ರಮೇಶ್ ಅರವಿಂದ್ ನಟಿಸಿರುವ ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಶಿವಾಜಿ ಸುರತ್ಕಲ್ ಫೆಬ್ರವರಿ 21ರ ಶಿವರಾತ್ರಿಯಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಅಭಿಜಿತ್ ವೈ. ಆರ್ ಹಾಗೂ ಆಕಾಶ್ ಶ್ರೀವತ್ಸ ಸೇರಿ ಚಿತ್ರಕಥೆ ಬರೆದಿದ್ದಾರೆ. ಗುರುಪ್ರಸಾದ್ ಎಂ.ಜಿ ಛಾಯಾಗ್ರಾಹಕರಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದ್ದು, ಜಯಂತ್ ಕಾಯ್ಕಿಣಿ ಎರಡು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆಗೊಂಡು ಕ್ಯೂರಿಯಾಸಿಟಿ ಹುಟ್ಟಿಸಿದೆ.

ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ಅವಿನಾಶ್ ಹೀಗೆ ದೊಡ್ಡ ತಾರಾಬಳಗವಿದ್ದು ಚಿತ್ರದ ಟ್ರೈಲರ್ ಗೆ ಜನ ಬಹು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ೧೦, ರಮೇಶ್ ಅರವಿಂದ್ ರವರ ಹುಟ್ಟುಹಬ್ಬದಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು. ರಮೇಶ್ ಅರವಿಂದ್ ರವರ ಗಡ್ಡದಾರಿ ಲುಕ್ ಬಹಳ ವಿಭಿನ್ನವಾಗಿದ್ದ ಕಾರಣ ಸಾಕಷ್ಟು ಊಹೆಗೂ, ನಿರೀಕ್ಷೆಗೂ ಕಾರಣವಾಗಿತ್ತು. ಡಿಜಿಟಲ್ ಮೀಡಿಯಾದಲ್ಲಿ ಚಿತ್ರದ ಪ್ರೊಮೋಷನ್ ನಡೆಯುತ್ತಿದ್ದು ಸ್ಪಾಟ್ ದ ಡಿಫರೆನ್ಸ್ ಎನ್ನುವ ಪೋಸ್ಟ್’ಗಳು ಟ್ರೋಲ್ ಪೇಜುಗಳಲ್ಲಿ ಕುತೂಹಲ ಸೃಷ್ಟಿಮಾಡಿದೆ.

ಟೀಸರ್ ನ ಕೆಲವು ತುಣುಕುಗಳೇ ಕುತೂಹಲಕಾರಿಯಾಗಿದ್ದು ಇನ್ನೂ ಟ್ರೈಲರ್ ರಿಲೀಸ್ ನ ಬಗ್ಗೆ ಚಿತ್ರತಂಡ ತಯಾರಿ ನಡೆಸುತ್ತಿದ್ದಾರೆ. ಕರ್ನಾಟಕದ ಬಹು ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ನಲ್ಲಿ ಲೆವಿಸ್ತಾ ಕಾಫಿ ಜೊತೆಗೂಡಿ ಚಿತ್ರದ ಪ್ರೊಮೋಶನ್ ವೀಡಿಯೋ ಪ್ರಚಾರವಾಗುತ್ತಿದ್ದು, ಅದು ಕರ್ನಾಟಕದ ವಿವಿಧ ಭಾಗಗಳನ್ನು ತಲುಪಿದೆ.

ಪತ್ತೇದಾರಿ ಹಿನ್ನೆಲೆ ಉಳ್ಳ ನಿನಿಮಾಗಳು ಈಗಿನ ಜನರಿಗೆ ಇಷ್ಟವಾಗುತ್ತಿದ್ದು, ಆ ನಿಟ್ಟಿನಲ್ಲಿ ಈ ಚಿತ್ರ ಬಹಳ ವಿಶೇಷವಾಗಿದೆ. ಚಿತ್ರದ ಪ್ರಚಾರ ವಿಭಿನ್ನ ರೀತಿಯಲ್ಲಿ ಸಾಗುತ್ತಿದ್ದು ರಣಗಿರಿಯ ರಹಸ್ಯವನ್ನು ತಿಳಿಯಲು ಫೆಬ್ರವರಿ ೨೧ ರಂದು ಸಿನಿಮಾ ಥೀಯೇಟರ್ ನಲ್ಲಿ ಬಂದು ನೋಡಲು ಚಿತ್ರತಂಡ ಎಲ್ಲರನ್ನೂ ಕೋರುತ್ತಿದೆ. ರೇಖಾ ಕೆ.ಎನ್ ಹಾಗೂ ಅನುಪ್ ಗೌಡ ಈ ಚಿತ್ರವನ್ನು ‘ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ‘ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

 

CG ARUN

ಹಳ್ಳೀಲಿ ಹುಟ್ಟಿದೀವಿ… ಜೀವನಕ್ಕೆ ಬೇಕಿರುವ ಕೋರ್ಸು ಇಲ್ಲೇ ಇದೆ!

Previous article

ಸೂರ್ಯನ ಸೂರರೈ ಪೊಟ್ರು ಸ್ಟೋರಿ ಏನ್ ಗೊತ್ತಾ?

Next article

You may also like

Comments

Leave a reply

Your email address will not be published. Required fields are marked *