ಎರಡು ಸಾವಿರದ ಇಸವಿಯ ಆಸು ಪಾಸಿನಲ್ಲಿ ಚಿರಂಜೀವಿ, ಎನ್ ಟಿ ಆರ್ ಇತ್ಯಾದಿ ನಟರ ಜತೆ ರೊಮ್ಯಾನ್ಸ್ ಮಾಡಿದ ಸಮೀರಾ ರೆಡ್ಡಿಯವರನ್ನು ಯಾರು ತಾನೇ ಮರೆಯಲು ಸಾಧ್ಯ. ಈಗ ಅವರು ಮದುವೆಯಾಗಿದ್ದಾರೆ. ಮಗುವೂ ಆಗಲಿದೆ ಆ ವಿಚಾರ ಬಿಡಿ.
ಇತ್ತೀಚಿಗೆ ಸಮೀರಾ ರೆಡ್ಡಿ ತಮ್ಮ ಇನ್ಸ್ ಸ್ಟಾ ಖಾತೆಯಲ್ಲಿ ತನ್ನ ತೂಕ ಇಳಿಕೆಯ ವಿಚಾರವೊಂದನ್ನು ಫೋಸ್ಟ್ ಮಾಡಿದ್ದು, ಅವರು 2015ರಲ್ಲಿ ಎಷ್ಟು ತೂಕವಿದ್ದರು. ಪ್ರಸ್ತುತ ಈಗ ಎಷ್ಟಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಸಮೀರಾ ರೆಡ್ಡಿ 2015ನೇ ಇಸವಿಯಲ್ಲಿ ಬರೋಬ್ಬರಿ 102 ಕೆಜಿ ತೂಗುತ್ತಿದ್ದರಂತೆ. ಅದು ಸಮೀರಾ ಅವರ ಮೊದಲ ಪ್ರಸವದ ಸಂದರ್ಭ. ಹಾಗಿದ್ದರೂ ಆಕೆ ಕುಗ್ಗದೇ ಪಾಸಿಟೀವ್ ಆಗಿಯೇ ಈ ವಿಚಾರವನ್ನು ತೆಗೆದುಕೊಂಡದ್ದು ಉಂಟು. ಅಲ್ಲದೇ ಒಂದು ವರ್ಷದ ಅವಧಿಯವರೆವಿಗೂ ಆಕೆ ತೂಕವನ್ನು ರೆಡ್ಯೂಸ್ ಮಾಡಬೇಕೆನ್ನುವ ಹುಸಾಬರಿಗೂ ಹೋಗಿರಲಿಲ್ಲವಂತೆ. ಎಲ್ಲಿ ತೂಕ ಇಳಿದರೆ ಸಮಸ್ಯೆಗಳಾಗುವುದೆಂಬ ಭಯದಲ್ಲಿದ್ದರಂತೆ ಸಮೀರ.
ಫಿಟ್ ನೆಸ್ ಬಗ್ಗೆ ಮಾತನಾಡುವ, ಜೀರೋ ಫಿಗರ್ ಮೇನ್ ಟೇನ್ ಮಾಡುವ ವಿಚಾರಗಳಲ್ಲಿ ಆಕೆಗೆ ತಲೆ ಹಾಕಲು ಆಸಕ್ತಿ ಅರ್ಹತೆ ಎರಡೂ ಇಲ್ಲದ ಕಾರಣ ಆಕೆ ಬಹುತೇಕ ಸಂದರ್ಭಗಳಲ್ಲಿ ಕಾಣದಂತಾಗಿದ್ದೇ ಹೆಚ್ಚಾಗಿತ್ತು.
102 ಕೆಜಿಯಿಂದ ತೂಕ ಇಳಿಸುವುದಕ್ಕೆ ಸಮೀರಾಗೆ ಎರಡು ವರ್ಷ ತಗುಲಿತ್ತಂತೆ. ತೂಕ ಇಳಿದ ನಂತರವಷ್ಟೇ ಆಕೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆದದ್ದು ಕೂಡ. ಹಾಗಾದ್ರೆ ಸಮೀರಾ ತೂಕ ಇಳಿಸುವುದಕ್ಕೋಸ್ಕರ ವಿದೇಶಕ್ಕೆ ಹೋಗಿ ಸರ್ಜರಿ ಮಾಡಿಸಿಯಾಗಲಿ, ಸ್ಟ್ರಿಕ್ಟ್ ಡಯಟ್ ಮಾಡುವುದಾಗಲಿ ಮಾಡದೇ, ಕೇವಲ ಶ್ರದ್ಧೆಯಿಂದ ವ್ಯಾಯಾಮವನ್ನು ಹಾಗೂ ಯೋಗ, ಪೈಲೆಟ್ ಮತ್ತು ಸ್ಟ್ರೆಂಥ್ ತರಬೇತಿಯನ್ನು ಪಡೆದರಂತೆ.
ಹೀಗೆ ಬರೋಬ್ಬರಿ 102 ಕೆಜಿ ಇದ್ದ ಸಮೀರಾ ಪ್ರಸ್ತುತ 60ಕ್ಕೆ ತೂಕವನ್ನು ಇಳಿಸಿಕೊಂಡಿದ್ದಾರೆ. ತೂಕ ಹೆಚ್ಚಿರುವ ಎಲ್ಲರಿಗೂ ಧೈರ್ಯದಿಂದಿರಿ, ನಿಮಗೆ ಅನುಕೂಲವಾಗುವಂತಹ ಪ್ರಯತ್ನವನ್ನು, ಪ್ರಯೋಗವನ್ನಷ್ಟೇ ಮಾಡಿರಿ. ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿರೆಂದು ಸಲಹೆ ನೀಡುತ್ತಾರೆ ಸಮೀರಾ.