ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಬೇಡಿಕೆ ಹೆಚ್ಚಿಕೊಂಡಿದ್ದು, ಸಂಭಾವನೆ ಏರಿಕೊಂಡಿದ್ದೆಲ್ಲ ಗೊತ್ತೇ ಇದೆ. ಕನ್ನಡದಲ್ಲಿ ತುಂಬಾ ಅವಕಾಶಗಳು ಸರದಿಯಲ್ಲಿ ನಿಂತಿರುವಾಗಲೇ ಸತೀಶ್ ಏಕಾಏಕಿ ತಮಿಳಿಗೆ ಹಾರಿದ್ದಾರೆ. ಈ ಮೂಲಕ ಅವರು ದಕ್ಷಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.
ನೀನಾಸಂ ಸತೀಶ ನಟಿಸಲಿರುವ ತಮಿಳು ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿದಿದೆ. ತಮಿಳು ಚಿತ್ರರಂಗದಲ್ಲಿ ಕ್ರಿಯೇಟಿವ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನೀಶ್ ನಿರ್ದೇಸನ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಪಗೈನಾನುಕು ಅರುಲ್ವೈ ಎಂಬ ಶೀರ್ಷಿಕೆಯನ್ನೂ ನಿಗಧಿ ಮಾಡಲಾಗಿದೆ. ಇಷ್ಟರಲ್ಲಿಯೇ ಸ್ವಿಜರ್ಲೆಂಡಿನಲ್ಲಿ ಅದ್ದೂರಿಯಾಗಿಯೇ ಟೈಟಲ್ ಲಾಂಚ್ ಮಾಡಲೂ ನಿರ್ಧರಿಸಲಾಗಿದೆ.
ಹಾಗೆ ನೋಡಿದರೆ ಈಗೊಂದಷ್ಟು ವರ್ಷಘಗಳ ಹಿಂದೆಯೇ ನೀನಾಸಂ ಸತೀಶ್ ತಮಿಳು ಚಿತ್ರದಲ್ಲಿ ನಟಿಸ ಬೇಕಿತ್ತು. ಲೂಸಿಯಾ ಚಿತ್ರ ತೆರೆ ಕಂಡ ತಿಂಗಳೊಪ್ಪತ್ತಿನಲ್ಲಿಯೇ ಅಂಥಾದ್ದೊಂದು ಸೂಚನೆ ಸಿಕ್ಕಿತ್ತು. ಲೂಸಿಯಾ ಚಿತ್ರವನ್ನು ವೀಕ್ಷಿಸಿದ್ದ ಅನೀಶ್ ನೀನಾಸಂ ನಟನೆಯನ್ನು ಮೆಚ್ಚಿಕೊಂಡಿದ್ದರು. ಬಳಿಕ ಸತೀಶ್ರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದರು. ಆ ಬಳಿಕ ಇವರ ನಡುವಲ್ಲೊಂದು ಸ್ನೇಹ ಮೂಡಿಕೊಂಡಿತ್ತು.
ಹೀಗೆ ಸತೀಶ್ಗೆ ಗೆಳೆಯನಾಗಿದ್ದ ಅನೀಶ್ ಈಗ್ಗೆ ಮೂರು ವರ್ಷಗಳಿಂದಲೂ ಈ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಕಡೆಗೂ ಅದೀಗ ಸಾಕಾರಗೊಂಡಿದೆ. ಈ ಚಿತ್ರದ ಬಗ್ಗೆ ಅನೀಶ್ ಅವರೇ ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಟೈಟಲ್ ಲಾಂಚ್ ಆದ ತಕ್ಷಣವೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.
#
No Comment! Be the first one.