ದೃಶ್ಯ ಸಿನಿಮಾದಲ್ಲಿ ಕ್ರೇಜ಼ಿ ಸ್ಟಾರ್ ಮಗಳ ಪಾತ್ರದಲ್ಲಿ ಮುಗ್ದವಾಗಿ ಕಾಣಿಸಿಕೊಂಡಿದ್ದ ಹುಡುಗಿ ಆರೋಹಿ ನಾರಾಯಣ್. ಆರೋಹಿ ಈಗ ಸಾಕಷ್ಟು ಬದಲಾಗಿದ್ದಾರೆ. ಭೀಮಸೇನ ನಳಮಹರಾಜ ಸೇರಿದಂತೆ ಸಾಕಷ್ಟು ಅವಕಾಶಗಳು ಆರೋಹಿಯನ್ನು ಅರಸಿಬರುತ್ತಿವೆ. ಬಂದ ಪಾತ್ರಗಳನ್ನೆಲ್ಲಾ ಒಪ್ಪಿದ್ದಿದ್ದರೆ ಬಹುಶಃ ಈ ಹೊತ್ತಿಗೆ ಆರೋಹಿ  ನಟನೆಯ ಒಂದು ಡಜನ್ ಸಿನಿಮಾಗಳೇ ರಿಲೀಸಾಗಿರುತ್ತಿದ್ದವೋ ಏನೋ? ಮನಸ್ಸಿಗೊಪ್ಪಿದ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿರುವ ಆರೋಹಿ ಶಿವಾಜಿ ಸುರತ್ಕಲ್ ಚಿತ್ರದಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ರಮೇಶ್ ಅರವಿಂದ್ ಅವರನ್ನೇ ಗೊಂದಲಕ್ಕೀಡುಮಾಡುವ ರೋಲು. ಈ ಚಿತ್ರದ ಬಗ್ಗೆ ಇನ್ನಷ್ಟು ವಿಚಾರಗಳನ್ನು ಆರೋಹಿ ಇಲ್ಲಿ ಅರುಹಿದ್ದಾರೆ!

ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ನೀವು ಭಾಗಿಯಾಗಿದ್ದು ಹೇಗೆ?

ದೃಶ್ಯ ಸಿನಿಮಾ ನಂತರ ಶಿವಾಜಿ ಸುರತ್ಕಲ್ ನನ್ನ ೨ನೇ ಸಿನಿಮಾ. ರಮೇಶ್ ಸರ್ ಅವರ ೧೦೧ನೇ ಚಿತ್ರ. ಈ ಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ನಟಿಸಿದ್ದೇನೆ. ಬಹಳ ಕಾಂಪ್ಲಿಕೇಟೆಡ್ ವ್ಯಕ್ತಿಗಳನ್ನು ಟ್ರೀಟ್ ಮಾಡುವಂತಹ ಪಾತ್ರ. ಭೀಮಸೇನ ನಳಮಹಾರಾಜ ಚಿತ್ರದಲ್ಲಿ ನಟಿಸುವಾಗ ನಿರ್ದೇಶಕ ಆಕಾಶ್ ಅವರು ನೋಡಿ ನನ್ನನ್ನು ಕರೆದು ಸ್ಕ್ರಿಪ್ಟ್ ಬಗ್ಗೆ ಹೇಳಿದರು. ನನಗೆ ಸ್ಟೋರಿ ಬಹಳ ಇಷ್ಟವಾಯಿತು.

ಈ ಸಿನಿಮಾದಲ್ಲಿ ನಟಿಸಲೇಬೇಕು ಅಂತಾ ನಿಮಗೆ ಅನ್ನಿಸಿದ್ದು ಯಾವ ಕಾರಣಕ್ಕೆ?

