ಈ ಹಿಂದೆ ಹಾಗಿತ್ತು. ಡಾ. ರಾಜ್ ಕುಮಾರ್ ಅವರಿಗೆ ಯಾವ ಪಾತ್ರವನ್ನು ಕೊಟ್ಟರೂ ಸೂಟ್ ಆಗುತ್ತಾರೆಂದು. ಈಗ ಅದೇ ಮಾತು ಅವರ ಹಿರಿಯ ಮಗ ಶಿವರಾಜ್ ಕುಮಾರ್ ವಿಚಾರದಲ್ಲೂ. ಆಡು ಮುಟ್ಟದ ಸೊಪ್ಪಿಲ್ಲ. ಶಿವಣ್ಣ ಮಾಡದ ಪಾತ್ರಗಳಿಲ್ಲ ಎಂಬ ಮಾತು ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹರಿದಾಡುತ್ತಿದೆ. ಈ ಕಾರಣಕ್ಕಾಗಿಯೇ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚಿಗೆ ಕವಚ ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಇದರ ಜತೆ ಜತೆಗೆ ರುಸ್ತುಂ, ದ್ರೋಣ, ಾನಂದ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗುತ್ತಿವೆ. ಇದರ ನಡುವೆ ಮತ್ತೊಂದು ವಿಚಾರ ಹರಿದಾಡುತ್ತಿದ್ದು, ಸೆಂಚುರಿ ಸ್ಟಾರ್ ಮತ್ತೊಂದು ರಿಮೇಕ್ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೌದು ತಮಿಳಿನ ಸೂಪರ್ ಹಿಟ್ ಸಿನಿಮಾ ವಿಶ್ವಾಸಂ ಕನ್ನಡಕ್ಕೆ ರಿಮೇಕ್ ಆಗುತ್ತಿದೆಯಂತೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆಂಬ ಬಿಸಿ ಬಿಸಿ ಸುದ್ದಿ ಈಗ ಗಾಂಧಿನಗರದಲ್ಲಿದೆ. ತಮಿಳಿನಲ್ಲಿ ಈ ಸಿನಿಮಾವನ್ನು ತಲಾ ಅಜಿತ್ ಅಭಿನಯಿಸಿದ್ದರು. ಈ ಮೊದಲೇ ವಿಶ್ವಾಸಂ ಕನ್ನಡಕ್ಕೆ ಜಗಮಲ್ಲ ಎನ್ನುವ ಹೆಸರಲ್ಲಿ ರಿಮೇಕ್ ಆಗಿಯೂ ರಿಲೀಸ್ ಆಗಿತ್ತು. ಆದರೆ ಈಗ ಮತ್ತೊಮ್ಮೆ ಶಿವಣ್ಣ ನಾಯಕತ್ವದಲ್ಲಿ ರಿಲೀಸ್ ಆಗಲಿದೆಯಂತೆ. ಈ ವಿಚಾರದ ಕುರಿತು ಸದ್ಯದಲ್ಲೇ ಅಧಿಕೃತ ಮಾಹಿತಿಯೂ ಹೊರಬೀಳಲಿದೆ.
ಇನ್ನು ಈ ಹಿಂದೆ ರಿಮೇಕ್ ಸಿನಿಮಾಗಳಿಗೆ ನೋ ಎನ್ನುತ್ತಿದ್ದ ಶಿವರಾಜ್ ಕುಮಾರ್, ಬರು ಬರುತ್ತಾ ರಿಮೇಕ್ ಸಿನಿಮಾಗಳ ಮೊರೆ ಹೋಗುತ್ತಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇತ್ತೀಚಿಗೆ ರಿಲೀಸ್ ಆದ ಮಲಯಾಳಂನ ‘ಒಪ್ಪಂ’ ಚಿತ್ರದ ಕನ್ನಡ ರಿಮೇಕ್ ‘ಕಮಚ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಉತ್ತಮ ಸಿನಿಮಾಗಳನ್ನು ರಿಮೇಕ್ ಮಾಡಲು ಏನು ಅಭ್ಯಂತರವಿಲ್ಲ ಎಂದು ಈ ಹಿಂದೆ ಶಿವಣ್ಣನೆ ಹೇಳಿದ್ದರು ತಮ್ಮ ವರಸೆಯನ್ನು ಬದಲಿಸಿರುವುದು ಕೆಲವರಿಗೆ ಖುಷಿ ಮತ್ತೂ ಕೆಲವರಿಗೆ ಉರಿ.
No Comment! Be the first one.