2.0 ಖ್ಯಾತಿಯ ನಿರ್ದೇಶಕ ಶಂಕರ್ ಷಣ್ಮುಗಂ ಸದ್ಯ  ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರವನ್ನು ಮಾಡುತ್ತಿದ್ದು, ಫ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಖಳ ನಾಯಕನ ಪಾತ್ರಕ್ಕೆ ಶಂಕರ್ ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಇದೇ ಪಾತ್ರವನ್ನು ಹೃತಿಕ್ ರೋಷನ್ ಅವರು ಅಭಿನಯಿಸಲಿದ್ದಾರೆ ಎಂಬ ಗಾಳಿ ಸುದ್ದಿ ಇತ್ತು. ಆದರೆ ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡಿರುವ ಹೃತಿಕ್ ರೋಷನ್ ಶಂಕರ್ ಸಿನಿಮಾದಲ್ಲಿ ನಟಿಸುವುದಿಲ್ಲವೆಂಬುದು ತಿಳಿದುಬಂದಿದೆ.

ಈ ಚಿತ್ರದಲ್ಲಿ ಖ್ಯಾತ ನಟ ಜಾಕಿ ಚಾನ್, ತಮಿಳು ನಟ ವಿಜಯ್, ಚೀನಾ ಕಲಾವಿದೆ ಲಿಬಿಂಗ್ ಬಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ಧಾರಂತೆ. ಇಲ್ಲಿಯವರೆಗೂ ಶಂಕರ್ ಹಾಗೂ ಶಾರುಖ್ ಖಾನ್ ಒಟ್ಟಾಗಿ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಮೂಲಕವಾದರೂ ಅಭಿಮಾನಿಗಳ ಕನಸು ಈಡೇರುವುದೋ ನೋಡಬೇಕು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮಕ್ಕಳನ್ನು ಹೆರಲು ಮದುವೆಯಾಗಬೇಕಿಲ್ಲ: ಶಮಾ ಸಿಕಂದರ್

Previous article

ನೀರಜ್ ಪಾಂಡೆ ಚಿತ್ರದಲ್ಲಿ  ಅಕ್ಷಯ್ ಕುಮಾರ್!

Next article

You may also like

Comments

Leave a reply

Your email address will not be published. Required fields are marked *