊರೆಯೇ ನಿನ್ನಿಂದಲೇ ಜರ್ನಲಿಸಂನ ಆಯತವೇ ನಿಂತಿದೆ ಅಂತ ಉದ್ದುದ್ದ ಕಾಲಿಗೆ ಬಿದ್ದುಬಿಡುತ್ತಿದ್ದೆ. ಅದಿರಲಿ ಇತ್ತ ಸಿಸಿಬಿ ಒಂದು ಹೇಳಿಕೆ ಬಿಡುಗಡೆ ಮಾಡಿದರೆ ಸಾಕು ಈ ಪರಮ ದರಿದ್ರವನ ಬಾಯಿಂದ ಬರುವ ಸುಳ್ಳಾಟ ಕೇಳಲು ಮಾಧ್ಯಮಗಳ ಮೈಕೇ ಹೋಗಿ ನಿಲ್ಲುತ್ತವೆ. ಇತ್ತ ತನಿಖೆಯ ದಿಕ್ಕೇ ತಪ್ಪುತ್ತದೆ…

*ರಾಗಿಣಿ, ಸಂಜನ, ಅನುಶ್ರೀ, ಜಮೀರ್ ಮಹಮದ್ ಮುಂತಾದವರ ಬಗ್ಗೆ ಈತ ಈವರೆಗೂ ಒಂದು ಔನ್ಸಿನ ಮಾಹಿತಿ ಕೊಟ್ಟಿಲ್ಲ. ಪೋಲೀಸರ ಕಾರ್ಯಚರಣೆಯ predictions ಗಳನ್ನ ಹೇಳುವ ಜ್ಯೋತಿಷಿ ಇವನು. ಸಿಸಿಬಿ ಕಛೇರಿಯಿಂದ ಬುಲಾವ್ ಹೋದಾಗ ಇವನು ಹಿಡಿದಿದ್ದ ಫೈಲನ್ನೇ ಝೂಮ್ ಮಾಡಿ ಮಾಡಿ ತೋರಿಸಿದವು ಕ್ಯಾಮರಾಗಳು. ಅರರೆ ಫೇಸ್ ಬುಕ್ ವಾಟ್ಸಪ್ ಸ್ಟೇಟಸ್ ಗಳ ಪ್ರಿಂಟ್ ಔಟ್ ಗಳನ್ನ ನೋಡಿ ಉಗಿದರು ನೋಡಿ; ಇನ್ಸ್ಪೆಕ್ಟರ್ ಸಿರಾಜ್, ಡಿಸಿಪಿ ರವಿಕುಮಾರ್. ಪೋಲಿಸರಿಗೆ ಕೇವಲ ನಾಲ್ಕು ಬಾರಿ ಸುಸ್ಸು ಮಾಡುತ್ತೇನೆಂದು ಸಿಸಿಬಿ ಬಾತ್ ರೂಮ್ ಬಳಸಿ ಬಂದ. ಯಾವ ಪುಟಗೋಸಿ ಮಾಹಿತಿಯೂ ಕೊಡಲಿಲ್ಲ.ಅಷ್ಟಕ್ಕೂ ಡ್ರಗ್ ಜಾಲದ ವಿರುದ್ಧ ಹೋರಾಡುವವರು ಕ್ಯಾಮರಾಗಳ ಮುಂದೆ ಬಂದು ಮಾತನಾಡುವುದಿಲ್ಲ. ಅದು ತುಂಬಾ ಎದೆಯುಳ್ಳವರ ಕೆಲಸ. ಇನ್ನೂ ಯಾರನ್ನಾದರೂ ಪರಿವರ್ತಿಸಿದನಾ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಾನು ರಿ ಹ್ಯಾಬಿಟೇಷನ್ ಮಾಡಿದೆ ಅನ್ನುತ್ತಾನೆ. ಸುದರ್ಶನ ಚಕ್ರವೇ ನಂಬಬೇಕಿದನ್ನ….

*ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು. ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಇವನು ಕನ್ನಡ ವಿರೋಧಿ ಹಿಂದಿ ಹೇರಿಕೆಯ ಹೇಳಿಕೆ ಗಳನ್ನ ನಾವೆಲ್ಲ ನೋಡಿಯೂ ಕೇಳಿಯೂ ಕನ್ನಡಿಗ ಅಂತ ಒಪ್ಪಿಕೊಳ್ಳುವವರ ಎದೆ ಭಾಶೆಯಬಗ್ಗೆ ನನಗಂತೂ ಅನುಮಾನ. ಹಾಳುಬಿದ್ದು ಹೋಗಲಿ ರಾಜಕೀಯ ಕಾರಣಕ್ಕೆ ತಾಯಿಭಾಷೆಯ ಬಲಿಕೊಡುವ ಇಂತಹ ನೆಲಹಿಡುಕರೂ ಇದ್ದಾರೆಂದರೆ, ನೆಟ್ಟಗೆ ಕನ್ನಡದ ಸ್ವರ ವ್ಯಂಜನಗಳ ಪರಿಚಯವಿಲ್ಲ. ನಮ್ಮ ಹಳ್ಳಿಗಾಡಿನ ಹೋರಾಟಗಾರರ ಅ ಕಾರದ ಭಾಶೆಗೂ ಇಂತಹ ಕುತಂತ್ರಿಗಳ ಸೋಗಲಾಡಿಗಳ ಭಾಷಾ ಅಪಭ್ರಂಶಗಳ ಕುತಂತ್ರಕ್ಕೂ ತುಂಬಾ ವ್ಯತ್ಯಾಸಗಳಿವೆ.

*ಇನ್ನು ಇವನಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ. ಎಲ್ಲರ ಮಾತೂ ರೆಕಾರ್ಡ್ ಎಲ್ಲರ ವೀಡಿಯೋ ರೆಕಾರ್ಡೂ…. ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸ್ʼನ ಕ್ವಾರೈಂಟೈನ್ ಸಂದರ್ಭದಲ್ಲಿ ಸ್ಪರ್ಧಿ ಅರವಿಂದ ಸೇರಿದಂತೆ ಹಲವರಿಗೆ ಮಧ್ಯಪಾನದ ಪಾರ್ಟಿಕೊಟ್ಟು (ಚಾನಲ್ ನಿಯಮಾವಳಿ ವಿರೋಧಿಸಿ) ವಿಡಿಯೋ ಮಾಡಿದ. ಸದ್ಯ ನಾನು ಇಂತಹ ಚಾಣಪತ್ರಿಗಳನ್ನ ತುಂಬಾ ನೋಡಿದವನು. ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು, ಹೆಣ್ಣುಮಕ್ಕಳು ಅವನ ರೂಮಿಂದ ಹೋಗುವಂತೆ ಮಾಡಿದೆ. ಆದರೂ ಅರವಿಂದರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದ. ಇವನ ಮಾತ್ರೋಶ್ರೀ ಪುಷ್ಪ ಸಂಬರ್ಗಿ ಅವರ ತಲೆಮೆಲೆ ಕೈಇಟ್ಟು ಹೇಳಲಿ ನಾ ಇಂತಹ ಹಲ್ಕಟ್ ಕೆಲಸ ಮಾಡಲಿಲ್ಲವೆಂದು. ಇಲ್ಲ ತನ್ನ ಮೊಬೈಲ್ ಪೋಲೀಸರ ತನಿಖೆಗೆ ಕೊಡಲಿ. ನಿಜಕ್ಕೂ ಕಲರ್ಸ್ʼನ ಆಯೋಜಕರು ಯಾವ ಪರಿ ಬುದ್ದಿವಾದ ಹೇಳಿ ಈತನಿಗಾಗಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು.

*ಇನ್ನು ಇವನ ಬಿಗ್ ಬಾಸ್ ಕಥೆ ನಾನಲ್ಲದೇ ಮತ್ಯಾರಾದರೂ ಬರೆದಾರಾ. ವೂಟ್ ನವರು ನಾನು ಹೇಳಿದ ಸಮಯದ ಫುಟೇಜ್ ಕೊಟ್ಟರೆ ನನ್ನ ಗೆಳೆಯ ಸಂಚಾರಿ ವಿಜಯ್ ಸಾವಿನ ಕುರಿತು ಈತನಿಗೂ ಗೆಳೆಯನಾಗಿರುವ ಚೇತನ್ ಗೌಡರ ಕುಟುಂಬ ಕಬ್ಬಾಳ್ ಉಮೇಶ್ ಬಗ್ಗೆ ಆಡಿದ ಮಾತು ಹೊರಬಂದು ಬನಶಂಕರಿಯಲ್ಲಿ ಈತನ ಬಣ್ಣ ಕಪ್ಪಾದೀತು. ನಾನಾದರೂ ನಿನ್ನ ಸೆಕ್ಸ್ ಸಿಡಿ ಆಚೆ ಬಂದಿದೆ ಅಂದು ಟಾಸ್ಕ್ ಮಾಡಿದರೆ ಫಾರಿನ್ ಹುಡುಗೀನಾ ಗುರೂ ಅವಳಿಗೆ ಗಂಟೆಗಟ್ಟಲೇ ಐಸ್ ಕ್ರೀಮ್ ಸೇವೆ ಮಾಡಿ ಮಾಡಿ ಸಾಕಾಗಿತ್ತು. ನಾ ಎಲಿಮಿನೇಷನ್ ಕೇಳಲಾ ಅಂತ ಚಡ್ಡಿ ಒಳಗೆ ಇರುವೆ ಬಿಟ್ಟುವಕೊಂಡ (ಸ್ವಯಂವಿಶ್ವಾಸಿ ) ಇವನು.

