ಯೂ ಟರ್ನ್ ಚಿತ್ರದಿಂದಲೇ ಪ್ರವರ್ಧಮಾನಕ್ಕೆ ಬಂದ ಅಪ್ಪಟ ಕನ್ನಡತಿ ಶ್ರದ್ಧಾ ಶ್ರೀನಾಥ್. ಈ ಸಿನಿಮಾ ಕಾರಣದಿಂದಲೇ ಒಂದಷ್ಟು ಅವಕಾಶಗಳನ್ನು ತನ್ನದಾಗಿಸಿಕೊಂಡಿರೋ ಈಕೆಯೀಗ ಕನ್ನಡಕ್ಕಿಂತಲೂ ಬೇರೆ ಭಾಷೆಗಳಲ್ಲಿಯೇ ಹೆಚ್ಚು ಅವಕಾಶಗಳನ್ನು ಹೊಂದಿದ್ದಾಳೆ. ಕನ್ನಡದಲ್ಲಿ ಈಕೆ ಡೀಸೆಂಟಾದ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ಆದರೆ ತೆಲುಗು ಚಿತ್ರವೊಂದಕ್ಕಾಗಿ ಶ್ರದ್ಧಾ ನಟ ನಾನಿ ಜೊತೆ ಲಿಪ್ ಲಾಕ್ ಮಾಡಿರೋ ದೃಷ್ಯಾವಳಿಗಳೀಗ ವೈರಲ್ ಆಗಿ ಬಿಟ್ಟಿವೆ!
ಶ್ರದ್ಧಾ ಶ್ರೀನಾಥ್ ತೆಲುಗಿನ ಜೆರ್ಸಿ ಎಂಬ ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ನಟಿಸುತ್ತಿರೋ ವಿಚಾರ ಗೊತ್ತೇ ಇದೆ. ಇತ್ತೀಚೆಗಷ್ಟೇ ಈ ಚಿತ್ರದ ಪ್ರಮೋಷನಲ್ ಸಾಂಗ್ ಒಂದು ಬಿಡುಗಡೆಯಾಗಿದೆ. ಅದರಲ್ಲಿರೋ ಒಂದು ದೃಷ್ಯ ಕಂಡು ಕನ್ನಡದ ಶ್ರದ್ಧಾ ಅಭಿಮಾನಿಗಳು ದಿಗಿಲುಗೊಂಡಿದ್ದಾರೆ!
ನಾನಿ ಜೊತೆ ಶ್ರದ್ಧಾ ಲಿಪ್ ಲಾಕ್ ಮಾಡಿರೋ ಅದೊಂದು ದೃಷ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ. ಈ ಮೂಲಕ ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ಕನ್ನಡಕ್ಕಿಂತಲೂ ಭಿನ್ನವಾದ ಗೆಟಪ್ಪಿನಲ್ಲಿಯೇ ಕಾಣಿಸಿಕೊಂಡಿದ್ದಾರೆಂಬ ಸುಳಿವೂ ಸಿಕ್ಕಿದೆ. ಈ ಸಿನಿಮಾದಲ್ಲಿ ನಾನಿ ಕ್ರಿಕೆಟಿಗನೊಬ್ಬನ ಪಾತ್ರಕ್ಕೆ ಜೀವ ತುಂಬಿದ್ದರೆ, ಶ್ರದ್ಧಾ ಕೂಡಾ ನಾಯಕಿಯಾಗಿ ಒಳ್ಳೆ ಪಾತ್ರವನ್ನೇ ತನ್ನದಾಗಿಸಿಕೊಂಡಿದ್ದಾರಂತೆ.
ಶ್ರದ್ಧಾ ಈಗ ತೆಲುಗು ಮಾತ್ರವಲ್ಲದೇ ತಮಿಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಭರತ್ ನೀಲಕಂಠನ್ ನಿರ್ದೇಶನದ ತಮಿಳಿನ ಕೆ ೧೩ ಎಂಬ ಚಿತ್ರದಲ್ಲಿಯೂ ಶ್ರದ್ಧಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಈ ಲಿಪ್ ಲಾಕ್ ದೃಷ್ಯಗಳ ಜೆರ್ಸಿ ಚಿತ್ರ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣಲಿದೆಯಂತೆ.