ಕೊಲೆ ಕೇಸಿನಲ್ಲಿ ದರ್ಶನ್ ಜೈಲು ಸೇರುವುದಕ್ಕೂ ಮುಂಚೆ ಮತ್ತು ನಂತರ ಸ್ಯಾಂಡಲ್ವುಡ್ನಲ್ಲಿ ಒಂದಿಷ್ಟು ವಿದ್ಯಮಾನಗಳು ನಡೆದಿವೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸಂಬಂಧ ಮುರಿದುಕೊಂಡಿದ್ದರು. ಯುವ ರಾಜ್ ದಾಂಪತ್ಯದಲ್ಲಿ ಬಿರುಕು ಏರ್ಪಟ್ಟಿತು. ಅದಕ್ಕೆ ಸಪ್ತಮಿಗೌಡ ಕಾರಣ ಎನ್ನುವಂತೆ ಪ್ರಚಾರವಾಯಿತು. ಇದಕ್ಕೂ ಮುಂಚೇನೆ ನಡೆದ ಪ್ರಕರಣವೊಂದು ಇನ್ನೂ ಮೀಡಿಯಾ ಬಾಯಿಗೆ ಬಿದ್ದಂತಿಲ್ಲ.
ಅದು ದಿಲ್ಲಿ ಮೇಡಮ್ ಕೇಸು!
ಸದ್ಯ ಕನ್ನಡ ಚಿತ್ರರಂಗದ ಪುರಾತನ ನಾಯಕನಟಿ ಕುಳ್ಳಿ ಮೇಡಮ್ ಮತ್ತು ಸಿನಿಮಾ ನಿರ್ಮಾಪಕ ಕೆ.ಆರ್.ಗೌಡ ನಡುವಿನ ವಿಚಾರ ಇವತ್ತಿಗೂ ಬೂದಿ ಮುಚ್ಚಿದ ಕೆಂಡದಂತೇ ಇದೆ.
ವಿಚಾರವೆಂದರೆ, ಅದಾಗಲೇ ಮದುವೆಯಾಗಿರುವ ಕೆ.ಆರ್. ಗೌಡ ಮತ್ತು ಕುಳ್ಳಿ ಮೇಡಮ್ ನಡುವೆ ಪ್ರೇಮಾಂಕುರವಾಗಿತ್ತು. ಕೆ.ಆರ್. ಗೌಡನಂತೂ ತನ್ನ ಪತ್ನಿಗೆ ತಲಾಕ್ ಕೊಟ್ಟು ಮೇಡಮ್ ಕುಳ್ಳಿ ಅವರನ್ನು ಪರ್ಮನೆಂಟಾಗಿ ಕಟ್ಟಿಕೊಳ್ಳುವ ಪ್ಲಾನು ಮಾಡಿದ್ದ. ಇಬ್ಬರೂ ರಾಮೇಶ್ವರಂ ಕೆಫೆಯಿಂದ, ಲಡಾಕು, ಲಂಡನ್ ತನಕ ಎಲ್ಲೆಂದರಲ್ಲಿ ಒಟ್ಟೊಟ್ಟಿಗೇ ಓಡಾಡಿಬಿಟ್ಟರು. ಎಲ್ಲವನ್ನೂ ನೋಡೋತನಕ ನೋಡಿದ ಕೆ.ಆರ್.ಗೌಡನ ಮನೆಯವರು ಸ್ವಾಟೆಗೆ ತಿವಿದು, ಸರಿಯಾಗಿ ಗದುಮಿ, ಗದರಿಸಿ ಗೌಡನ ದೊಗಳೆ ಪ್ಯಾಂಟ್ಗೆ ಬೆಲ್ಟು ಹಾಕಿಸಿದರು. ಏಕಾಏಕಿ ಗೌಡನು ತನ್ನ ಸಂಪರ್ಕದಿಂದ ದೂರಾಗಿದ್ದನ್ನು ಕಂಡು ವ್ಯಘ್ರಗೊಂಡ ಕುಳ್ಳಮ್ಮ ಸೀದಾ ಅವನ ಮನೆಬಾಗಿಲಿಗೆ ಹೋಗಿ ಅವಾಜು ಹಾಕಿ ಬಂದಳು. ಯಾವುದಕ್ಕೂ ಸ್ಪಂದಿಸದ ಕೆ.ಆರ್.ಗೌಡನ ಫ್ಯಾಮಿಲಿಯವರು ದಿವ್ಯ ಮೌನವನ್ನು ವಹಿಸಿದರು.
ಮೊದಮೊದಲು ವ್ಯವಹಾರ ಪಾಲುದಾರಿಕೆಯಲ್ಲಿ ಆರಂಭವಾದ ಸ್ನೇಹ ನಂತರ ಅದನ್ನೂ ಮೀರಿ ಮುಂದುವರೆದಿತ್ತು. ಕೆ.ಆರ್. ಗೌಡನಂತೂ ಕುಳ್ಳಿ ಅವರನ್ನು ಕಂಕುಳಲ್ಲಿ ಕೂರಿಸಿಕೊಂಡು ಮೆರೆಸಿಬಿಟ್ಟ. ಸ್ಯಾಂಡಲ್ವುಡ್ಡಲ್ಲಿ ಸೆಕೆಂಡ್ ಇನ್ನಿಂಗ್ಸ್ ಗೆ ಅಣಿಯಾಗಿದ್ದ ಮೇಡಮ್ ಅವರನ್ನು ಇದೇ ಗೌಡ ದಿಕ್ಕು ತಪ್ಪಿಸಿದ್ದ. ʻಇದು ನಿಮ್ಮ ಕಂ ಬ್ಯಾಕ್ ಸಿನಿಮಾ ಆಗಲು ಅರ್ಹವಲ್ಲʼ ಅಂತಾ ಮೇಡಮ್ ನಾಯಕಿಯಾಗಿ ನಟಿಸಬೇಕಿದ್ದ ಒಂದು ಸಿನಿಮಾದಿಂದ ಹೊರಗೆಳೆದುಕೊಂಡ. ಮತ್ತೊಂದು ಚಿತ್ರದಲ್ಲಿ ಅತಿಥಿಯಾಗಿದ್ದ ಕುಳ್ಳಿ ಅವರನ್ನು ಕೆರಳುವಂತೆ ಮಾಡಿ, ಹೊಸ ಹುಡುಗರ ಸಿನಿಮಾಗೆ ಕಾಟ ಕೊಡಿಸಿದ್ದ.
ಇಷ್ಟೆಲ್ಲಾ ಆಗಿ ಕೆ.ಆರ್. ಗೌಡ ಮತ್ತು ಕುಳ್ಳಿ ಮೇಡಮ್ ಸದ್ಯಕ್ಕೆ ಬೇರೆಯಾಗಿದ್ದಾರೆ. ಇದರಿಂದ ಬಾಲಿ ಹೀರೋ ಆಗಿ ನಟಿಸಬೇಕಿದ್ದ ʻಬಾಲಕಾಂಡʼ ಎನ್ನುವ ಸಿನಿಮಾದ ಪಾಲುದಾರಿಕೆಯೂ ಮುರಿದುಬಿದ್ದಿದೆ! ಸದ್ಯಕ್ಕೆ ಈ ಪ್ರಕರಣ ಸದ್ದಡಗಿದಂತೆ ಕಂಡರೂ ಯಾವತ್ತಾದರೂ ದಬುಕ್ಕಂತಾ ಎದ್ದು ನಿಲ್ಲಬಹುದು!
No Comment! Be the first one.