ಆರ್ಟಿಫಿಷಿಯಲ್ ಬದುಕಿನಲ್ಲಿ ಬರೀ ಒತ್ತಡದಲ್ಲಿಯೇ ಜೀವನ ಮಾಡುವ ಮಂದಿ ಎಲ್ಲದ್ದಕ್ಕೂ ಕೊಡುವ ಒಂದೇ ಒಂದು ರೀಜನ್ ಪುರುಸೊತ್ತೇ ಇಲ್ಲ. ಫುಲ್ ಬ್ಯುಸಿ ಅಂತಾನೇ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಇದೇ ಟ್ಯಾಗ್ ಲೈನ್ ಇಟ್ಟುಕೊಂಡು ಹೊಸ ಸಿನಿಮಾನೇ ರೆಡಿಯಾಗುತ್ತಿದೆ. ಹೌದು… ಅರವಿಂದ್ ಕುಪ್ಳೀಕರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಪುಕ್ಸಟ್ಟೆಲೈಫು ಎಂದು ಹೆಸರಿಟ್ಟಿದ್ದಾರೆ.
ಬರಪೂರ ಕಾಮಿಡಿ ಪ್ರೇರಿತ ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಟೈಟಲ್ ಮತ್ತು ಪೋಸ್ಟರ್ ಮೂಲಕ ವಿಭಿನ್ನತೆಯ ಸಂದೇಶವನ್ನು ನೀಡುತ್ತಿರುವ ಪುಕ್ಟಟ್ಟೆ ಲೈಫಿಗೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದು, ವಾಸು ದೀಕ್ಷಿತ್ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ನಾಗರಾಜ್ ಸೌಮ್ಯಾಜೀ ನಿರ್ಮಾಣದಲ್ಲಿ ತಯಾರಾಗುತ್ತಿರುವ ಪುಕ್ಸಟ್ಟೆ ಲೈಫು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲ ಅಂದುಕೊಂಡಂತಾದರೆ ಸದ್ಯದಲ್ಲಿಯೇ ಟೀಸರ್ ರಿಲೀಸ್ ಆಗುವ ಸಾಧ್ಯತೆಯೂ ಇದೆ.