ಸುಪ್ರೀಂ ಕೋರ್ಟ್ ಅಯ್ಯಪ್ಪ ಸ್ವಾಮಿ ದೇವಳದ ಬಗ್ಗೆ ನೀಡಿರೋ ತೀರ್ಪೊಂದು ಈಗ ವಿವಾದದ ಕೇಂದ್ರರ ಬಿಂದುವಾಗಿದೆ. ಒಂದು ವಲಯದ ಮಂದಿಯನ್ನು, ಸಂಘಟನೆಗಳನ್ನು ಕೆರಳಿಸಿದೆ. ದೇವಳದೊಳಗೆ ಮಹಿಳೆಯರೇನಾದರೂ ಪ್ರವೇಶ ಮಾಡಿದರೆ ಎಲ್ಲ ಧಾರ್ಮಿಕ ವಿಧಿ ವಿಧಾನದಿಂದ ದೂರವಿರೋದಾಗಿ ಪಂದಳ ಮನೆತನದ ಮಂದಿಯೂ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲದರ ನಡುವೆಯೂ ಅಯ್ಯಪ್ಪನ ಮಾಲೆ ಧರಿಸಿ ಪೊಲೀಸ್ ಭದ್ರತೆಯೊಂದಿಗೆ ದೇವಸ್ಥಾನಕ್ಕೆ ಪ್ರವೇಶ ಮಾಡದವಳು ರೆಹಾನಾ ಫಾತಿಮಾ!
cinibuzzಅನ್ನು ಇನಸ್ ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ
https://www.instagram.com/cinibuzzsandalwood/?fbclid=IwAR2Y-mLeHQy5S4BVSEErCUaOzCJf6y9DFpJUAkQqrVIX0NhgN75gxHQcQ_0
ಈಕೆ ವರ್ಷಾಂತಗಳ ಹಿಂದೆ ಕೇರಳದಲ್ಲಿ ಕಿಸ್ ಆಫ್ ಲವ್ ಮೂಲಕ ವಿವಾದ ಎಬ್ಬಿಸಿದ್ದವಳು. ಅಯ್ಯಪ್ಪನ ದರ್ಶನ ಮಾಡಿ ಮಾಲೆ ಧರಿಸಿಕೊಂಡ ಮಾದಕ ಪೋಜಿನ ಫೋಟೋ ಒಂದನ್ನೀಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾಳೆ. ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರೋ ಜಗ್ಗೇಶ್ ವಿನಾಶ ಕಾಲೇ ವಿಪರೀತ ಬುದ್ಧಿ ಅಂದಿದ್ದಾರೆ.
`ಅನ್ಯಧರ್ಮಿಯಳು ಈ ಅವತಾರದಲ್ಲಿ ಪೊಲೀಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನ ಸಾಧಿಸಿ ಬಣ್ಣದ ವೇಶ ತೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಫೋಟೋ ಇದು… ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿ ಪೆಟ್ಟಲ್ಲವೇ. ವಿನಾಶ ಕಾಲೇ ವಿಪರೀತ ಬುದ್ಧಿ. ಇಂಥವರ ಸಂತೈಸಿ ವಿಕೃತ ಆನಂದ ಪಡೆಯುತ್ತಿರುವ ಕೇರಳ ಸರ್ಕಾರ. ಬ್ರಿಷೀಷರು ಮತ್ತು ಮೊಘಲ್ಗಳಿಗೆ ಬಗ್ಗದ ಹಿಂದೂ ಧರ್ಮ ಇಂಥವರಿಗಾ? ಜೈ ಹಿಂದ್…’ ಅಂತ ರೆಹಾನಾ ಫಾತಿಮಾ ವಿರುದ್ಧ ಜಗ್ಗಣ್ಣ ಸಮರ ಸಾರಿದ್ದಾರೆ.
ರೆಹಾನಾ ಫಾತಿಮಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿರೋ ಫೋಟೋ ಬಗ್ಗೆಯಂತೂ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅಯ್ಯಪ್ಪ ಮಾಲೆ ಧರಿಸಿ, ಕಪ್ಪು ಲುಂಗಿಯನ್ನು ಆದಷ್ಟು ಮೇಲಕ್ಕೆ ಸರಿಸಿ ಫಾತಿಮಾ ಫೋಟೋ ತೆಗೆಸಿಕೊಂಡಿದ್ದಾಳೆ. ಸುಪ್ರೀಂ ಕೋರ್ಟು ಮಹಿಳೆಯರಿಗೆ ದೇವಳ ಪ್ರವೇಶ ಮಾಡುವಂತೆ ತೀರ್ಪು ನೀಡಿದ್ದಿರ ಬಹುದು. ಆದರೆ ಕಾಲಾಂತರಗಳಿಂದ ನಡೆಸಿಕೊಂಡು ಬಂದ ನಂಬಿಕೆ, ಸಂಪ್ರದಾಯಗಳನ್ನು ಧಿಕ್ಕರಿಸಿ ಅಂತ ಹೇಳಿಲ್ಲ. ಫಾತಿಮಾಳ ಅವತಾರ ಅಂಥಾ ನಂಬಿಕೆಗಳನ್ನೇ ಅಣಕಿಸುವಂತಿವೆ ಅಂತ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
cinibuzzಅನ್ನು ಇನಸ್ ಸ್ಟಾಗ್ರಾಮ್ನಲ್ಲಿ ಫಾಲೋ ಮಾಡಿ
https://www.instagram.com/cinibuzzsandalwood/?fbclid=IwAR2Y-mLeHQy5S4BVSEErCUaOzCJf6y9DFpJUAkQqrVIX0NhgN75gxHQcQ_0 #
No Comment! Be the first one.