ಸಾಕಷ್ಟು ಹಸಿದ ನಟರಿಗೆ ಅನ್ನವಿಕ್ಕಿ ಸಾಕಿದ ಕೀರ್ತಿ ಸಂದೇಶ್ ನಾಗರಾಜ್ ಅವರದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುದೊಡ್ಡ ಸೆಲೆಬ್ರೆಟಿಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಸಂದೇಶ್ ನಾಗರಾಜ್ ಮದುವೆಯಾಗಿ 50 ವರ್ಷ ಕಳೆದಿದೆಯಂತೆ. ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ದರ್ಶನ್, ಸೃಜನ್ ಲೋಕೇಶ್, ಅಭಿಷೇಕ್ ಅಂಬರೀಶ‍್ ಮತ್ತು ಸಾಕಷ್ಟು ಸೆಲೆಬ್ರೆಟಿಗಳು ಭಾಗಿಯಾಗಿ ಶುಭಾಶಯಗಳನ್ನು ಕೋರಿದ್ದಾರೆ.

ಸದ್ಯ ಸಂದೇಶ್ ನಾಗರಾಜ್ ಅವರ ಮದುವೆ ವಾರ್ಷಿಕೋತ್ಸವದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂದೇಶ್ ನಾಗರಾಜ್ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಸಂದೇಶ್ ನಾಗರಾಜ್ ಪ್ರಿನ್ಸ್, ಐರಾವತ. ಅಮರ್, ಒಡೆಯ ಸೇರಿದಂತೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಹಾಗೂ ಜೆಡಿಎಸ್ ವಿಧಾನಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

 

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪೊಗರು ಪ್ರೋಮೋ ಸಾಂಗ್ ರಿಲೀಸ್!

Previous article

ಕುಮಾರಿ 21 ಎಫ್ ಹೀರೋ ಮದುವೆಯಂತೆ!

Next article

You may also like

Comments

Leave a reply

Your email address will not be published. Required fields are marked *