ಶೋಕಿವಾಲ ಕನ್ನಡ ಮತ್ತು ತೆಲುಗು ಸಾಂಗ್ ರೆಕಾರ್ಡಿಂಗ್ ಕೆಲಸ ಮುಕ್ತಾಯ. ಅಗಸ್ಟ್ 20 ವರಮಹಾಲಕ್ಷೀ ಹಬ್ಬಕ್ಕೆ ಮೊದಲ ಹಾಡು ಬಿಡುಗಡೆ….
ಹಾಡಿನ ಬಗ್ಗೆ : ಮೊದಲ ಬಾರಿಗೆ ಕನ್ನಡದಲ್ಲಿ ಅನ್ವೇಷ ಹಾಡನ್ನು ಹಾಡಿರುವುದು ವಿಶೇಷವಾಗಿದೆ… ಜಯಂತ್ ಕಾಯ್ಕಿಣಿ ರವರು ಬರೆದಿರುವ ಹಾಡನ್ನು ಹಿಂದಿ ಸಿನಿಮಾ “ಪ್ರೇಮ್ ರತನ್ ದನ್ ಪಾಯೋ” ಸಿನಿಮಾದ ಸಿಂಗರ್ “ಅನ್ವೇಷ” ನಮ್ಮ ಚಿತ್ರಕ್ಕೆ ಹಾಡಿರುವುದು ತುಂಬಾ ಖುಷಿಯಾಗಿದೆ… ಹಾಡುಕೂಡ ಅದ್ಬುತವಾಗಿ ಬಂದಿದೆ ಎಂದು ಎಲ್ಲರು ಮೆಚ್ಚುಗೆ ತಿಳಿಸಿದ್ದಾರೆ…. ಇದೆ ಹಾಡನ್ನು ತೆಲುಗಿಗೆ ಕನ್ನಡದ ಸಿಂಗರ್ ಆದ ಶ್ವೇತ ದೇವನಹಳ್ಳಿ ಯವರು ಹಾಡಿದ್ದಾರೆ… ಕನ್ನಡ ಮತ್ತು ತೆಲುಗು Male Version ಸಂತೋಷ್ ವೆಂಕಿ ಹಾಡಿದ್ದಾರೆ, ಕನ್ನಡದ ಪ್ರತಿಭೆಗಳಿಗೆ ಬೇರೆ ಭಾಷೆಯ ಹಾಡನ್ನು ಹಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ.
ಈ ತೆಲುಗಿನ ಹಾಡನ್ನು ಗೌಸ್ಪಿರ್ ರವರು ಬರೆದಿದ್ದು ತುಂಬಾ ಚೆನ್ನಾಗಿ ಬಂದಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಂದಿನ ಹಾಡುಗಳ ಬಗ್ಗೆ ಮಾಹಿತಿ ನೀಡುತ್ತಾ ಬರುತ್ತೆವೆ… ಎಂದು ನಿರ್ಮಾಪಕ ಡಾ. T.R.ಚಂದ್ರಶೇಖರ್ ಹಾಗೂ ನಿರ್ದೇಶಕ ಜಾಕಿ ತಿಳಿಸಿದ್ದಾರೆ. ಆಗಷ್ಟ್ 20 ಕ್ಕೆ ಮೊದಲ ಹಾಡಿನ ಲೀರಿಕಲ್ ವೀಡಿಯೋ ಬಿಡುವುದಾಗಿ ತಿಳಿಸಿದ್ದಾರೆ. ಶ್ರೀಧರ್.ವಿ.ಸಂಭ್ರಮ್ ಸಂಗೀತ ಮೋಡಿ ಮಾಡಲಿರುವ ಮೇಲೋಡಿ ಸಾಂಗ್ ಇದಾಗಿದೆ. ಈ ಹಾಡನ್ನು ಕ್ರಿಸ್ಟಲ್ ಮ್ಯೂಸಿಕ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಇವತ್ತಿಗೆ ನನ್ನ ಮೊದಲ ನಿರ್ದೇಶನದ ಶೋಕಿವಾಲ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಲಾಕ್ ಡೌನ್ ನಡುವೆ ಬೇರೆ ಕೆಲಸಗಳು ಮುಗಿದಿದ್ದು ತೆಲುಗುಗೆ ಡಬ್ ಮಾಡುವ ಅವಕಾಶ ಬಂದಿದ್ದು ತುಂಬಾ ಖುಷಿಯ ವಿಚಾರ… ಈಗ ತೆಲುಗು ಹಾಡುಗಳ ರೆಕಾರ್ಡಿಂಗ್ ಮುಗಿದ್ದಿದ್ದು… ತುಂಬ ಖುಷಿಯಾಗಿದ್ದೇನೆ .. ನನಗೆ ಅವಕಾಶ ಕೊಟ್ಟ ಡಾ. T.R. ಚಂದ್ರಶೇಖರ್, ಕಿಶೋರ್ ಸರ್ ಗೆ ತುಂಬಾ ಧನ್ಯವಾದಗಳು . ಸದಾ ಜೊತೆಗಿದ್ದು ಸಹಕರಿಸಿದ ಬಾಲಣ್ಣ, ಹೇಮಂತ್ ಅಣ್ಣ ಹಾಗೂ ನನ್ನ ಡೈರೆಕ್ಷನ್ ಟೀಮ್ ಹಾಗೂ ತಂಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್ ಗೆ ಇತರ ಸಿನಿಮಾ ಮೊದಲ ತರ ವಾಗಿದ್ದು ಇಬ್ಬರೂ ಚೆನ್ನಾಗಿ ನಟಿಸಿದ್ದಾರೆ . ಇಬ್ಬರು ಖುಷಿಯಲ್ಲಿರುವುದೆ ನನಗೆ ಖುಷಿ ಇದೆ. ಇನ್ನು ಶರತ್ ಲೋಹಿತಾಶ್ವ , ಗಿರಿ , ತಬಲಾ ನಾಣಿ , ಮುನಿರಾಜ್, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ . ನಿರ್ಮಾಪಕರಿಗೆ ನಾನು ಎಲ್ಲರ ಪ್ರೀತಿಗೆ ನಾನು ಋಣಿ.
ಇದುವರೆಗೆ ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿ ತರ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಅಲ್ಲಿನ ಜನರೆಲ್ಲ ತುಂಬಾ ಸಹಕರಿಸಿದ್ದಾರೆ . ಕೊನೆಯ ಭಾಗದ ಚಿತ್ರೀಕರಣವನ್ನು ಮದ್ದೂರಿನ ಬಳಿ ತೈಲೂರಿನಲ್ಲಿ ಮುಗಿಸುತ್ತಾ ಅದೇ ಜಾಗದಲ್ಲಿ ಕುಂಬಳಕಾಯಿ ಹೊಡೆದಿದ್ದೇವೆ. ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯ ಶೋಕಿವಾಲನಿಗಿದೆ. ನವೀನ್ ಕುಮಾರ್.ಎಸ್ ಕ್ಯಾಮೆರಾಮೆನ್, ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.. ಎಲ್ಲಾ ಅಂದುಕೊಂಡಂತೆ ಆದರೆ ದಸರಾಗೆ ಶೋಕಿವಾಲನ ದರ್ಶನವಾಗಲಿದೆ …