ಬಾಲಿವುಡ್ ನ ಉದಯೋನ್ಮುಖ ಸಕ್ಸಸ್ ಹಿರೋಯಿನ್ ಮತ್ತು ತಾರಾ ದಂಪತಿ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮುದ್ದಿ ಮಗಳು ಸಾರಾ ಅಲಿ ಖಾನ್. ವಿಶೇಷವೆಂದರೆ ಈಕೆ ಖ್ಯಾತ ಕ್ರಿಕೆಟ್ ಪಟು ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಹಿರಿಯ ನಟಿ ಶರ್ಮಿಳಾ ಠಾಗೋರ್ ಅವರ ಮೊಮ್ಮಗಳು ಕೂಡ. ಸಾರಾ ಅಭಿನಯದ ಕೇದಾರನಾಥ್ ಹಾಗೂ ಸಿಂಬಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಪಡೆದು ಸಾರಾಗೆ ನೇಮು ಫೇಮು ತಂದುಕೊಟ್ಟಿದೆ. ಈ ಮಧ್ಯೆ ಸಾರಾ ಅಲಿ ಖಾನ್ ಅವರ ಲವ್ ಸ್ಟೋರಿಯೂ ಬಾರಿ ಸದ್ದು ಮಾಡುತ್ತಿದ್ದು, ಪಟೌನಿ ಮನೆತನದ ಮೌನಕ್ಕೆ ಬಿ ಟೌನ್ ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದೆ.

ನಟ ಕಾರ್ತಿಕ್ ಆರ್ಯನ್ ಜೊತೆಗೆ ಸಾರಾಗೆ ಅಗತ್ಯಕ್ಕಿಂತ ಹೆಚ್ಚಿನ ಸ್ನೇಹ ಬೆಳೆದಿದೆ. ಅಲ್ಲದೇ ಇವರಿಬ್ಬರು ಜತೆ ಜತೆಯಾಗಿ ಪ್ರೇಮ ಪಕ್ಷಿಗಳಂತೆ ಓಡಾಡುವ ಪ್ರಕರಣಗಳು ಮೊದಲಿಗಿಂತಲೂ ಸದ್ಯ ಹೆಚ್ಚಾಗುತ್ತಲೂ ಇದೆ. ಈ ಮಧ್ಯೆ ಅವರಿಬ್ಬರು ಮದುವೆಯಾಗುತ್ತಾರಾ? ಅದಕ್ಕೆ ಪಟೌನಿ ಫ್ಯಾಮಿಲಿ ಒಪ್ಪಿಗೆ ನೀಡಿದೆ? ಬರೀ ಲೀವಿಂಗ್ ರಿಲೇಷನ್ ಶಿಪ್ ? ಇತ್ಯಾದಿ ಬೇಕಿಲ್ಲದ ಅನುಮಾನಗಳು ಇವರಿಬ್ಬರ ವಿಚಾರದಲ್ಲಿ ಕೇಳಿಬರುತ್ತಲೇ ಇದೆ. ಈತನ್ಮಧ್ಯೆ ಈ ಯಾವುದೇ ಗೊಂದಲಗಳಿಗೂ ಪ್ರತಿಕ್ರಿಯೆ ನೀಡಿದೇ ಪಟೌಡಿ ಫ್ಯಾಮಿಲಿ ಸೈಲೆಂಟ್ ಆಗಿರೋದು ಕೂಡ ಬಿ ಟೌನಿನಲ್ಲಿ ಮತ್ತಷ್ಟು ಗುಸು ಗುಸು ಹೆಚ್ಚಲು ಕಾರಣವಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗಾಳಿಸುದ್ದಿಗೆ ತುಪ್ಪ ಸುರಿದ ಪರಿಣಿತಾ ಚೋಪ್ರಾ!

Previous article

`ಶೈಬ್ಯ’ ಸಿನಿಮಾದ ಚಿತ್ರೀಕರಣ ಪೂರ್ಣ

Next article

You may also like

Comments

Leave a reply

Your email address will not be published. Required fields are marked *