ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ನಿರ್ದೇಶಕರ ಪೈಕಿ ರಾಮ್ ಗೋಪಾಲ್ ವರ್ಮಾ ಮಂಚೂಣಿಯಲ್ಲಿದ್ದಾರೆ. ಬೇಕಂತಲೇ ಒಲ್ಲದ ತರ್ಲೆ, ತಕರಾರುಗಳಿಂದಲೇ ನ್ಯೂಸಾಗುವ ಆರ್ ಜಿ ವಿ ಕುಟುಂಬದಿಂದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಯೆಸ್.. ರಾಮ್ ಗೋಪಾಲ್ ವರ್ಮ ಅವರ ಕುಟುಂಬ ಮುಖ್ಯವಾಹಿನಿಗೆ ಬಂದಿದ್ದೇ ಕಡಿಮೆ. ಅಲ್ಲದೇ ಎಲ್ಲಿಯೂ ಆರ್ ಜಿ ವಿ ತಮ್ಮ ಕುಟುಂಬದ ಕುರಿತಾಗಿ ತುಟಿಬಿಚ್ಚದೇ ತಾನಾಯ್ತು, ತನ್ನ ಸಿನಿಮಾ, ತರ್ಲೆ ವಿವಾದಗಳಾಯ್ತು ಎಂಬಂತೆ ಬದುಕುತ್ತಿದ್ದಾರೆ.

ಈ ಮಧ್ಯೆ ಆರ್ ಜಿ ವಿ ಸೊಸೆ ಶ್ರಾವ್ಯ ಶರ್ಮಾ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆಂಬ ಸುದ್ದಿ ಕಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ರಾಮ್ ಗೋಪಾಲ್ ವರ್ಮಾ ಜತೆ ಸಿನಿಮಾ ಮೇಕಿಂಗ್ ವೇಳೆ ಕಾಣಿಸಿಕೊಂಡಿದ್ದ ಶ್ರಾವ್ಯ ಹೊಸ ಸಿನಿಮಾವನ್ನು ನಿರ್ಮಾಣ ಮಾಡುವ ಉತ್ಸಾಹವನ್ನು ತೋರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ರಿವೀಲ್ ಆಗಲಿದ್ದು, ಆರ್ ಜಿ ವಿ ಅವರ ಮುಂದಿನ ಚಿತ್ರವನ್ನೇ ಶ್ರಾವ್ಯ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

CG ARUN

ಸಿಂಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್!

Previous article

ಮೀಟು ಸುಂದರಿ ಗರ್ಭಿಣಿಯಂತೆ!

Next article

You may also like

Comments

Leave a reply

Your email address will not be published. Required fields are marked *