*ಬಿಗ್ ಬಾಸ್ ಶೋನೂ ಬಿಡಿ ಅದೊಂದು ಮಾಧ್ಯಮದ ಆಟ ಅದನ್ನೂ ಮರೆತು ಬಿಡೋಣ.

ನಾಡಿಗೆ ಈತನ ಕೊಡುಗೆ ಏನು. ರಿಲಯನ್ಸಿನಲ್ಲಿ ಮೊಬೈಲ್ ಮಾರುತ್ತಿದ್ದ ಇವನು ನಿರ್ಮಾಪಕನಾ? ಗೀತ ರಚನೆಕಾರನಾ? ನಟನಾ ನಿರ್ದೇಶಕನಾ… ಅಲ್ಲವೇ ಅಲ್ಲ. ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ಕುತಂತ್ರ ನಡೆಸುತ್ತಿರುವ ಓರ್ವ ನೆಲಹಿಡುಕ.

*ಜೀವನದಲ್ಲಿ ತಪ್ಪೇ ಮಾಡಾದವರು ಇಲ್ಲವೆಂದಲ್ಲ. ಈಗ ನೋಡಿ ಶುಗರ್ ಡ್ಯಾಡಿ ಪುಸ್ತಕ ಅಂತಾನೆ ಜಮೀರ್ʼದಾಯಿತೀಗ ನವೆಂಬರ್ ಒಂದರ ಮಹೂರ್ತಕ್ಕೆ ಆಡಿಯೋ ಬಿಡ್ತೀನಿ ಅಂತಾನೆ. ಮಾಧ್ಯಮಗಳು ಜೊಲ್ಲಿನ ನಾಲಿಗೆಯೊಡ್ಡುತ್ತವೆ. ಹೀಗೆ ತಿಂಗಳಾನುಗಟ್ಟಲೆ ತಾರೀಖು ನೀಡಿ ದಾಖಲೆ ಕೊಡ್ತೀನಿ ಎನ್ನುವ ಕಳ್ಳಾಟದಿಂದ ಆಗುವ ಅನಾಹುತಕ್ಕೆ ಮಾಧ್ಯಮಗಳೂ ಹೊಣೆ. ಇವನ ಬ್ಲಾಕ್ ಮೇಲ್ ತಂತ್ರದಲ್ಲಿ ಈಗ ಅವರೂ ಪಾಲುದಾರರು.

*ಇವನೆಷ್ಟು ಪಾರ್ಟಿಗಳಿಗೆ ಹೋಗಿದ್ದ ಏನು ಸೇವಿಸಿದ್ದ… ಹೇಳುತ್ತಾನಾ? ನಿಜ. ಬಿಜೆಪಿಯವರಿಗಾದರೂ ನಿಯತ್ತಾಗಿದ್ಥನಾ? ವಿಶ್ವ ಹಿಂದೂ ಪರಿಷತ್ʼಗಾದರೂ ಲಾಯಕ್ಕದವನಾ? ತನ್ನ ಜೊತೆಗಿದ್ದ ಹುಡುಗ ಲಿಂಗಾಯಿತನಾದರೂ ಗೌಡ ಎಂದೇ ಹೇಳಿಕೋ ಎನ್ನುವ ಈತ ಬಸವಣ್ಣನ ಬಗ್ಗೆ ಮಾತನಾಡಿದರೆ ವಾಕರಿಕೆ ಅನಿಸುವುದಿಲ್ಲವೇ?

