ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಕರಿಯಪ್ಪನ ಸೊಸೆಯೇ ಸಾಕ್ಷಿ. ಹೌದು ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ಸಂಜನಾ ಆನಂದ್, ಕರಿಯಪ್ಪನ ವಿಕ್ಟರಿಯ ನಂತರ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ಶಿವರಾಜ್ ಕುಮಾರ್ ನಿರ್ಮಾಣದ ಹನಿಮೂನ್ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ಅಜಯ್ ರಾವ್ ನಾಯಕತ್ವದ ಸಿನಿಮಾವೊಂದರಲ್ಲಿಯೂ ಅವಕಾಶವನ್ನು ಪಡೆದಿದ್ದಾರೆ. ಸದ್ಯ ಸುದ್ದಿ ಏನಂದ್ರೆ ನಿನ್ನೆಯಷ್ಟೇ ಮುಹೂರ್ತವನ್ನು ನೆರವೇರಿಸಿಕೊಂಡ ಚಿರಂಜೀವಿ ಸರ್ಜಾ ಹಾಗೂ ಅನಿಲ್ ಮಂಡ್ಯ ಕಾಂಬಿನೇಷನ್ನಿನ ಕ್ಷತ್ರಿಯ ಸಿನಿಮಾಕ್ಕೂ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರಂತೆ. ರಿಯಲ್ ಲೈಫ್ ನಲ್ಲೂ ಇತ್ತೀಚಿಗಷ್ಟೇ ಎಜುಕೇಶನ್ ಮುಗಿಸಿಕೊಂಡಿರುವ ಸಂಜನಾ ಕ್ಷತ್ರಿಯಾ ಸಿನಿಮಾದಲ್ಲಿ ಕಾಲೇಜ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದಿನ ಹಲವು ಪ್ರಾಜೆಕ್ಟ್ಗಳಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಅಭಿನಯಿಸಿದ್ದ ಸಂಜನಾಳಿಗೆ ಸದ್ಯ ವಯಸ್ಸಿಗೆ ತಕ್ಕ ಪಾತ್ರ ಸಿಕ್ಕಿರುವುದು ಸಂತಸವನ್ನು ತಂದಿದೆ.
No Comment! Be the first one.