ರಮೇಶ್ ಸರ್ ಅವರಿಗೆ ಆಪೋಸಿಟ್ ಆಗಿ ಚಾಲೆಂಜ್ ಆಗಿ ನಿಲ್ಲುವಂತಹ ಒಂದು ಪಾತ್ರ. ಇಡೀ ಚಿತ್ರದಲ್ಲಿ ರಮೇಶ್ ಸರ್, ರಾಧಿಕಾ ಹಾಗೂ ನನಗೆ ಹೆಚ್ಚು ಪ್ರಾಮುಖ್ಯತೆ ಇದೆ. ಇದನ್ನ ಆಕಾಶ್ ಅವರು ನನಗೆ ಹೇಳಿದಾಗಿ ಬಹಳ ಇಂಟ್ರೆಸ್ಟಿಂಗ್ ಅನ್ನಿಸಿತು. ರಮೇಶ್ ಅವರ ಸಿನಿಮಾ ನೋಡ್ಕೊಂಡು ಬೆಳೆದವರು ನಾವು. ಅಮೆರಿಕಾ-ಅಮೆರಿಕಾ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ ನನ್ನ ಫೇವರೇಟ್ ಸಿನಿಮಾಗಳು. ಹೀಗೆ ಅವರ ಸಿನಿಮಾ ನೋಡುತ್ತಾ ಬೆಳೆದ ನಮಗೆ ಅವರೊಂದಿಗೆ ಪಾತ್ರ ಮಾಡುವ ಅವಕಾಶ ಸಿಕ್ಕಾಗ ಬೇಡ ಅಂತಾ ಯಾರು ಹೇಳ್ತಾರೆ. ಅದಕ್ಕೆ ಈ ಚಿತ್ರ ಒಪ್ಪಿಕೊಂಡೆ.

ಯಾವ ಕಾರಣಕ್ಕಾಗಿ ಈ ಚಿತ್ರವನ್ನು ಜನ ನೋಡಲೇಬೇಕು ಅನ್ನೋದು ನಿಮ್ಮ ಅಭಿಪ್ರಾಯ?

ಥಿಯೇಟರ್‌ಗೆ ಹೋಗಿ ಈ ಸಿನಿಮಾ ನೋಡಬೇಕು. ಏಕೆಂದರೆ ರಮೇಶ್ ಅವರು ಅವರ ಸಿನಿಮಾ ಕೆರಿಯರ್‌ನಲ್ಲಿ ಎಂದೂ ಮಾಡದಂತಹ ಪಾತ್ರ ಡಿಟೆಕ್ಟಿವ್ ಪಾತ್ರ. ಪರ್ಫಾರ್ಮೆನ್ಸ್ ನೋಡೋಕೆ ಅಂತಲೇ ಜನ ಅವರ ಸಿನಿಮಾ ನೋಡ್ತಾರೆ. ಅದರಲ್ಲೂ ಡಿಟೆಕ್ಟಿವ್ ಪಾತ್ರವನ್ನ ಹೇಗೆ ಮಾಡಿರಬಹುದು ಅನ್ನೋ ಕ್ಯೂರಿಯಾಸಿಟಿ ಇರುತ್ತೆ. ಸಾಮಾನ್ಯವಾಗಿ ಡಿಟೆಕ್ಟಿವ್ ಸಿನಿಮಾಗಳನ್ನ ನೋಡಿದರೆ ಲಾಜಿಕಲ್ಲಾಗಿ ಸರಿಯಿಲ್ಲ ಅಂದ್ರೆ ಇಂಟ್ರೆಸ್ಟ್ ಹೋಗಿಬಿಡುತ್ತೆ. ಆದರೆ ಈ ಸಿನಿಮಾ ಹಾಗಲ್ಲ. ಸಿನಿಮಾದಲ್ಲಿ ಒಂದೇ ಒಂದು ಸೀನ್‌ನಲ್ಲಿ ಒಂದೇ ಒಂದು ಎಲಿಮೆಂಟ್ ಮಿಸ್ ಮಾಡಿದ್ರೂ ಸಿನಿಮಾ ಕಂಪ್ಲೀಟ್‌ಆಗಿ ಅರ್ಥವಾಗೋಲ್ಲ. ಮತ್ತೊಮ್ಮೆ ಸಿನಿಮಾ ನೋಡಬೇಕಾಗುತ್ತದೆ.

ಆಡಿಯೋ ಕ್ವಾಲಿಟಿ ಬಹಳ ಅದ್ಭುತವಾಗಿದೆ. ಬೇರೆ ಸಿನಿಮಾಗಳಲ್ಲಿ ಆಡಿಯೋ ಬಗ್ಗೆ ಹೆಚ್ಚು ಮಹತ್ವ ಗೊತ್ತಿರೋದಿಲ್ಲ. ಆದರೆ, ಈ ಸಿನಿಮಾ ಥಿಯೇಟರ್‌ನಲ್ಲಿ ಕುಳಿತು ನೋಡಿದಾಗ ಬೇರೆ ಸಿನಿಮಾಗಿಂತ ಇದು ಹೇಗೆ ವಿಭಿನ್ನವಾಗಿದೆ ಅನ್ನೋದು ಅರ್ಥವಾಗುತ್ತದೆ.

CG ARUN

ಮಾಂಜ್ರಾದಲ್ಲಿ ರಂಜಿತ್ ರಂಗು!

Previous article

You may also like

Comments

Leave a reply

Your email address will not be published. Required fields are marked *