ಸದ್ಯ ಕಬೀರ್ ಸಿಂಗ್ ಸಿನಿಮಾ ರಿಲೀಸ್ ನ ಬಿಸಿ ಬಿಸಿ ವಾತಾವರಣದ ನಡುವೆಯೂ ಶಾಹಿದ್ ಕಪೂರ್ ಜಾಲಿ ಮೂಡ್ ನಲ್ಲಿದ್ದಾರೆ. ಹೌದು ಶಾಹಿದ್ ಕಪೂರ್, ಪತ್ನಿ ಮೀರಾ ಕಪೂರ್ ಮತ್ತು ಮಕ್ಕಳಾದ ಮಿಶಾ ಮತ್ತು ಜೇನ್ ಕಪೂರ್ ಜೊತೆಗೆ ಪ್ರವಾಸದ ಖುಷಿಯಲ್ಲಿದ್ದಾರೆ.
https://www.instagram.com/p/Bx30qjhnBnD/?utm_source=ig_web_copy_link
ಬಿ ಟೌನ್ ನಲ್ಲಿ ಫ್ಯಾಮಿಲಿ ಮ್ಯಾನ್ ಎಂದೇ ಫೇಮಸ್ ಆಗಿರುವ ಶಾಹಿದ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪರ್ಸನಲ್ ಲೈಫಿನ ಸಿಹಿ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಫ್ಯಾಮಿಲಿ ಜತೆ ಥಾಯ್ಲೆಂಡ್ ನ ಪುಕೆಟ್ ಸಮುದ್ರ ತೀರಕ್ಕೆ ತೆರಳಿದ್ದ ಶಾಹಿದ್, ಪತ್ನಿ ಮೀರಾ ಜೊತೆಗಿನ ಸೆಲ್ಫಿಯನ್ನು ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದೊಡ್ಡ ಸನ್ ಗ್ಲಾಸ್ ಹಾಕಿಕೊಂಡಿರುವ ಶಾಹಿದ್ ನಾವು ಅನ್ನುವ ಶೀರ್ಷಿಕೆಯನ್ನು ನೀಡಿದ್ದಾರೆ. ಮೇಕಪ್ ಇಲ್ಲದೆಯೂ ಮೀರಾ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ ರಿಮೇಕ್ ಆಗಿರುವ ಕಬೀರ್ ಸಿಂಗ್ ಇದೇ ಜೂನ್ 21ರಂದು ರಿಲೀಸ್ ಆಗಲಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮಾಡಿದ್ದ ಪಾತ್ರವನ್ನು ಶಾಹಿದ್ ಕಪೂರ್ ನಿರ್ವಹಿಸಿದ್ದಾರೆ.
No Comment! Be the first one.