ಈ ಜೋಡಿ ಅ ಪರಾಧ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಇದೇ ವಿಶಾಖ ಮ ರ್ಡರ್ ಕೇಸಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ಹೊರಬಂದಮೇಲೂ ಚಾಳಿ ಮುಂದುವರೆಸಿದ ಈತ ತನ್ನ ಜೊತೆಗಾತಿಯೊಂದಿಗೆ ಸೇರಿ ಬಟ್ಟಿ ಸಾರಾಯಿ ಸೇಲ್ಸ್ ಶುರುಮಾಡಿದ್ದ.

ಕರೋನಾ ವೈರಸ್ಸು ಎಲ್ಲಿ ಲಾಟುಲಾಟು ಹೆಣ ಉದುರಿಸುತ್ತದೋ ಅನ್ನೋ ಭಯದಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಅನೌನ್ಸ್ ಮಾಡಿದ್ದೇ ಬಂತು, ಜನ ಸಿಕ್ಕಿದ್ದೇ ಛಾನ್ಸು ಅಂತಾ ಮಾಡಬಾರದ್ದು ಮಾಡಲು ಶುರು ಮಾಡಿದರು.

ಕೇರಳದ ಟೀವಿ ಸೀರಿಯಲ್ ಮತ್ತು ರಂಗಭೂಮಿ ನಟಿ ಮಂಜು ಸಿನಿ ಎಂಬಾಕೆ ತನ್ನ ನಾಲ್ಕನೇ ಗಂಡನ ಜೊತೆ ಸೇರಿ ಕಳ್ಳಬಟ್ಟಿ ತಯಾರಿಸುವ ಕಾಯಕಕ್ಕೆ ಇಳಿದಿದ್ದಳು. ಕಳೆದ  ಒಂದೂವರೆ ತಿಂಗಳಲ್ಲಿ ಈಕೆ ಸಾವಿರಾರು ಲೀಟರು ಕಳ್ಳಬಟ್ಟಿ ಸಾರಾಯಿ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದಾಳಂತೆ. ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ ಸಿನಿ ಮತ್ತು ಆಕೆಯ ಗಂಡ ವಿಶಾಖ ಎಂಬಾತನನ್ನು ಬಂಧಿಸಿ ಸರಿಸುಮಾರು ನಾನ್ನೂರು ಲೀಟರ್ ಸಾರಾಯಿ ಮತ್ತು ಅದನ್ನು ತಯಾರಿಸಲು ಬಳಸಲಾಗುತ್ತಿದ್ದ ಅನಾಹುತಕಾರಿ ದ್ರವಗಳನ್ನು ವಶಪಡಿಸಿಕೊಂಡಿದ್ದಾರೆ. ಬಟ್ಟೆ ಶುಚಿ ಮಾಡಲು ಬಳಸುವ ಸೋಪ್ ಆಯಿಲ್, ಜೈವಿಕ ತ್ಯಾಜ್ಯಗಳನ್ನು ಸಾರಾಯಿ ತಯಾರಿಕೆಗೆ ಈಕೆ ಬಳಸುತ್ತಿದ್ದಳಂತೆ.

ಇಷ್ಟಕ್ಕೂ ಈ ಜೋಡಿ ಅಪರಾ ಧ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಇದೇ ವಿಶಾಖ ಜೀವ ತೆಗೆದ ಕೇಸಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ಹೊರಬಂದಮೇಲೂ ಚಾಳಿಮುಂದುವರೆಸಿದ ಈತ ತನ್ನ ಜೊತೆಗಾತಿಯೊಂದಿಗೆ ಸೇರಿ ಬಟ್ಟಿ ಸಾರಾಯಿ ಸೇಲ್ಸ್ ಶುರುಮಾಡಿದ್ದ. ಕೇರಳದಲ್ಲೂ ಅತ್ಯಧಿಕ ಸಂಖ್ಯೆಯ ಕುಡುಕರಿದ್ದು, ಲಾಕ್ ಡೌನ್ ಟೈಮಲ್ಲಿ ಎಣ್ಣೆ ಸಿಗದೆ ಕಂಗಾಲಾಗಿದ್ದರು. ನಶೆಯೇರುತ್ತದೆ ಅಂತಾ ವಿಷ ಕೊಟ್ಟರೂ ಕುಡಿದುಬಿಡುವಷ್ಟು ಧಾವಂತ ಕುಡುಕರಲ್ಲಿತ್ತು. ಎಣ್ಣೆಗಿರಾಕಿಗಳ  ಹಾಹಾಕಾರವನ್ನೇ ಈ ನಟೀಮಣಿ ಬಂಡವಾಳ ಮಾಡಿಕೊಂಡಿದ್ದಾಳೆ. ಏನೆಲ್ಲಾ ಸುರಿದು ಇದನ್ನು ತಯಾರಿಸಿದ್ದರೋ? ಅದೆಷ್ಟು ಜನರ ಜೀವಗಳನ್ನು ಡ್ಯಾಮೇಜ್ ಮಾಡಿದ್ದಾರೋ ಗೊತ್ತಿಲ್ಲ. ಸದ್ಯ ತಿರುವನಂತಪುರ ಪೊಲೀಸರು ಈ ಖತರ್ ನಾಕ್ ಜೋಡಿಯನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ!

CG ARUN

ಹೀಗಿತ್ತು ಮೈಕಲ್‌ ಮಧು ಲೈಫು!

Previous article

ಐವತ್ತೇಳು ಮಿಲಿಯನ್ ವೀಕ್ಷಣೆ ಪಡೆದಿರುವ ಹಾಡು ಅರ್ಧ ಘಂಟೆಯಲ್ಲಿ ಸೃಷ್ಟಿಯಾಗಿತ್ತು!

Next article

You may also like

Comments

Leave a reply

Your email address will not be published. Required fields are marked *