ನಿರ್ದೇಶಕ ಶಶಾಂಕ್ ತಮ್ಮ ಹೋಮ್ ಬ್ಯಾನರ್ನಲ್ಲಿ ತಾಯಿಗೆ ತಕ್ಕ ಮಗ ಚಿತ್ರದ ಮೂಲಕ ಆರಂಭದಲ್ಲೇ ಗೆದ್ದಿದ್ದಾರೆ. ತಾಯಿಗೆ ತಕ್ಕ ಮಗ ಸಿನಿಮಾ ಹಂತದಲ್ಲಿಯೇ ಶಶಾಂತ್ ತಮ್ಮ ಬ್ಯಾನರಿನ ಎರಡನೇ ಸಿನಿಮಾದ ಸುಳಿವು ಕೊಟ್ಟಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಮುಂದಿನ ಚಿತ್ರ ಮಾಡೋದರ ಬಗ್ಗೆಯೂ ಸೂಚನೆ ನೀಡಿದ್ದರು. ಇದೀಗ ಆ ಚಿತ್ರ ಸೆಟ್ಟೇರಿದೆ.
ಉಪ್ಪಿ ಮತ್ತು ತನ್ನ ಕಾಂಬಿನೇಷನ್ನಿನ ಸಿನಿಮಾ ಸೆಟ್ಟೇರಿರೋ ವಿಚಾರವನ್ನು ಖುದ್ದು ಶಶಾಂಕ್ ಅವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ತಾಯಿಗೆ ತಕ್ಕ ಮಗ ಸಮಾರಂಭದಲ್ಲಿಯೇ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಶಶಾಂಕ್ ನಿರ್ದೇಶನದ ಸಿನಿಮಾದಲ್ಲಿ ಕೆಲಸ ಮಾಡಲು ಕಾತರರಾಗಿರೋದಾಗಿ ಹೇಳಿಕೊಂಡಿದ್ದರು. ಅದಾದ ಬಳಿಕ ಶಶಾಂಕ್ ಉಪ್ಪಿಗೆ ಕಥೆಯನ್ನೂ ಹೇಳಿದ್ದಾರಂತೆ. ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುತ್ತಲೇ ಈ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.
ಈಗಾಗಲೇ ಶಶಾಂಕ್ ಈ ಸಿನಿಮಾಗೆ ಸಂಪೂರ್ಣವಾಗಿ ತಯಾರಿ ಮಾಡಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಇದರ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಲಿದೆಯಂತೆ. ಉಪೇಂದ್ರ ಈಗ ನಟಿಸುತ್ತಿರೋ ಐ ಲವ್ ಯೂ ಕೂಡಾ ಮುಗಿಯುತ್ತಾ ಬಂದಿದೆ. ಏಪ್ರಿಲ್ ತಿಂಗಳಿಂದ ಹೊಸಾ ಚಿತ್ರ ಆರಂಭವಾಗಲಿದೆ.
#
No Comment! Be the first one.