ಎರಡು ಸಿನಿಮಾಗಳಾಗಿ, ಮೂರನೇ ಚಿತ್ರ ರಿಲೀಸಾಗಿರುವ ಸಂದರ್ಭದಲ್ಲೇ ಅಪಾರ ನಿರೀಕ್ಷೆ ಹುಟ್ಟಿಸಿರುವ ನಟ ರಿಷಿ. ಹೊಸ ಥರದ ಪಾತ್ರಗಳನ್ನು ನಿಭಾಯಿಸಲು ಹೀರೋಗಳಿಲ್ಲ ಅನ್ನೋ ಕೊರಗನ್ನು ಸದ್ಯದ ಮಟ್ಟಿಗೆ ನೀಗಿಸಿರುವ ಕಲಾವಿದ. ಇಂಥ ರಿಷಿ ಈಗ ಹ್ಯಾಟ್ರಿಕ್ ಪೂರೈಸುವ ಖುಷಿಯಲ್ಲಿದ್ದಾರೆ. ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ನೋಡಿದವರೆಲ್ಲಾ ರಿಷಿಯ ಪಾತ್ರ ನಿರ್ವಹಿಸಿರುವ ರೀತಿಯನ್ನು ಕೊಂಡಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಿಷಿ ಸಿನಿಬಜ಼್ ಜೊತೆ ಒಂದಿಷ್ಟು ಮಾತಾಡಿದ್ದಾರೆ. ಈ ಸುವರ್ಣಾವಕಾಶವನ್ನು ಮಿಸ್ ಮಾಡದೇ ಓದಿ…

ನಿರೂಪಣೆ: ಸುಮ ಜಿ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಈ ಎರಡೂ ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದ್ದೀರಿ. ಆ ಯಶಸ್ಸಿನ ಫಲವೇ ನಮ್ಮನ್ನು ಈ ರೀತಿಯ ಚಿತ್ರಗಳನ್ನ ಮಾಡೋದಕ್ಕೆ ಪ್ರೋತ್ಸಾಹ ನೀಡಿರೋದು. ಈ ಎರಡೂ ಚಿತ್ರಗಳ ಗೆಲುವು ಬಹಳಷ್ಟು ಹೊಸ ನಿರ್ದೇಶಕರಿಗೆ ಧೈರ್ಯ ತುಂಬಿತ್ತು. ಯಾಕೆಂದರೆ, ಹೊಸಬರಿಗೆ ‘ನಾವೂ ಸಹ ವಿಷಯಾಧಾರಿತ ಸಿನಿಮಾ ಮಾಡಬಹುದು ಅನ್ನೋ ಭರವಸೆ ನೀಡಿದಂತಹ ಸಿನಿಮಾಗಳಿವು. ನನಗೂ ಈ ರೀತಿಯ ಸಿನಿಮಾಗಳು ಇನ್ನೂ ಹೆಚ್ಚು ಮಾಡಬೇಕೆಂಬ ಆಸೆ ಇತ್ತು. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾ ಮಾಡುವಾಗ ಅದರ ಗುಣಮಟ್ಟವನ್ನ ಹೆಚ್ಚು ಮಾಡ್ತಾ ಹೋಗ್ಬೇಕು. ಆಗಲೇ ನಾವು ಹಾಗೂ ಇಂಡಸ್ಟ್ರಿ ಬೆಳವಣಿಗೆ ಕಾಣಲು ಸಾಧ್ಯ.

