ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ನಟಿ ಸಮೀರಾ ರೆಡ್ಡಿ ಹೊಸದೊಂದು ಸಾಹಸದಿಂದ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ಅಷ್ಟಕ್ಕೂ ನಟಿ ಸಮೀರಾ ರೆಡ್ಡಿ ಮಾಡಿದ್ದಾದರೂ ಏನಪ್ಪಾ ಅಂದ್ರೆ ತುಂಬು ಗರ್ಭಿಣಿಯಾಗಿರುವ ಸಮೀರ ರೆಡ್ಡಿ ಇತ್ತೀಚಿಗಷ್ಟೇ ಕೆಲ ಫೋಟೋಗಳನ್ನು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಸ್ವಿಮ್ ಸೂಟ್ ನಲ್ಲಿರುವ ಫೋಟೋವನ್ನು ಇನ್ ಸ್ಟಾ ಗ್ರಾಂ ನಲ್ಲಿ ಅಪ್ ಲೋಡ್ ಮಾಡಿರುವುದಲ್ಲದೇ, ಬಿಕಿನಿ ತೊಟ್ಟು ಈಜಾಡುತ್ತಿರುವ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.
ಇದು ಬಹುತೇಕರಿಗೆ ಆಶ್ಚರ್ಯವನ್ನುಂಟು ಮಾಡಿದ್ರೆ ಇನ್ನೂ ಕೆಲವರಿಗೆ ಇಂತಹ ಪರಿಸ್ಥಿತಿಯಲ್ಲಿ ಇವೆಲ್ಲವೂ ಅಗತ್ಯವಿತ್ತೇ ಎನ್ನುವಂತಾಗಿದೆ. ಸಮೀರ ರೆಡ್ಡಿ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ವರದನಾಯಕ ಸಿನಿಮಾದಲ್ಲಿ ನಟಿಸಿದ್ದರು. 2014ರಲ್ಲಿ ಅಕ್ಷಯ್ ಎಂಬುವವರನ್ನು ವಿವಾಹವಾಗಿದ್ದು ಗಂಡು ಮಗುವೊಂದರ ತಾಯಿಯೂ ಆಗಿದ್ದರು. ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ಆರು ತಿಂಗಳ ಗರ್ಭಿಣಿಯಾಗಿದ್ದಾರೆ.
No Comment! Be the first one.