ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಕೇಸೀಗ ಕಾನೂನು ವ್ಯಾಪ್ತಿಯಲ್ಲಿದೆ. ಹೀಗಿದ್ದರೂ ಶ್ರುತಿಯ ನಡಾವಳಿಗಳ ಮೇಲೆ ಜನಸಾಮಾನ್ಯರಿಗೂ ಅನುಮಾನಗಳಿರೋದು ಸುಳ್ಳಲ್ಲ. ಆದರೆ ಇದೀಗ ಶ್ರುತಿ ಹರಿಹರನ್ ಮತ್ತೋರ್ವ ನಟಿ ಸಂಜನಾ ಗಲ್ರಾಣಿ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾಳೆ!
ದೇಶಾಧ್ಯಂತ ಮೀಟೂ ಹವಾ ಏರಿಕೊಂಡಿರೋದನ್ನು ಗಮನಿಸಿದ್ದ ಸಂಜನಾ ನಂದೂ ಒಂದಿರ್ಲಿ ಎಂಬಂತೆ ಅಖಾಡಕ್ಕಿಳಿದಿದ್ದಳು. ಗಂಡಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸನ ಮೇಲೆ ಧಾರಾಕಾರವಾಗಿ ಆರೋಪಗಳನ್ನೂ ಮಾಡಿದ್ದಳು. ಆದರೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಧ್ಯಸ್ಥಿಕೆಯಲ್ಲಿ ಸಂಜನಾ ತಾನು ಮಾಡಿದ ಆರೋಪವನ್ನು ತಾನೇ ಹಿಂತೆಗೆದುಕೊಂಡಿದ್ದಾಳೆ. ಬಹಿರಂಗವಾಗಿ ಕ್ಷಮೆಯನ್ನೂ ಕೇಳಿದ್ದಾಳೆ.
ಹೀಗೆ ಸಂಜನಾ ಏಕಾಏಕಿ ಮೀಟೂ ಅಖಾಡದಿಂದ ಹಿಂದೆ ಸರಿದು ಕ್ಷಮೆ ಕೇಳಿದ್ದರ ಹಿಂದೇನೋ ಇದೆ ಎಂಬುದು ಶ್ರುತಿಯ ಸಂಶಯವಂತೆ. ಸಂಜನಾ ಯಾವುದೋ ಒತ್ತಡಕ್ಕೊಳಗಾಗಿ ಕ್ಷಮೆ ಯಾಚಿಸಿರಬಹುದು ಎಂಬುದು ಈಕೆಯ ಗುಮಾನಿ!
ಇದೇ ಸಂದರ್ಭದಲ್ಲಿ ಶ್ರುತಿ ತಾನು ಯಾವ ಕಾರಣಕ್ಕೂ ಸಂಜನಾಳಂತೆ ಕಾಂಪ್ರೋಮೈಸ್ ಮಾಡಿಕೊಂಡುಯ ಕ್ಷಮೆ ಕೇಳೋದಿಲ್ಲ ಅಂತಲೂ ಹೇಳಿದ್ದಾಳೆ. ಇತ್ತೀಚೆಗಷ್ಟೇ ನಟೀಮಣಿಯರೆಲ್ಲ ಮಿಸ್ಟರ್ ಸರ್ಜಾ ಪರವಿದ್ದಾರೆ, ನಾನು ಏಕಾಂಗಿಯಾಗಿ ಹೋರಾಡುತ್ತೇನೆ ಅಂತ ಗೋಳಾಡಿದ್ದ ಶ್ರುತಿಗೆ ಸಂಜನಾ ಒಬ್ಬಳು ಜೊತೆಗಾತಿಯಾಗಿದ್ದಳು ಇದೀಗ ಆಕೆಯೂ ಹಿಂದೆ ಸರಿದಿರೋದರಿಂದ ಶ್ರುತಿ ಕಸಿವಿಸಿಗೊಂಡಂತಿದೆ.
#
No Comment! Be the first one.