ನೀನಾಸಂ ಸತೀಶ್ ನಟಿಸಿರೋ ಚಂಬಲ್ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಒಂದಷ್ಟು ದಿನದ ಹಿಂದೆಯೇ ಈ ಸಿನಿಮಾ ಟೀಸರ್ ಬಿಡುಗಡೆಯಾಗಲಿದೆ ಅಂತ ಸುದ್ದಿಯಾಗಿತ್ತು. ಅದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆಂಬ ವಿಚಾರವೂ ಹೊರ ಬಿದ್ದಿತ್ತು. ಇದೀಗ ಟೀಸರ್ ಲಾಂಚ್ಗೆ ಅಧಿಕೃತವಾಗಿ ಮುಹೂರ್ತ ನಿಗಧಿಯಾಗಿದೆ!
ಖುದ್ದು ನೀನಾಸಂ ಸತೀಶ್ ಅವರೇ ಈ ವಿಚಾರವನ್ನ ಹೇಳಿಕೊಂಡಿದ್ದಾರೆ. ಇದೇ ತಿಂಗಳ ಮೂವತ್ತೊಂದನೇ ತಾರೀಕು ಗುರುವಾರ ಟೀಸರ್ ಲಾಂಚ್ ಆಗಲಿದೆ. ಇದಕ್ಕೆ ಧ್ವನಿ ನೀಡಿದ್ದ ಪುನೀತ್ ರಾಜ್ ಕುಮಾರ್ ಅವರೇ ಟೀಸರ್ ಅನಾವರಣವನ್ನೂ ಮಾಡಲಿದ್ದಾರೆ. ಆ ದಿನ ಸಂಜೆ ಆರು ಘಂಟೆಗೆ ಸರಿಯಾಗಿ ಚಂಬಲ್ ಟೀಸರ್ ಪ್ರೇಕ್ಷಕರನ್ನ ತಲುಪಲಿದೆ.
ಈಗಾಗಲೇ ಎಲ್ಲರ ಗಮನ ಈ ಚಿತ್ರದತ್ತ ಕೇಂದ್ರೀಕರಿಸಿದೆ. ಅದೇ ಬಿಸಿಯಲ್ಲಿ ಹೊರ ಬರಲು ತಯಾರಾಗಿರೋ ಟೀಸರ್ಗೆ ಪುನೀತ್ ಧ್ವನಿಯಾಗಿದ್ದೇ ಪ್ರಮುಖ ಆಕರ್ಷಣೆಯಾಗಿ ಬಿಂಬಿಸಲ್ಪಟ್ಟಿದೆ. ಜೇಕಬ್ ವರ್ಗೀಸ್ ನಿರ್ದೇಶನದ ಈ ಚಿತ್ರದಲ್ಲಿ ನೀನಾಸಂ ಸತೀಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪವನ್ ಕುಮಾರ್ ಕೂಡಾ ಪ್ರಧಾನ ಪಾತ್ರವನ್ನೇ ನಿರ್ವಹಿಸಿದ್ದಾರೆ. ರೋಜರ್ ನಾರಾಯಣ್ ಕೂಡಾ ನಟಿಸಿರೋ ಈ ಚಿತ್ರದಲ್ಲಿ ಸೋನು ಗೌಡ ನಾಯಕಿಯಾಗಿದ್ದಾರೆ. ಇಪ್ಪತೈದು ಮಂದಿ ರಂಗಭೂಮಿ ಕಲಾವಿದರೂ ನಟಿಸಿರೋದು ಕೂಡಾ ಚಂಬಲ್ನ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿದೆ.
ಪ್ರತಿಭಾವಂತ ನಿರ್ದೇಶಕ ಜೇಕಬ್ ವರ್ಗೀಸ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸವಾರಿ, ಪೃಥ್ವಿ ಮುಂತಾದ ಸಿನಿಮಾಗಳ ಮೂಲಕವೇ ಗೆಲುವು ಕಂಡಿದ್ದ ಅವರು ಹೊಸಾ ಆಲೋಚನೆ, ರಿಯಲಿಸ್ಟಿಕ್ ಕಥೆಗಳಿಗೆ ಹೆಸರಾದವರು. ಜೀಕಬ್ ಚಂಬಲ್ ಚಿತ್ರದಲ್ಲಿ ಎಂಥಾ ಕಮಾಲ್ ಮಾಡಿದ್ದಾರೆಂಬ ಸಣ್ಣ ಸುಳಿವು ಸಿಗಲಿದೆ.
#
No Comment! Be the first one.