ಕಳೆದ ವರ್ಷ ಕಾಲಿವುಡ್ ನಲ್ಲಿ ನಟ ವಿಶಾಲ್ ಅಭಿನಯದ ಇರುಂಬು ತಿರೈ ಸಿನಿಮಾ ತೆರೆಕಂಡಿತ್ತು. ಸೈಬರ್ ಕ್ರೈಂ ಹಿನ್ನೆಲೆಯ ಕಥೆಯುಳ್ಳ ಈ ಸಿನಿಮಾ ಟಾಲಿವುಡ್ ನಲ್ಲಿ ಅಭಿಮನ್ಯುಡು ಟೈಟಲ್ ನಲ್ಲಿ ತೆರೆಕಂಡಿತ್ತು. ಎರಡೂ ಭಾಷೆಗಳಲ್ಲೂ ಸೂಪರ್ ಹಿಟ್ ಎನಿಸಿಕೊಂಡಿತ್ತು. ಈಗ ಇದರ ಸೀಕ್ವೆಲ್ ಮಾಡುವುದಕ್ಕೆ ನಿರ್ಮಾಪಕರು ಮುಂದಾಗಿದ್ದು, ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರಂತೆ. ಪಿ.ಎಸ್. ಮಿತ್ರನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಹಿಂದಿನ ಇರುಂಬು ತಿರೈ ಸಿನಿಮಾದಲ್ಲಿ ವಿಶಾಲ್ ಗೆ ಸಮಂತಾ ಅಕ್ಕಿನೇನಿ ನಾಯಕಿಯಾಗಿದ್ದರು. ಚಿತ್ರದಲ್ಲಿ ಮನಶಾಸ್ತ್ರಜ್ಞೆ ರತಿದೇವಿ ಪಾತ್ರಕ್ಕೆ ಸಮಂತ ಬಣ್ಣ ಹಚ್ಚಿದ್ದರು. ಈಗ ಅದೇ ಸೀಕ್ವೆಲ್ ನಲ್ಲಿ ಚೊಚ್ಚಲ ಬಾರಿಗೆ ಆನಂದ್ ನಿರ್ದೇಶನ ಮಾಡಲಿದ್ದಾರೆ. ಸ್ಕ್ರಿಪ್ಟ್ ಕೆಲಸಗಳು ಕೊನೇ ಹಂತದಲ್ಲಿದ್ದು, ಚಿತ್ರವೊಂದರ ಚಿತ್ರೀಕರಣಕ್ಕಾಗಿ ವಿಶಾಲ್ ವಿದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಅದರ ಕೆಲಸ ಮುಗಿಯುತ್ತಿದ್ದಂತೆ ಇರುಂಬು ತಿರೈ 2 ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
ಸದ್ಯ ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ ‘ಜೆರ್ಸಿ’ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ನಾನಿ ಜೋಡಿಯಾಗಿ ಅವರು ಕಾಣಿಸಿಕೊಂಡಿದ್ದು, ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ತಮಿಳಿನ ‘ಕೆ-13’ ಚಿತ್ರದಲ್ಲಿನ ನಟನೆ ಬಗ್ಗೆಯೂ ಅವರಿಗೆ ಪ್ರಶಂಸೆ ಸಿಕ್ಕಿದೆ. ತೆಲುಗಿನ ‘ಜೋಡಿ’ ಶೂಟಿಂಗ್ ಮುಗಿದಿದೆ. ತಮಿಳಿನಲ್ಲಿ ನಟ ಅಜಿತ್ಕುಮಾರ್ ಜತೆ ‘ನೆಕೋಂಡ ಪಾರವೈ’, ‘ಮಾರಾ’ ಚಿತ್ರದ ಕೆಲಸಗಳು ಚಾಲ್ತಿಯಲ್ಲಿವೆ.
No Comment! Be the first one.