ಚಿತ್ರದುರ್ಗದ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಹಿರಿಯ ನಟ ಶಶಿ ಕುಮಾರ್ ಅವರ ಮೊಬೈಲ್ ಕಳೆದುಕೊಂಡು ಕೆಲ ಕಾಲ ಪರದಾಡಿದ್ದಾರೆ. ನಗರದ ಐಯುಡಿಪಿ ಲೇಔಟ್ ನಲ್ಲಿ ಬೇಸಿಗೆ ಮಕ್ಕಳ ಶಿಬಿರ ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದ ಶಶಿಕುಮಾರ್ ಮೊಬೈಲನ್ನು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಅಪರಿಚಿತ ಯುವಕನೊಬ್ಬ ಲಪಟಾಯಿಸಿದ್ದಾನೆ. ಇದರಿಂದ ಕಂಗಾಲಾಗಿದ್ದ ಶಶಿಕುಮಾರ್ ಮೊಬೈಲ್ ಗಾಗಿ ತಡಕಾಡಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳವು ಮಾಡಿದ್ದ ದೃಶ್ಯ ಅಲ್ಲಿದ್ದ ವಿಡಿಯೋ ಸ್ಕ್ರೀನ್ ನಲ್ಲಿ ಸೆರೆಯಾಗಿತ್ತು. ನಂತರ ಆರೋಪಿ ಮೊಬೈಲ್ ನೀಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Comments