ನೀನಾಸಂ ಸತೀಶ್ ಈಗ ಪಕ್ಕದ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಅಯೋಗ್ಯ ಚಿತ್ರದ ಭರಪೂರ ಗೆಲುವಿನೊಂದಿಯೇ ಅವರ ಪಾಲಿಗೆ ಶುಕ್ರ ದೆಸೆಯೂ ಆರಂಭವಾಗಿದೆ. ಇಂಥಾ ಗೆಲುವಿನ ಪ್ರಭೆಯಲ್ಲಿಯೇ ಅವರ ಸಂಭಾವನೆಯಲ್ಲಿಯೂ ಬಹಳಷ್ಟು ಏರುಗತಿ ಕಂಡಿತ್ತು. ಹೀಗಿರುವಾಗಲೇ ಸತೀಶ್ ಎಲ್ಲರೂ ಅಚ್ಚರಿಪಡುವಂಥಾ ಸುದ್ದಿಯೊಂದನ್ನು ಹೊರಹಾಕಿದ್ದಾರೆ!
ಇದು ಅವರು ನಟಿಸುತ್ತಿರೋ ಹೊಸಾ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಯಲ್ಲ. ನೀನಾಸಂ ಸತೀಶ್ ನಿರ್ದೇಶನ ಮಾಡಲಿರೋ ಸಿನಿಮಾವೊಂದರ ಸುದ್ದಿ! ನೀನಾಸಂ ಸತೀಶ್ ಅವರೇ ಹೇಳಿಕೊಂಡಿರೋ ಪ್ರಕಾರ ಅವರು ಹೊಸಾ ವರ್ಷದಲ್ಲಿ ನಿರ್ದೇಶಕರಾಗಿ ಅವತರಿಸಲಿದ್ದಾರೆ. ತುಂಬಾ ದಿನಗಳಿಂದಲೂ ಅವರೊಳಗೆ ಒಂದು ಕಥೆ ಊಟೆ ಹೊಡೆಯುತ್ತಿತ್ತಂತೆ. ಕಡೆಗೂ ಅದಕ್ಕೆ ಅಂತಿಮ ರೂಪುರೇಷೆ ನೀಡಿ ಸತೀಶ್ ತಯಾರಾಗಿದ್ದಾರೆ. ಈ ಕಥೆಯನ್ನು ತಾವೇ ನಿರ್ದೇಶನ ಮಾಡಲೂ ನಿರ್ಧರಿಸಿದ್ದಾರೆ. ಹೊಸಾ ವರ್ಷದ ಆರಂಭದಲ್ಲಿಯೇ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲಿದ್ದಾರೆ.
ನೀನಾಸಂ ಗರಡಿಯಲ್ಲಿ ನಟನೆಯ ಜೊತೆಗೆ ನಿರ್ದೇಶನ ವಿಭಾಗದ ಪಟ್ಟುಗಳನ್ನೂ ಕೂಡಾ ಸತೀಶ್ ಕಲಿತುಕೊಂಡಿದ್ದರು. ನಟನಾಗಬೇಕೆಂಬುದೇ ಅವರ ಗುರಿಯಾಗಿದ್ದರೂ ನಿರ್ದೇಶನದತ್ತ ಆಸಕ್ತಿ ಇದ್ದೇ ಇತ್ತು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಇದೀಗ ನಿರ್ದೇಸಕನಾಗಲು ತಕ್ಕುದಾದ ಕಥೆಯೊಂದು ಹೊಳೆದಿದ್ದರಿಂದ ಸತೀಶ್ ಅದಕ್ಕೆ ತಯಾರಾಗಿದ್ದಾರೆ. ಈವರೆಗೂ ಬರೀ ನಟನಾಗಿದ್ದ ನೀನಾಸಂ ಸತೀಶ್ ನಿರ್ದೇಶಕನಾಗಿಯೂ ಹೊರ ಹೊಮ್ಮೋದಕ್ಕೆ ಕ್ಷಣಗಣನೆ ಶುರುವಾಗಿದೆ.
#
No Comment! Be the first one.