‘ಸಾರ್ವಜನಿಕರಿಗೆ ಸುವರ್ಣಾವಕಾಶದಂತಾ ಸಿನಿಮಾ ಮಾಡಬೇಕು ಅಂತಾ ನಾನು ಕಾಯುತ್ತಲೇ ಇದ್ದೆ. ಗುಳ್ಟು ಸಿನಿಮಾ ನೋಡಿದಾಗ ಆ ಸಿನಿಮಾವನ್ನು ಶೂಟ್ ಮಾಡಿರುವ ರೀತಿ, ಕಥೆ ಹೇಳಿರುವಂತಹ ರೀತಿ, ನಿರೂಪಣೆ ಎಲ್ಲವೂ ನನಗೆ ಬಹಳ ಇಷ್ಟವಾಗಿತ್ತು. ಇದನ್ನ ನೋಡಿದ ನಂತರ ಎಲ್ಲರೂ ಒಂದು ಹೊಸ ತಂಡ, ನನಗೂ ಸಹ ಈ ವೇವ್ಲೆಂತ್ ಮ್ಯಾಚ್ ಆಗತ್ತೆ ಅನಿಸಿತ್ತು. ಹಾಗಾಗಿ ಈ ತಂಡದ ಜೊತೆ ಕೆಲಸ ಮಾಡಬೇಕು ಅನ್ನೋ ಆಸೆ ಶುರುವಾಯಿತು. ಹೀಗಿದ್ದಾಗ ಒಮ್ಮೆ ಗುಳ್ಟು ತಂಡದಿಂದ ಈ ಚಿತ್ರದ ಅವಕಾಶ ಸಿಕ್ಕಾಗ ನನಗೆ ಬಹಳ ಖುಷಿ ಆಯಿತು. ಅವಕಾಶ ಬಂದಾಗಲೇ ನನಗೆ ವಿತ್ ಸ್ಕ್ರಿಪ್ಟ್ ಬಂದಿತ್ತು. ಇದರಿಂದ ಸ್ಟಾರ್ಟಿಂಗ್ ನಿಂದ ಎಂಡಿಂಗ್ ವರೆಗೂ ನನ್ನ ಪಾತ್ರ ಹೇಗಿರತ್ತೆ ಅನ್ನೋ ಅರಿವಿತ್ತು. ಸ್ಕ್ರಿಪ್ಟ್ ಅನ್ನು ಸುಮಾರು ಐವತ್ತು ಪರ್ಸೆಂಟ್ ಓದುವಾಗಲೇ ಈ ಸಿನಿಮಾ ನೂರು ಪರ್ಸೆಂಟ್ ಮಾಡುತ್ತೇನೆ ಅನ್ನೋ ನಿರ್ಧಾರಕ್ಕೆ ಬಂದಿದ್ದೆ. ಸ್ಟ್ರಿಪ್ಟ್‌ನಲ್ಲಿ ಏನಿತ್ತೋ ಅದಕ್ಕಿಂತ ಹೆಚ್ಚು ಶೂಟಿಂಗ್ ಮಾಡುವಾಗ ಇನ್ನೂ ಚೆನ್ನಾಗಿ ಬರಬೇಕು ಅನ್ನೋ ಪ್ರಯತ್ನ ಎಲ್ಲರೂ ಮಾಡುತ್ತಿದ್ದರು. ಎಲ್ಲಿ ಶೂಟ್ ಮಾಡ್ಬೇಕು ಹೇಗೆ ಮಾಡ್ಬೇಕು ಅನ್ನೋದನ್ನ ಕಂಪ್ಲೀಟ್ ಫೈನಲ್ ಮಾಡಿ ಸೆಟ್‌ಗೆ ಬರ್ತಿದ್ರು. ಸಣ್ಣ ಸಣ್ಣ ವಿಷಯದಲ್ಲೂ ಸಹ ಎಲ್ಲೂ ಕಾಂಪ್ರಮೈಸ್ ಮಾಡ್ಕೊತಿರ್ಲಿಲ್ಲ. ಸಣ್ಣ ಸಣ್ಣ ಪಾತ್ರಕ್ಕೂ ಬಹಳ ಅನುಭವಿ ನಟರೇ ಬೇಕು ಎನ್ನುವ ಮನೋಭಾವ ಇತ್ತು. ನಾನೂ ಸಹ ನನ್ನ ಪಾತ್ರ ಮಾಡುವಾಗ ಹೋಮ್‌ವರ್ಕ್ ಮಾಡ್ಕೊಂಡು ಬರ್ತಿದ್ದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ತಂಡದವರು ಹೋಂವರ್ಕ್ ಮಾಡಿಕೊಂಡಿರ್ತಿದ್ರು. ಇದೂ ಸಹ ನನಗೆ ಬಹಳ ಖುಷಿ ಕೊಡ್ತಿತ್ತು. ಹೀಗೇ ಎಲ್ಲರೂ ಒಂದು ಸಿನಿಮಾ ಮೇಲೆ ಶ್ರಮ ವಹಿಸುತ್ತಿದ್ದಾರೆ ಎಂದಾಗಿ ಇನ್ನೂ ಆ ಸೆಟ್‌ನಲ್ಲಿರುವಂತಹ ಎನರ್ಜಿ ಜಾಸ್ತಿಯಾಗ್ತಿತ್ತು. ಎಲ್ಲರೂ ಯಂಗ್ಸ್ಟರ್ಸ್ ಮತ್ತು ಒಂದೇ ಏಜ್ ಆಗಿದ್ರಿಂದ ಅದೂ ಸಹ ಸಹಾಯವಾಯಿತು ಅನ್ನಿಸುತ್ತೆ. ನನಗೆ ಪ್ರತಿ ಸಿನಿಮಾ ಮಾಡುವಾಗಲೂ ಇದು ನನ್ನ ಮೊದಲನೇ ಸಿನಿಮಾ ಅನ್ನೋ ಭಾವನೆ ಇರುತ್ತೆ, ಹಾಗೇ ಇಡೀ ತಂಡಕ್ಕೂ ಇತ್ತು.

