ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ. ನಾಡಿನ ಉದ್ದಗಲಕ್ಕೂ ಅವರ ಚೇತರಿಕೆಗಾಗಿ ಜನ ಪ್ರಾರ್ಥಿಸುತ್ತಲೇ ಇದ್ದಾರೆ. ಇದರ ಫಲವೆಂಬಂತೆ ಶ್ರೀಗಳು ಅನಾರೋಗ್ಯವನ್ನು ನೀಗಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. ಈ ಹೊತ್ತಿನಲ್ಲಿಯೇ ಅವರಿಗೆ ಭಾರತ ರತ್ನ ಪುರಸ್ಕಾರ ಸಿಗಬೇಕು ಎಂಬ ಕೂಗೂ ಎಲ್ಲಡೆಯಿಂದ ಕೇಳಿ ಬರುತ್ತಿದೆ. ಕನ್ನಡ ಚಿತ್ರರಂಗ ಕೂಡಾ ಈ ಬಗ್ಗೆ ಒಕ್ಕೊರಲಿನ ಬೇಡಿಕೆಯಿಟ್ಟಿದೆ.
ಇದೀಗ ಕಿಚ್ಚಾ ಸುದೀಪ್ ಕೂಡಾ ಶ್ರೀಗಳಿಗೆ ಭಾರತರತ್ನ ಪುರಸ್ಕಾರ ಕೊಡಬೇಕು ಎಂಬ ಬೇಡಿಕೆಗೆ ಧ್ವನಿಯಾಗಿದ್ದಾರೆ. ಈಗ ರಾಜ್ಯಾಧ್ಯಂತೆ ಮೊಳಗುತ್ತಿರೋ ಈ ವಿಚಾರಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿರುವ ಸುದೀಪ್ ಸಮಾರಂಭವೊಂದರಲ್ಲಿ ಈ ಬಗ್ಗೆ ಮಾತಾಡಿದ್ದಾರೆ.
ಈಮ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತಾನಾಡಿರೋ ಸುದೀಪ್ ತೀರಾ ಸಾಮಾನ್ಯರೆಂಬಂತಿರುವವರಿಗೂ ಭಾರತರತ್ನ ಕೊಡುತ್ತಾರೆ. ಆದರೆ ಶ್ರೀಗಳಂಥಾ ಮೇರು ಪುರುಷರಿಗೆ ಇಂಥಾ ಸಮ್ಮಾನಗಳನ್ನು ನೀಡಿದರೆ ಅದರ ಗೌರವವೇ ಹೆಚ್ಚುತ್ತದೆ. ಈಗ ಸಿದ್ದಗಂಗಾ ಸ್ವಾಮೀಜಿಯವರಿಗೆ ಭಾರತರತ್ನ ನೀಡಬೇಕೆಂಬ ಕೂಗೆದ್ದಿರೋದಕ್ಕೆ ತಮ್ಮ ಬೆಂಬಲವೂ ಇದೆ ಎಂದಿದ್ದಾರೆ.
ಸಿದ್ದಗಂಗಾ ಸ್ವಾಮೀಜಿ ನಡೆದಾಡುವ ದೇವರೆಂದೇ ಖ್ಯಾತಿವೆತ್ತವರು. ತ್ರಿವಿಧ ದಾಸೋಹದಲ್ಲಿಯೇ ಪರಮಾತ್ಮನನ್ನು ಕಾಣುತ್ತಾ ಬಂದಿರೋ ಅವರು ಕರುನಾಡಿನ ಹೆಮ್ಮ. ಸರ್ವರೂ ಮೆಚ್ಚುವಂಥಾ, ಮಾದರಿ ವ್ಯಕ್ತಿತ್ವದ ಅವರ ಛಾಯೆ ಯಾವ ರಂಗವನ್ನೂ ಬಿಟ್ಟಿಲ್ಲ. ಚಿತ್ರರಂಗದ ಮಂದಿಯೂ ಅವರ ಆಶೀರ್ವಾದ ಪಡೆದೇ ಮುಂದುವರೆಯೋ ಪರಿಪಾಠವೂ ನಡೆದು ಬಂದಿದೆ. ಆದ್ದರಿಂದಲೇ ಚಿತ್ರರಂಗವೆಲ್ಲ ಒಂದಾಗಿ ಅವರಿಗೆ ಭಾರತರತ್ನ ನೀಡಬೇಕೆಂಬ ಬೇಡಿಕೆಯಿಟ್ಟಿದೆ.
#
No Comment! Be the first one.