ಶ್ರದ್ಧಾ ಮೂವೀಸ್ ಲಾಂಛನದಲ್ಲಿ ಯಶೋಧ ಸಣ್ಣಪನವರ್ ಅವರು ನಿರ್ಮಿಸಿರುವ ಚಿತ್ರ ಶೈಬ್ಯ. ರೊಮ್ಯಾಂಟಿಕ್, ಥ್ರಿಲ್ಲರ್, ಹಾಗೂ ಕಾಮಿಡಿ ಕಥಾ ಹಂದರದ ಸಿನಿಮಾ ಇದಾಗಿದೆ. ಒಬ್ಬ ಕೆಳದರ್ಜೆ ವ್ಯಕ್ತಿಯು ತನ್ನ ಸ್ವಾರ್ಥಕ್ಕಾಗಿ ಅವಶ್ಯಕವಾದ ಸಂಪತ್ತನ್ನು, ಹೆಸರನ್ನು ಗಳಿಸಲು ಮೌಡ್ಯಗಳ ಬೆನ್ನೇರಿ ಹೊರಟಾಗ ಬರಸಿಡಿಲಿನಂತೆ ಕೆಲವೊಂದು ಅಚಾತುರ್ಯಗಳು ಶುರುವಾಗುತ್ತ ಹೋಗುತ್ತದೆ. ಹೀಗೆ ಸಾಗುವ ಚಿತ್ರಕಥೆಯ ಅಂತ್ಯವೇನು? ಮೂಡನಂಬಿಕೆ ಪ್ರಪಂಚದ ಜನರನ್ನು ಎಷ್ಟು ಆವರಿಸಿದೆ ಅನ್ನುವುದೇ ಶೈಬ್ಯ ಚಿತ್ರದ ಒಂದೆಳೆ.

ನಿರ್ಮಾಪಕಿ ಯಶೋಧ ಸಣ್ಣಪ್ಪನವರ್ ಅವರು ಬರೆದಿರುವ ಕಥೆಗೆ ಎಂ.ಜಿ.ಆರ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ಸನ್ಮಿತ್ ವಿಹಾನ್ ಈ ಚಿತ್ರದ ನಾಯಕನಾಗಿದ್ದು, ಮೇಘಶ್ರೀ ಗೌಡ, ಮಿಲನ ರಮೇಶ್, ಗಣೇಶ್ ರಾವ್, ಕುರಿ ಪ್ರತಾಪ್, ಮಣಿಕುಮಾರ್, ಮನು, ರಚಿತ, ಕವಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಸೆನ್ಸಾರ್ ವೀಕ್ಷಣೆಗೆ ಸಿನಿಮಾವನ್ನು ಕಳುಹಿಸುವ ತಯಾರಿಯಲ್ಲಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸದ್ದು ಮಾಡುತ್ತಿದೆ ಸಾರಾ ಅಲಿ ಖಾನ್ ಲವ್ ಸ್ಟೋರಿ!

Previous article

ಸೈಮಾ ಕಿರು ಚಿತ್ರೋತ್ಸವದಲ್ಲಿ ವಿದಾತ್ರು ಕಿರುಚಿತ್ರಕ್ಕೆ ಪ್ರಶಸ್ತಿ!

Next article

You may also like

Comments

Leave a reply

Your email address will not be published. Required fields are marked *