ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ರಗಡ್ ಲುಕ್ ನಲ್ಲಿ ಮಿಂಚುತ್ತಿರುವ ನಟ ವಿನೋದ್ ಪ್ರಭಾಕರ್. ಯಂಗ್ ಅಂಡ್ ಎನೆರ್ಜಿಟಿಕ್ ಹೀರೋಗಳಲ್ಲಿ ಒಬ್ಬರಾಗಿರುವ ವಿನೋದ್ ಪಕ್ಕಾ ಮಾಸ್ ಅಂಡ್ ಕ್ಲಾಸ್ ಲುಕ್ ಗೆ ಮ್ಯಾಚ್ ಆಗುವಂತಹವರು. ಇತ್ತೀಚಿಗೆ ರಗಡ್ ಚಿತ್ರದ ಮೂಲಕ ಅಬ್ಬರಿಸಿದ್ದ ವಿನೋದ್ ಇದೀಗ ಶ್ಯಾಡೋ ತೋರಿಸಲು ಬರುತ್ತಿದ್ದಾರೆ. ಹೌದು ರವಿ ಗೌಡ ನಿರ್ದೇಶನದ ಬಹುನಿರೀಕ್ಷಿತ ಶ್ಯಾಡೋ ಸಿನಿಮಾ ವಿನೋದ್ ಪ್ರಭಾಕರ್ ಅವರ ಮುಂದಿನ ಸಿನಿಮಾ.
ಸದ್ಯ ಶ್ಯಾಡೋ ಸಿನಿಮಾದ ಬಿದ್ದೆ ಬಿದ್ದೆ ಎನ್ನುವ ಮೊದಲ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಇಲ್ಲಿಯವರೆಗೂ ಮಾಸ್ ಲುಕ್ ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಮರಿ ಟೈಗರ್ ಇದೀಗ ಲವರ್ ಬಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ರಾಮ್ ನಾರಾಯಣ್ ಬರೆದಿದ್ದು, ಅಚು ರಾಜಮಣಿ ಮತ್ತು ಸೀಮಾ ಭಾರಧ್ವಜ್ ಧ್ವನಿಯಾಗಿದ್ದಾರೆ. ಈಗಾಗಲೇ ಟೀಸರ್ ಕೂಡ ರಿಲೀಸ್ ಆಗಿದ್ದು, ವಿನೋದ್ ಭವಿಷ್ಯದ ಭರವಸೆಯ ನಾಯಕನಾಗುವ ಸುಳಿವನ್ನು ಕೊಟ್ಟಿದೆ. ಸಿನಿಮಾದಲ್ಲಿ ವಿನೋದ್ ಕಾಮ್ ಮ್ಯಾನ್ ಆಗಿಯೂ, ಶೋಭಿತಾ ರಾಣಾ ನಾಯಕಿಯಾಗಿಯೂ ಮರಿ ಟೈಗರ್ ಗೆ ಜತೆಯಾಗಿದ್ದಾರೆ. ಅಲ್ಲದೇ ಶರತ್ ಲೋಹಿತಾಶ್ವ, ವಿನೋದ್ ಮುಂದೆ ಅಬ್ಬರಿಸಲಿದ್ದಾರೆ.
No Comment! Be the first one.