ನಟ ಅಮಿತಾಬ್ ಬಚ್ಚನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಸತ್ತೇ ಪೆ ಸತ್ತಾ ರಿಮೇಕ್ ಸಿನಿಮಾ ಸದ್ಯ ಹೆಚ್ಚು ಚಾಲ್ತಿಯಲ್ಲಿದೆ. ಈ ಚಿತ್ರವು ಮತ್ತೆ ರಿಮೇಕ್ ಆಗುತ್ತಿದ್ದು, ಅಮಿತಾಬ್ ಬಚ್ಚನ್ ಮಾಡಿದ್ದ ಪಾತ್ರವನ್ನು ಮಾಡಲು ಅಜಯ್ ದೇವಗನ್ ಅವರನ್ನು ಕೇಳಿಕೊಳ್ಳಲಾಗಿತ್ತಂತೆ. ಆದರೆ ಅಜಯ್ ದೇವಗನ್ ಅಮಿತಾಬ್ ಬಚ್ಚನ್ ಜೊತೆ ಬಹಳ ಆತ್ಮೀಯರಾಗಿದ್ದು, ಅತಿಯಾದ ಗೌರವ ಮತ್ತು ಪ್ರೀತಿ ಕೂಡ.

ಈ ರಿಮೇಕ್ ಸಿನಿಮಾದಲ್ಲಿ ನಟಿಸಿದರೆ ತಮ್ಮ ಸಂಬಂಧಕ್ಕೆ ಧಕ್ಕೆ ಆಗಬಹುದೆಂಬ ಕಾರಣವೊಡ್ಡಿ ಅಜಯ್ ದೇವಗನ್ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.  ಸದ್ಯ ಇದೇ ಪಾತ್ರವನ್ನು ಮಾಡಲು ಹೃತಿಕ್ ರೋಷನ್ ಗ್ರೀನ್ ಸಿಗ್ನಲ್ ನೀಡಿದ್ದು, ಅಜಯ್ ದೇವಗನ್ ಅವರು ನಿರಾಕರಿಸಿದ್ದರಿಂದ ಈ ಸವಾಲಿನ ಪಾತ್ರದ ಅವಕಾಶ ಹೃತಿಕ್ ಪಾಲಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಉಪೇಂದ್ರ ಜತೆ ಶಶಾಂಕ್ ಸಿನಿಮಾ!

Previous article

ನಾಕುಮುಖ ಟ್ರೇಲರ್ ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *