ಶರಣ್ ನಾಯಕತ್ವದ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾ ಜುಲೈ ತಿಂಗಳಿಗೆ ರಿಲೀಸ್ ಆಗಲಿದೆ. ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾವಾಗಿರಲಿದ್ದು, ಅಧ್ಯಕ್ಷ ಸಿನಿಮಾದ ನಂತರ ಶರಣ್ ಮತ್ತದೇ ಹೆಸರಿನ ಸಿನಿಮಾದಲ್ಲಿ ನಟಿಸಲಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿಯವರೆವಿಗೂ ಸ್ಯಾಂಡಲ್ ವುಡ್ ನಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿದ್ದ ಯೋಗಾನಂದ ಮುದ್ದಣ್ಣ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾದ ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ. ಸದ್ಯ ಚಿತ್ರವೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚೊಚ್ಚಲಬಾರಿಗೆ ಹರಿಕೃಷ್ಣ ಶರಣ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದಲ್ಲಿ 5 ಹಾಡುಗಳಿದ್ದು, ಮೂರು ಹಾಡನ್ನು ಅಮೆರಿಕಾದಲ್ಲಿ ಚಿತ್ರೀಕರಿಸಲಾಗಿದೆ. ಶರಣ್ ಗೆ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದು, ಉಳಿದಂತೆ ರಂಗಾಯಣ ರಘು, ಸಾಧು ಕೋಕಿಲಾ, ಶಿವರಾಜ್ ಕೆಆರ್ ಪೇಟೆ ಚಿತ್ರದ ತಾರಾಗಣದಲ್ಲಿದ್ದಾರೆ.
No Comment! Be the first one.