ನಟಿ ಶ್ರೇಯಾ ಶರಣ್ ಗೊತ್ತಲ್ಲ? ಸೂಪರ್ ಸ್ಟಾರ್ ರಜನಿಕಾಂತ್ ಅವರ ಶಿವಾಜಿ ಸಿನಿಮಾದ ಮೂಲಕ ಎಳೇ ಹುಡುಗರಿಂದ ಹಿಡಿದು ಹಣ್ಣಣ್ಣು ಮುದುಕರ ತನಕ ಎಲ್ಲರ ನಿದ್ದೆಗೆಡಿಸಿದ್ದವಳು. ಕನ್ನಡದಲ್ಲೂ ರೂಪಾ ಅಯ್ಯರ್ ನಿರ್ದೇಶನದಲ್ಲಿ ಬಂದಿದ್ದ ಚಂದ್ರ ಸಿನಿಮಾದಲ್ಲಿ ನಟಿಸಿದ್ದವಳು. ಸದ್ಯ ಆಂಡ್ರೆ ಕೊಸ್ಚೀವ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿರುವ ಶ್ರೇಯಾಳ ಬಿಕಿನಿ ವಿಡಿಯೋ ಈಗ ಸೌಂಡು ಮಾಡುತ್ತಿದೆ.
ಹಾಲಿಡೇ ಮೂಡ್ ನಲ್ಲಿರುವ ಶ್ರೇಯಾ ಸದ್ಯ ಮೆಡಿಟರೇನಿಯನ್? ಸಮುದ್ರದ ನಡುವಿನ ‘ಇಬಿಜಾ’ ದ್ವೀಪದಲ್ಲಿ ಹ್ಯಾಪಿ ಮೂಡ್ ನಲ್ಲಿ ಕಾಲಕಳೆಯುತ್ತಿದ್ದಾರೆ. ಈ ನಡುವೆ ಅವರು ಪಿಂಕ್ ಬಣ್ಣದ ಬಿಕಿನಿ ಧರಿಸಿ ಸಖತ್ತಾಗಿಯೇ ಸ್ಟೆಪ್ಪು ಹಾಕಿರುವ ವಿಡಿಯೋ ವೈರಲ್ ಆಗಿದೆ.
https://www.instagram.com/p/B18zLB0FGo-/?utm_source=ig_web_copy_link
ಇನ್ನು ಈ ಹಾಟ್ ವಿಡಿಯೋವನ್ನು ಶ್ರೇಯಾ ಅವರ ಪತಿ ಆಂಡ್ರೆ ಕೊಸ್ಚೀವ್ ಅವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಶ್ರೀಯಾ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ೩ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಕೆಲವರು ತನ್ನ ಪತ್ನಿಯ ಬಿಕಿನಿ ವಿಡಿಯೋವನ್ನೇ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾನೆಂದರೆ ಇವನೆಂತಾ ಗಂಡ ಅಂತಾ ಶ್ರೇಯಾಳ ಪತಿಯ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನೊಂದಷ್ಟು ಜನ ‘ಈತ ಎಷ್ಟೊಂದು ಫ್ರೇಂಡ್ಲೀ ಪತಿ ಅಂತಾ ಹೊಗಳಿದ್ದಾರೆ. ಒಟ್ಟಾರೆ ಹೊಗಳಿಕೆ ತೆಗಳಿಕೆಗಳ ಮಧ್ಯೆ ಶ್ರೇಯಾಳ ಮೈಮಾಟವನ್ನು ಜನ ಎಂಜಾಯ್ ಮಾಡುತ್ತಿರೋದು ಮಾತ್ರ ಸತ್ಯ!