*ಇವನ ಅಪಾರ್ಟ್ ಮೆಂಟ್ʼನ ನಾಲ್ಕನೇ ಐದನೇ ಫ್ಲೋರಿನ ರವಿ ಎಂಬುವವರಿಗೆ ಸೇರಿದ ಫ್ಲಾಟಿನಲಿ ಇವನಾಡುವ ಲೀಲೆಗಳು ಜಗಕೆ ತಿಳಿಯದ ಗುಟ್ಟೇನಲ್ಲ…

*ಇವನ ಸಿಮ್ ಕಾರ್ಡ್ ಮೊಬೈಲ್ ಜಪ್ತಿ ಮಾಡಿ, ಕಾರ್ ಡೀಲರ್ ಹೆಸರಿನ ನಂಬರ್ʼಗಳ ತಲೆಹಿಡುಕರ ಪಟ್ಟಿ ತೆಗೆದರೆ ಇವನ ಪತ್ನಿ ಸಂಗೀತ ಸಂಬರ್ಗಿ ಪಾಪ ಅದು ಹೇಗೆ ಮತ್ತೆ ಇವನ ಮುಖ ನೋಡುತ್ತಾರೋ?

*ಇಂತಹ ವಿಚಾರಹೀನರು, ನೆಲಹಿಡುಕರು ದಲ್ಲಾಳಿ ಹೃದಯದವರು ನಮ್ಮ ಮಾಧ್ಯಮಗಳ ಅಗಾಧ ಹಸಿವಿನ ಆಹಾರಕ್ಕಾಗಿ ನಡೆಯುವ ಅನಾಹುತಗಳಿಗೆ ಸಮಾಜ ಕಂದಾಯ ಕಟ್ಟುತ್ತದೆ.

ಅಂದಹಾಗೆ ರಾಗಿಣಿ, ಸಂಜನಾ ಯಾರದೇ ಡ್ರಗ್ ಕೇಸ್ ನ ಶ್ರೇಯ ಪೋಲಿಸರದ್ದು, ರಾಜ್ಯ ಸರಕಾರದ್ದು.

*ಖ್ಯಾತ ಗಾಯಕ ರಘುಧೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ. ರಘು ವ್ಯಯಕ್ತಿಕ ಜೀವನದ ನೋವು ನಲಿವುಗಳೇನೇ ಇರಲಿ ಇವನ ಆರೋಪವನ್ನ ಧೂಳಂತೆ ಕೊಡವಿಕೊಂಡು ಎದ್ದರು. ಈ ಗಿಂಡಿಮಾಣಿ ರಘು ಅವರನ್ನ ಇನ್ನೋವೇಟಿವ್ ಸಿಟಿಯಲ್ಲಿ ಮಾತಾದರೂ ಆಡಿಸಲು ತುಂಬಾ ಕರುಳು ಸವೆಸಿದರೂ ಪ್ರಯೋಜನವಾಗಲಿಲ್ಲ. ಅಷ್ಟಕ್ಕೂ ಡ್ರಗ್ ಕುರಿತಂತೆ ಪಾಲುದಾರರಿಗೆ ಶಿಕ್ಷೆಯಾಗಲಿ. ಜೊತೆಗೆ ಇಂತಹ ನಕಲಿಗಳ ಮುಖವಾಡ ಬಯಲಾಗಲಿ.

ಅಂದಹಾಗೆ ಇಷ್ಟುದ್ದದ ಲೇಖನದ ಮುಖೇಡಿ ಅಧಮನ ಹೆಸರು ಪ್ರಶಾಂತ್ ಸಂಬರ್ಗಿ. ಅವನಹತ್ತಿರ ಎಂಟು ಕಾರಿವೆಯಂತೆ …ಲೇ ನೆಲಹಿಡುಕ- ಕಳೆದು ಹದಿನೆಂಟು ವರುಷಗಳಿಂದ ಬದುಕಿಸುತ್ತಿರುವ ಎಂಟು ರುಪಾಯಿ ಪೆನ್ನಿದೆ ನನ್ನ ಬಳಿ…

ಇದು ಪ್ರಶಾಂತ್ ಸಂಬರ್ಗಿ ಎಂಬ ಹೇಡಿ ಎದೆಯವನ ಅಸಲಿ ಮುಖ..

ಈ ಕುರಿತಂತೆ ಯಾವ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ

  • ಡಿ ಜೆ ಚಕ್ರವರ್ತಿ ಚಂದ್ರಚೂಡ್

 

ಅಭಿಮಾನಿಯ ತಿಥಿಗೆ ಹೋಗ್ತಾರಾ ದರ್ಶನ್?‌

Previous article

ಪ್ರತಿ ಕ್ಷಣ ಏನಾದ್ರೂ ಹೇಳ್ತಾನೇ ಇರತ್ತೆ…

Next article

You may also like

Comments

Leave a reply

Your email address will not be published.