ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಲ್ಲಿಯಾದರೂ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು ಶ್ರದ್ಧಾ ಶ್ರೀನಾಥ್. ಈ ವರ್ಷ ಶ್ರದ್ಧಾ ಪಾಲಿಗೆ ಅಕ್ಷರಶಃ ಸಿನಿಮಾ ಹಂಗಾಮಾ. ಯಾಕೆಂದರೆ ಕಳೆದ ವರ್ಷ ಈಕೆ ನಟಿಸಿರೋ ಒಂದಷ್ಟು ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದಾವೆ. ಇದೇ ಹೊತ್ತಿನಲ್ಲಿ ಶ್ರದ್ಧಾ ಪಕ್ಕದ ತಮಿಳು, ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಶ್ರದ್ಧಾ ನಟಿಸುತ್ತಿರೋ ತಮಿಳಿನ ಕೆ-13 ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಎಸ್ ಪಿ ಸಿನಿಮಾಸ್ ಲಾಂಛನದಡಿ ನಿರ್ಮಾಣವಾಗಲಿರೋ ಈ ಸಿನಿಮಾಗದಲ್ಲಿ ಶ್ರದ್ಧಾ ಅರುಳ್ನಿಧಿಗೆ ನಾಯಕಿಯಾಗಿ ನಟಿಸಲಿದ್ದಾರೆ. ತಮಿಳಿನಲ್ಲಿ ಅರುಳ್ನಿಧಿ ಜೊತೆ ನಾಯಕಿಯಾಗಿ ನಟಿಸುತ್ತಿರೋ ಶ್ರದ್ಧಾ ಮಾಧವನ್ ಅಭಿನಯದ ಚಿತ್ರಕ್ಕೂ ಜೊತೆಯಾಗಲಿದ್ದಾರೆ. ಇದೇ ಹೊತ್ತಲ್ಲಿ ಬಾಲಿವುಡ್ಗೂ ಎಂಟ್ರಿ ಕೊಟ್ಟಿರೋ ಅವರು ಮಿಲನ್ ಟಾಕೀಸ್ಗೂ ನಾಯಕಿ. ತೆಲುಗಿನಲ್ಲಿ ನಾನಿಗೆ ಶ್ರದ್ಧಾ ನಾಯಕಿಯಾಗಿರೋ ಚಿತ್ರವೂ ರೆಡಿಯಾಗುತ್ತಿದೆ. ಇನ್ನು ಕನ್ನಡದಲ್ಲಿ ಮೊದಲ ಸಲ ರುಸ್ತುಂ ಚಿತ್ರದಲ್ಲಿ ಶ್ರದ್ಧಾ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿಇ ಅಭಿನಯಿಸಿದ್ದದಾರೆ.ಒಟ್ಟಾರೆಯಾಗಿ ಈ ವಷ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರು ನಟಿಸಿರೋ ಚಿತ್ರಗಳು ಸಾಲುಸಾಲಾಗಿ ಬಿಡುಗಡೆಯಾಗಲಿವೆ.
#