ಕನ್ನಡದ ಯೂಟರ್ನ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಶ್ರದ್ಧಾ ಶ್ರೀನಾಥ್, ಯೂಟರ್ನ್ ಯಶಸ್ಸಿನ ನಂತರ ಸಾಕಷ್ಟು ಬೇಡಿಕೆಗಳನ್ನೂ ಪಡೆದುಕೊಂಡರು. ಕನ್ನಡದ ಜತೆಗೆ ಟಾಲಿವುಡ್ ಗೆ ಹಾರಿದ್ದ ಶ್ರದ್ದಾ ಲಿಪ್ ಲಾಕ್ ಮೂಲಕ ಬಾರಿ ಸುದ್ದಿಯಾಗಿದ್ದರು ಕೂಡ. ಶ್ರದ್ದಾ ಶ್ರೀನಾಥ್ ಅವರ ಲೇಟೆಸ್ಟ್ ಹೇಳಿಕೆಯೊಂದು ಕನ್ನಡಿಗರ ಕೋಪಕ್ಕೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶ್ರದ್ದಾ ಮೇಲೆ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶ್ರದ್ಧಾ ಏನಂದ್ರು ಗೊತ್ತಾ?
ಸದ್ಯ ನಟ ನಾನಿ ಜೊತೆ ಶ್ರದ್ಧಾ ಶ್ರೀನಾಥ್ ನಟಿಸಿರುವ ತೆಲುಗಿನ ಜರ್ಸಿ ಸಿನಿಮಾ ರಿಲೀಸ್ ಆಗಿದ್ದು, ಅದೇ ಸಿನಿಮಾದ ಪ್ರಮೋಷನ್ ವೇಳೆ ಮಾತನಾಡಿರುವ ಶ್ರದ್ಧಾ ಶ್ರೀನಾಥ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಂದರ್ಶನದ ವೇಳೆ ಯಶ್ ಹಾಗೂ ನಾನಿ ಇವರಲ್ಲಿ ಯಾರ ಜೊತೆ ನಟಿಸಲು ಬಯಸುತ್ತೀರಿ ಎಂದು ಸಂದರ್ಶಕ ಕೇಳಿದ್ದಕ್ಕೆ ನಾನು ಈಗಾಗಲೇ ನಾನಿ ಜೊತೆ ಕೆಲಸ ಮಾಡಿದ್ದೇನೆ. ಯಶ್ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ. ಅವರು ಅಷ್ಟಾಗಿ ನನಗೆ ಪರಿಚಯವಿಲ್ಲ. ಹೀಗಾಗಿ ನಾನಿ ಜೊತೆ ತೆರೆ ಹಂಚಿಕೊಳ್ಳಲು ಬಯಸುತ್ತೇನೆ ಅಂದಿದ್ದಾರೆ. ಇದೇ ವೇಳೆ ಯಶ್ ಕಾರ್ಯವೈಖರಿಯನ್ನೂ ಶ್ರದ್ಧಾ ಹೊಗಳಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡತಿಯಾಗಿ ಅವರು ಇಂತಹ ಹೇಳಿಕೆ ನೀಡಬಾರದಿತ್ತು ಅಂತಾ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
No Comment! Be the first one.