ಸ್ಯಾಂಡಲ್ ವುಡ್ ನ ಹೆಸರಾಂತ ನಟ ರೆಬಲ್ಸ್ಟಾರ್ ಅಂಬರೀಶ್ ಕುರಿತಾದ, ಪತ್ರಕರ್ತ ಶರಣು ಹುಲ್ಲೂರು ಬರೆದ “ಅಂಬರೀಶ್ ವ್ಯಕ್ತಿ, ವ್ಯಕ್ತಿತ್ವ, ವರ್ಣರಂಜಿತ ಬದುಕು’ ಪುಸ್ತಕವು ಗುರುವಾರ ಮಂಡ್ಯದಲ್ಲಿ ಲೋಕಾರ್ಪಣೆ ಆಯಿತು. ಅಂಬರೀಶ್ ಹುಟ್ಟು ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಸ್ವಾಭಿಮಾನದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅಂಬರೀಶ್ ಪತ್ನಿ, ಸಂಸದೆ ಸುಮಲತಾ, ನಟರಾದ ದರ್ಶನ್, ಯಶ್, ನೆನಪಿರಲಿ ಪ್ರೇಮ್, ದೊಡ್ಡಣ್ಣ, ಅಭಿಷೇಕ್ ಅಂಬರೀಶ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಕಾಶಕ ಜಮೀಲ್ ಸಾವಣ್ಣ, ಶರಣು ಹುಲ್ಲೂರು ಉಪಸ್ಥಿತರಿದ್ದರು. ಅಂಬರೀಶ್ ಜೀವನಾಧಾರಿತ ಪುಸ್ತಕ ಇದಾಗಿದ್ದು, ರೆಬಲ್ ಸ್ಟಾರ್ ಕುರಿತಾದ ರೋಚಕ ಸಂಗತಿಗಳನ್ನು, ಅಪರೂಪದ ಘಟನೆಗಳನ್ನು ತೆರೆದಿಡುವ ಪ್ರಯತ್ನವನ್ನು ಶರಣು ಹುಲ್ಲೂರು ಮಾಡಿರುವುದು ವಿಶೇಷವಾಗಿದೆ.
No Comment! Be the first one.