ನಟಿ ಶಿರಿನ್ ಗೊತ್ತಲ್ಲಾ? ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಧೃವ ಮತ್ತು ಭೂಪತಿ ಚಿತ್ರಗಳಲ್ಲಿ ನಾಯಕಿಯಾಗಿದ್ದವರು. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸೊ ಹೆಸರು ಮಾಡಿದ್ದ ಶಿರಿನ್ ಈಗ ತಮಿಳು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಈಕೆ ಕನ್ನಡತಿ ಅನ್ನೋ ಕಾರಣಕ್ಕೆ ಬಿಗ್ ಬಾಸ್ ಶೋನ ಉಳಿದ ಸ್ಪರ್ಧಿಗಳು ಈಕೆಗೆ ಕೊಡುತ್ತಿರುವ ಕಾಟ ಇದೆಯಲ್ಲಾ? ಅದು ಒಂದೇ ಮಾತಲ್ಲಿ ಹೇಳುವುದಕ್ಕಾಗಲ್ಲ.
ಮಧುಮಿತಾ ಎನ್ನುವ ಕಾಮಿಡಿ ನಟಿಯೊಬ್ಬಳಿದ್ದಾಳೆ. ಈಕೆ ಬೇಕುಬೇಕಂತಲೇ ಕಾವೇರಿ ವಿಚಾರವನ್ನು ತೆಗೆದು ಶಿರಿನ್ ರನ್ನು ಸಂಕಷ್ಟಕ್ಕೀಡುಮಾಡುವ ಪ್ರಯತ್ನ ಮಾಡಿದ್ದಾಳೆ. ಆದರೆ ಯಾವ ಅಂಜಿಕೆಯಿಲ್ಲದ, ಹಿಂದೇಟು ಹಾಕದ ಶಿರಿನ್ ಕಾವೇರಿ ಮತ್ತು ಕರ್ನಾಟಕದ ಪರ ಮಾತಾಡಿದ್ದಾರೆ. ಇದು ಅಲ್ಲಿನ ತಮಿಳಿಗರನ್ನು ಕೆರಳಿಸಿದ್ದರೂ ಶಿರಿನ್ ಅವರ ಕರ್ನಾಟಕ ಪ್ರೇಮವನ್ನು ಎತ್ತಿಹಿಡಿದಿದೆ.
ಪ್ರಕಾಶ್ ರೈ ಥರದ ನಟರೇ ಕಾವೇರಿಯಂಥಾ ಸೂಕ್ಷ್ಮ ವಿಚಾರಗಳ ಕುರಿತು ಪ್ರಶ್ನಿಸಿದಾಗ ಎಲ್ಲಿ ಅಲ್ಲಿನ ಅವಕಾಶಗಳು ಮಿಸ್ ಆಗುತ್ತವೋ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಶಿರಿನ್ ಅನ್ನೋ ಗಟ್ಟಿಗಿತ್ತಿ ಹೆಣ್ಣುಮಗಳು ತಮಿಳು ನೆಲದಲ್ಲಿದ್ದುಕೊಂಡೇ ಕಾವೇರಿಗೆ ಜೈ ಅಂದಿರೋದನ್ನು ಮೆಚ್ಚಲೇಬೇಕು. ಕನ್ನಡಿಗರ ರಕ್ತ ಹರೀತಿರೋ ನಾವು ಅಲ್ಲೆಲ್ಲೋ ಇದ್ದು ಕನ್ನಡ ಪರ, ಕಾವೇರಿ ಪರ, ಕನ್ನಡತನದ ಪರ ಮಾತನಾಡಿ, ತಿಂಗಳಾನುಗಟ್ಟಲೇ ಅದೇ ತಮಿಳ್ ದೊಡ್ಮನೆಯಲ್ಲಿ ದಿಟ್ಟತನದಿ ಇದ್ದು ಮುನ್ನುಗ್ಗುತ್ತಿರೋ ಕನ್ನಡತಿ, ಡಿ ಬಾಸ್ ಸಿನೆಮಾದ ನಾಯಕಿ ಶಿರಿನ್ ಗೆ ನಾವು ಸಪೋರ್ಟ್ ಮಾಡಲೇಬೇಕು.