ರಾಜಕುಮಾರ್ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದರಾಮ್ ಯಶಸ್ವೀ ಜೋಡಿ ಅನ್ನಿಸಿಕೊಂಡಿದ್ದಾರೆ. ಇದೇ ಜೋಡಿ ಯುವರತ್ನ ಅನ್ನೋ ಮತ್ತೊಂದು ಸಿನಿಮಾ ಮೂಲಕ ಮತ್ತೆ ಇಒಂದಾಗಿರೋದು ಗೊತ್ತೇ ಇದೆ. ಆದರೆ ಶೀರ್ಷಿಕೆ ಅನಾವರಣಗೊಂಡು ತಿಂಗಳು ಕಳೆದರೂ ಸುದ್ದಿಯಿಲ್ಲದ ಕಾರಣ ಪುನೀತ್ ಅಭಿಮಾನಿಗಳು ಕೊಂಚ ಕಸಿವಿಸಿ ಅನುಭವಿಸಿದ್ದರು.
ಆದರೀಗ ಈ ಸಿನಿಮಾಗೆ ನಾಯಕಿಯ ಆಗಮನದ ಸುದ್ದಿ ಹೊರ ಬೀಳೋ ಮೂಲಕ ಯುವರತ್ನಕ್ಕೆ ಮತ್ತೆ ಹೊಳಪು ಸಿಕ್ಕಿದೆ! ಯುವರತ್ನದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಯೇಶಾ ಸೈಗಲ್ ನಾಯಕಿಯಾಗಿ ನಟಿಸೋದು ಬಹುತೇಕ ಖಚಿತಗೊಂಡಂತಿದೆ. ಈಗಾಗಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿರೋ ಈಕೆ ಬಾಲಿವುಡ್ ನ ಖ್ಯಾತ ನಟ ಸುಮಿತ್ ಸೈಗಲ್ ಮಗಳು. ತೆಲುಗು ಚಿತ್ರದ ಮೂಲಕ ದಕ್ಷಿಣದತ್ತ ಮುಖ ಮಾಡಿದ್ದ ಸಯೇಶಾ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಹೊಳಪುಕೆನ್ನೆಯ ಚೆಲುವೆ.
ಎಲ್ಲಾ ಪ್ರಾಕಾರಗಳ ನೃತ್ಯದಲ್ಲಿಯೂ ಪಾರಂಗತೆಯಾಗಿರೋ ಸಯೇಶಾಗೆ ನಟನೆ ರಕ್ತಗತವಾಗಿ ಬಂದಿರೋ ಬಳುವಳಿ. ಇಂಥಾ ಸಯೇಶಾ ಇದೀಗ ಯುವ ರತ್ನ ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡೋ ಲಕ್ಷಣಗಳಿವೆ. ಈಗಾಗಲೇ ಸಯೇಶಾ ಜೊತೆ ಸಂತೋಷ್ ಆನಂದ್ ರಾಮನ್ ಮಾತುಕತೆ ನಡಿಸಿದ್ದಾರಂತೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಸುದ್ದಿ ಹೊರ ಬೀಳಲಿದೆ.
#