‘ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ನೋಡಿ ಎಲ್ಲೂ ಬೇಸರ ಎನಿಸೋದಿಲ್ಲ, ಎಲ್ಲೂ ನಮ್ಮ ಅಟೆಂಷನ್ ಅನ್ನು ಕಳೆದುಕೊಳ್ಳೋದಿಲ್ಲ. ಮನೆಮಂದಿಯೆಲ್ಲಾ ನೋಡುವಂತಹ ಸಿನಿಮಾ ಇದು. ನಾನು ನನ್ನಜ್ಜಿಯನ್ನ ಈ ಸಿನಿಮಾಗೆ ಕರ‍್ಕೊಂಡು ಹೋಗಬಹುದಾ, ಅಪ್ಪ-ಅಮ್ಮನ್ನ ಕರ‍್ಕೊಂಡು ಹೋಗಬಹುದಾ, ಸ್ನೇಹಿತರೊಂದಿಗೆ ಹೋಗಬಹುದಾ ಅಥವಾ ಮಕ್ಕಳನ್ನ ನೀವು ಹೋಗಿ ಈ ಸಿನಿಮಾ ನೋಡಿ ಅಂತ ಹೇಳ್ಬಹುದಾ, ಎಲ್ಲರಿಗೂ ಹೌದು ಈ ಸಿನಿಮಾ ನೀವು ಹೋಗಿ ನೋಡಿ ಅಂತ ಹೇಳೋ ಕಾನ್ಫಿಡೆನ್ಸ್ ನನ್ನಲ್ಲಿದೆಯಾ ಅಂತ ನಾನು ಪ್ರತಿ ಸಿನಿಮಾವನ್ನ ಆಯ್ಕೆ ಮಾಡುವಾಗ ನನ್ನನ್ನು ನಾನು ಕೇಳಿಕೊಳ್ಳುವ ಪ್ರಶ್ನೆಗಳಿವು. ಖಂಡಿತವಾಗಿ ಹೋಗಿ ನೋಡಿ ಅಂತ ಹೇಳಬಹುದಂತಹ ನೀಟ್ ಫ್ಯಾಮಿಲಿ ಎಂಟಟೈನ್‌ಮೆಂಟ್ ಸಿನಿಮಾ ಇದು. ಒಟ್ಟಾರೆ ‘ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಟಿಸಿರೋದು ನನಗೆ ಬಹಳ ಹೆಮ್ಮೆ ಇದೆ. ಈ ಸಿನಿಮಾ ನಿಮಗೆಲ್ಲ ಬಹಳ ಇಷ್ಟ ಆಗತ್ತೆ. ಇದೇ ವಾರ, ಡಿಸೆಂಬರ್ ೨೦ರಂದು ಚಿತ್ರ ರಿಲೀಸ್ ಆಗಿದೆ. ದಯವಿಟ್ಟು ಎಲ್ಲರೂ ಥಿಯೇಟರ್‌ಗೆ ಬಂದು ನೋಡಿ ನಮ್ಮನ್ನ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

 

CG ARUN

ಪ್ರೇಕ್ಷಕರ ಪಾಲಿಗೆ ಸುವರ್ಣಾವಕಾಶ!

Previous article

ವೇಷಧಾರಿ ಬಗ್ಗೆ ವಿವರಣೆ!  

Next article

You may also like

Comments

Leave a reply

Your email address will not be published. Required fields are marked *