ಕನ್ನಡ ಚಿತ್ರರಂಗದ ಹಿರಿಯ ನಟಿ ಶೃತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹುಬ್ಬಳ್ಳಿಗೆ ಬಿಜೆಪಿ ಪರ ಅಭ್ಯರ್ಥಿಯ ಪ್ರಚಾರಕ್ಕೆಂದು ತೆರಳಬೇಕಿದ್ದ ಶೃತಿ ಪ್ರಚಾರ ಮಾಡದೇ ಆಸ್ಪತ್ರೆಯಲ್ಲಿ ವೈದ್ಯರ ಉಪಚಾರ ಮಾಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಶೃತಿ ಮಗಳು ಗೌರಿ ಇನ್ ಸ್ಟಾಗ್ರಾಂ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಮ್ಮ ಅಂಜಿಯೋಡೆಮಾ ಸೋಂಕಿನಿಂದ ಬಳಲುತ್ತಿದ್ದು, ಮುಖ ಊದಿಕೊಂಡ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಹುಬ್ಬಳ್ಳಿಗೆ ತೆರಳಲು ವಿಮಾನ ಪ್ರಯಾಣ ಮಾಡಬೇಕಿತ್ತು. ಆದರೆ ಸೋಂಕು ವಿಪರೀತಕ್ಕೆ ತಿರುಗಿ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರ ಚಿಕಿತ್ಸೆಯ ಬಳಿಕ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.ಎಂದಿದ್ದಾರೆ. ನೀವು ಕೂಡ ಆಂಜಿಯೋಡೆಮಾ ಸೋಂಕಿನ ಬಗ್ಗೆ ಎಚ್ಚರವಹಿಸಿ. ಈ ಸೋಂಕು ಹೆಚ್ಚಾದರೆ ಪ್ರಾಣಕ್ಕೆತೊಂದರೆಯುಂಟಾಗಲಿದೆ. ಹಾಗಾಗಿ ನೀವು ಈ ಬಗ್ಗೆ ಜಾಗೃತಿ ಮೂಡಿಸಿ ಎಚ್ಚರವಾಗಿರಿ ಎಂದು ಪೋಸ್ಟ್ ಮಾಡಿದ್ದಾರೆ.
No Comment! Be the first one.