ಬೆಂಗಳೂರಿನ ಅವಳ ಹೆಜ್ಜೆ ಸಂಸ್ಥೆಯು ಮೂರನೇ ವರ್ಷದ ‘ಕನ್ನಡತಿ ಉತ್ಸವ ೨೦೧೯’ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ನವೆಂಬರ್ ೩, ಮುಂಜಾನೆ ೯.೩೦ರಿಂದ ಮ‘ಹ್ನ ೧.೩೦ರವರೆಗೆ ಬೆಂಗಳೂರಿನ ಬನಶಂಕರಿಯಲ್ಲಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಜರುಗುವ ಈ ಉತ್ಸವವನ್ನು ನಾತಿಚರಾಮಿ ಖ್ಯಾತಿಯ ನಟಿ ಶರಣ್ಯ ಉದ್ಘಾಟಿಸಲಿದ್ದಾರೆ. ಈ ವರ್ಷದ ಕನ್ನಡತಿ ಉತ್ಸವದಲ್ಲಿ ಮಹಿಳೆಯರೇ ರಚಿಸಿ, ನಿರ್ದೇಶಿಸಿದ ರಾಜ್ಯ ಮಟ್ಟದ ಅಂತರ ಕಾಲೇಜು ಕಿರುನಾಟಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಕಿರು ನಾಟಕ ಸ್ಪರ್ಧೆಯ ನಂತರ ‘ಸ್ತ್ರೀ ನೋಟ’ ವಿಷಯಾಧಾರಿತ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರ ನಿರ್ದೇಶಕ, ನಟ ಬಿ.ಸುರೇಶ, ನಟಿ ಶರಣ್ಯ ಮತ್ತು ಮಾನಸಿಕ ತಜ್ಞೆ ಪದ್ಮಾಕ್ಷಿ ಭಾಗವಹಿಸಲಿದ್ದಾರೆ ಎಂದು ಅವಳ ಹೆಜ್ಜೆ ಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

 

CG ARUN

ಅಭಿಮಾನಿಗಳ ಬಯಕೆ ಈಡೇರಿದೆ…

Previous article

ನಿರೂಪಕಿ ಹಾಕಿದ ಲದ್ದಿ !

Next article

You may also like

Comments

Leave a reply

Your email address will not be published. Required fields are marked *