ಕೆಜಿಎಫ್ ಅನ್ನೋ ಒಂದೇ ಒಂದು ಸಿನಿಮಾದ ಮೂಲಕ ನವನಟಿ ಶ್ರೀನಿಧಿ ಶೆಟ್ಟಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಈ ಒಂದೇ ಸಿನಿಮಾದ ಮೂಲಕ ಶ್ರೀನಿಧಿ ಶೆಟ್ಟಿ ಹಲವು ಸಿನಿಮಾಗಳಿಗೆ ಚಾನ್ಸ್ ಗಿಟ್ಟಿಸಿಕೊಳ್ತಿದ್ದಾರೆ. ಈಗ ಕೆಜಿಎಫ್ ಕ್ವೀನ್​ಗೆ ಬಿಗ್ ಆಫರ್​ವೊಂದು ಬಂದಿದ್ದು, ಬಾಹುಬಲಿ ಪ್ರಭಾಸ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ.

ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್​ ಆ್ಯಕ್ಷನ್ ಕಟ್ ಹೇಳ್ತಿರೋ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಜೊತೆ ರಾಕಿಭಾಯ್ ಲವರ್ ಭರ್ಜರಿ ಸ್ಟೆಪ್ ಹಾಕಲಿದ್ದಾರೆ ಅನ್ನೋ ಸುದ್ದಿ ಸಿನಿ ರಂಗದಲ್ಲಿ ಕೇಳಿ ಬರ್ತಿದೆ.  ಈಗಾಗಲೇ ಹೈದರಾಬಾದ್‌ನಲ್ಲಿ ಹಾಡೊಂದರ ಶೂಟಿಂಗ್​ಗಾಗಿ ಭರ್ಜರಿ ಸೆಟ್ ಹಾಕಲಾಗುತ್ತಿದ್ದು, ಚಿತ್ರದ ಪ್ರಮುಖ ಭಾಗವಾಗಿರಲಿದೆಯಂತೆ.   ಈ ಬಿಗ್ ಸೆಟ್​ನಲ್ಲಿ ಪ್ರಭಾಸ್ ಜೊತೆ ಶ್ರಿನಿಧಿ ಶೆಟ್ಟಿ ಹೆಜ್ಜೆ ಹಾಕಲಿದ್ದಾರೆ. ಸದ್ಯ ಸಲಾರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾಗೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

‘ಚೆಹೆರೆ’ಯಿಂದ ಹೊರಬಿದ್ದಳಾ ನಟಿ ರಿಯಾ ಚಕ್ರವರ್ತಿ….?

Previous article

ಕೋಟಿಗೊಬ್ಬ 3 ಸಿನಿಮಾ ರಿಲೀಸ್ ನಂತರ…

Next article

You may also like

Comments

Leave a reply

Your email address will not be published.