ಮುತ್ತಣ್ಣನ ಸಿನಿಮಾಗಾಗಿ ಬರ್ತಾರಂತೆ ಮುತ್ತಯ್ಯ!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳ ಸಂಖ್ಯೆಯೇ ಎಂಥವರೂ ಹೌಹಾರುವಂತಿದೆ. ಈ ಸಾಲು ಸಾಲು ಚಿತ್ರಗಳಲ್ಲಿ ಸದ್ಯಕ್ಕವರು ದ್ರೋಣ ಮತ್ತು ರುಸ್ತುಂ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ಹೊಸಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರೋ ಸುದ್ದಿಯೂ ಹೊರ ಬಿದ್ದಿದೆ.

ತಮಿಳು ನಿರ್ದೇಶಕ ಎಂ ಮುತ್ತಯ್ಯ ನಿರ್ದೇಶನದ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ನಟಿಸಲು ಒಪ್ಪಿಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆಯಾದರೂ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಈಗಿರೋ ಮಾಹಿತಿ ಆಧರಿಸಿ ಹೇಳೋದಾದರೆ ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಕೂಡಾ ತಮಿಳಿಗರೆ. ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹೆಸರು ಮಾಡಿರುವ ಜ್ಞಾನವೇಲು ರಾಜಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರಂತೆ.

ಈ ವಿಚಾರವಾಗಿ ಶಿವರಾಜ್ ಕುಮಾರ್ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಆದರೆ ಈ ಚಿತ್ರದ ಬಗೆಗಿನ ಎಲ್ಲ ಮಾತುಕತೆಗಳೂ ಸಮಾಪ್ತಿಗೊಂಡಿರೋದರಿಂದ ರುಸ್ತುಂ ಮತ್ತು ದ್ರೋಣ ಚಿತ್ರ ಮುಕ್ತಾಯದ ಹಂತ ತಲುಪಿದಾಕ್ಷಣವೇ ತಮಿಳು ನಿರ್ದೇಶಕನ ಈ ಚಿತ್ರದ ಬಗ್ಗೆ ಶಿವಣ್ಣ ಮಾತಾಡೋ ಸಾಧ್ಯತೆಗಳಿವೆ.

ಬಹುಶಃ ಕನ್ನಡದಲ್ಲಿ ಯಾವ ನಟರೂ ಶಿವಣ್ಣನನ್ನು ಚಿತ್ರಗಳ ಸಂಖ್ಯೆಯಲ್ಲಿ ಬೀಟ್ ಮಾಡೋದು ಕಷ್ಟವಿದೆ. ಏಕ ಕಾಲಕ್ಕೇ ಎರಡೆರಡು ಚಿತ್ರಗಳಲ್ಲಿ ಅಭಿನಯಿಸುತ್ತಿರೋ ಶಿವಣ್ಣನ ಎನರ್ಜಿ ಕಂಡು ಯುವ ನಟರೂ ಬೆರಗಾಗುತ್ತಿದ್ದಾರೆ. ಇದುವರೆಗೆ ಅವರು ಒಪ್ಪಿಕೊಂಡಿರೋ ಪ್ರಾಜೆಕ್ಟುಗಳ ಬಗ್ಗೆಯೇ ಬಹುತೇಕರು ಬೆರಗಾಗಿದ್ದರು. ಇನ್ನೊಂದು ವರ್ಷಗಳ ಕಾಲ ಕೊಂಚವೂ ಬಿಡುವಿಲ್ಲದಷ್ಟು ಚಿತ್ರಗಳನ್ನು ಈಗಾಗಲೇ ಒಪ್ಪಿಕೊಂಡಿರೋ ಶಿವಣ್ಣನ ಬತ್ತಳಿಕೆಗೆ ಮತ್ತೊಂದು ಚಿತ್ರ ಸೇರ್ಪಡೆಗೊಂಡಂತಿದೆ!

#


Posted

in

by

Tags:

Comments

Leave a Reply