ರಕ್ಷಿತ್ ಶೆಟ್ಟಿ ಅದ್ಯಾವ ಘಳಿಗೆಯಲ್ಲಿ ಸಂಯುಕ್ತಾ ಹೆಗ್ಡೆಗೆ ಅವಕಾಶ ಕೊಟ್ಟರೋ ಗೊತ್ತಿಲ್ಲ? ಆ ಘಳಿಗೆಯಿಂದಲೇ ಪಕ್ಕಾ ಕಿರಿಕ್ ಪರ್ವವೊಂದಕ್ಕೆ ಚಾಲನೆ ಸಿಕ್ಕಂತಾಗಿ ಬಿಟ್ಟಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟಿಯಾಗಿ ಅವತರಿಸಿದ ಸಂಯುಕ್ತಾ ಆ ನಂತರ ನಟಿಸಿದ್ದು ಅಷ್ಟರಲ್ಲಿಯೇ ಇದೆ. ಆದರೆ ಆಕೆ ಸೃಷ್ಟಿಸಿರೋ ಕಿರಿಕ್ ಸರಕುಗಳು ಮಾತ್ರ ಕಡಿಮೆಯದ್ದೇನಲ್ಲ!

ಇಂಥಾ ಸಂಯುಕ್ತ ರೈಲ್ವೇ ಟ್ರ್ಯಾಕಿನಲ್ಲಿ ಅಸಹ್ಯದ ಪೋಸಿನ ಫೋಟೋ ತೆಗೆಸಿಕೊಂಡು ಸುದ್ದಿಯಾಗುತ್ತಾಳೆ. ಅದನ್ನೇ ಮೀರಿಸುವ ಭಂಗಿಯಲ್ಲಿ ಅವತರಿಸಿ ಮತ್ತೆ ವಿವಾದವೆಬ್ಬಿಸುತ್ತಾಳೆ. ಅಲ್ಲಿಂದ ಸೀದಾ ಹೋಗಿ ಹಿಂದಿಯ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಸಹ ಸ್ಪರ್ಧಿಗಳಿಂದಲೇ ಕೆಟ್ಟಾ ಕೊಳಕಾಗಿ ಉಗಿಸಿಕೊಂಡು ವಾಪಾಸಾಗುತ್ತಾಳೆ. ಹಾಗೆ ಬಂದು ರಿಲ್ಯಾಕ್ಸ್ ಮೂಡಿನಲ್ಲಿರೋ ಸಂಯುಕ್ತಾ ಬಗ್ಗೆ ಸರಿಯಾದೊಂದು ಬಾಂಬು ಸಿಡಿಸಿದ್ದಾನೆ!

ಸಂಯುಕ್ತಾ ಹೆಗ್ಡೆ ಎಂಬಾಕೆ ಸಕಲ ಚಟಗಳನ್ನೂ ಮೈಗೂಡಿಸಿಕೊಂಡಿರುವವಳು. ಆಕೆಗೆ ಸಿಗರೇಟು ಸೇದೋದರಿಂದ ಹಿಡಿದು ಎಣ್ಣೆ ಹೊಡೆದು, ಗಾಂಜಾ ಸೇದಿ ತೂರಾಡೋವರೆಗೆ ಎಲ್ಲ ಚಟಗಳೂ ಇವೆ. ಸಂಯುಕ್ತಾ ಒಂಥರಾ ಕನ್ನಡದ ಸನ್ನಿ ಲಿಯೋನ್ ಇದ್ದಂತೆ. ಇಂಥವರಿಂದಲೇ ಕನ್ನಡ ಚಿತ್ರ ರಂಗದ ಮಾನ ಹರಾಜಾಗಿದೆ ಅಂತ ನೇರಾ ನೇರ ಫೇಸ್ ಬುಕ್ಕಿನಲ್ಲಿ ಬರೆದುಕೊಂಡವನು ಕೀರ್ತನ್ ಶೆಟ್ಟಿ ಎಂಬಾತ.

ಈ ಹಿಂದೆ ಹುಚ್ಚಾ ವೆಂಕಟ ತನ್ನ ಚಿತ್ರದಲ್ಲಿ ನಟಿಸೋದಾಗಿ ಕಾಸಿಸಿದುಕೊಂಡು ಯಾಮಾರಿಸಿದ್ದಾನೆ ಅಂತ ಲಬೋ ಅಂದಿದ್ದನಲ್ಲಾ? ಆ ಕೀರ್ತನ್ ಶೆಟ್ಟಿಯೇ ಇದೀಗ ಸಂಯುಕ್ತಾ ವಿರುದ್ಧ ಆರೋಪ ಮಾಡಿ ವಿವಾದದ ಕಿಡಿ ಹೊತ್ತಿಸಿದ್ದಾನೆ. ಅಷ್ಟಕ್ಕೂ ಹುಚ್ಚಾ ವೆಂಕಟನ ಮೇಲೆ ಆರೋಪ ಹೊರಿಸಿದ್ದ ಈತ ಯಾರೆಂದೇ ಯಾರಿಗೂ ಗೊತ್ತಿರಲಿಲ್ಲ. ಇದೀಗ ತಾನು ನಿರ್ದೇಶಕ, ಅದ್ಯಾವುದೋ ಮೀಟೂ ಬಗ್ಗೆ ಚಿತ್ರ ಮಾಡುತ್ತಿದ್ದೇನೆ ಅಂತ ಹೇಳಿಕೊಂಡಿರೋ ಕೀರ್ತನ್ ಸಂಯುಕ್ತಾ ವಿರುದ್ಧ ಬಾಂಬೆಸೆದು ಸುದ್ದಿಯಲ್ಲಿದ್ದಾನೆ. ಕೀರ್ತನ್ ಕೂಡಾ ಕೊಂಚ ಲೂಸು ಗಿರಾಕಿಯಂತೆಯೂ, ಸಂಯುಕ್ತಾ ಹೆಗ್ಡೆಯ ಮತ್ತೊಂದು ಅವತಾರದಂತೆಯೂ ಕಾಣಿಸುತ್ತಿರೋದೂ ಸತ್ಯ. ಆದರೆ ಏಕಾಏಕಿ ಈತ ಬಾಂಬು ಉಡಾಯಿಸಿದ್ದರ ಹಿಂದಿರೋ ಅಸಲೀ ಸತ್ಯ ಇನ್ನಷ್ಟೇ ಹೊರ ಬರಬೇಕಿದೆ!

#

CG ARUN

ಗಾಡ್ ಫಾದರ್!

Previous article

ಆಪಲ್ ಕೇಕ್‌ನ ತುಂಬಾ ಗಾಂಧಿನಗರದ ಸಿಹಿ-ಕಹಿ ಸ್ವಾದ!

Next article

You may also like

Comments

Leave a reply

Your email address will not be published. Required fields are marked *