ಜಮಾನದಲ್ಲಿ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಮಿಂಚು ಹರಿಸಿದ್ದ ನಟಿ ಶೃತಿ. ಅದಾದ ಮೇಲೆ ಅಲ್ಲಿದಿಲ್ಲೊಂದು ಪಾತ್ರಗಳನ್ನು ಮಾಡುತ್ತ ಬಂದಿದ್ದ ಶೃತಿ, ಬಿಗ್ ಬಾಸ್ ಸೀಜನ್ 3ರಲ್ಲಿ ಭಾಗವಹಿಸಿ ಅಲಕ್ ಬುಲಕ್ ನಲ್ಲಿ ವಿನ್ನರ್ ಆಗಿಯೂ ಹೊರಬಂದಿದ್ದರು. ಇನ್ನು ಬಿಗ್ ಬಾಸ್ ನಲ್ಲಿ ವಿಜೇತರಾದರೆ ಮುಗೀತಲ್ಲ.. ಸೆಂಟಿಮೆಂಟ್ ಸಿನಿಮಾಗಳಿಂದಲೇ ಫೇಮಸ್ ಆಗಿದ್ದ ಶೃತಿಯವರನ್ನು ಪರಮೇಶ್ವರ್ ಗುಂಡ್ಕಲ್ ಮಜಾ ಭಾರತ ಕಾಮಿಡಿ ಶೋಗೆ ತೀರ್ಪುಗಾರರನ್ನಾಗಿಯೂ ಮಾಡಿಬಿಟ್ಟರು. ಮುಂದಿನದನ್ನು ನೋಡುಗರಿಗೆ ನೆನಪಿಸುವ ಅಗತ್ಯವೇನಿಲ್ಲ!

ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರವಾಹಿಯ ಮೂಲಕ ಮೊಟ್ಟ ಮೊದಲ ಬಾರಿಗೆ ಶೃತಿ ಸೀರಿಯಲ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ನೂರು ಸಂಚಿಕೆಗಳನ್ನು ಪೂರೈಸಿರುವ ಸೇವಂತಿ ಧಾರವಾಹಿಯ ವಿಶೇಷ ಪಾತ್ರದಲ್ಲಿ ಶೃತಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಶೃತಿಯ ಪ್ರವೇಶದಿಂದ ಸೇವಂತಿ ಮತ್ತೊಂದು ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ಮತ್ತಷ್ಟು ಪ್ರೇಕ್ಷಕರಲ್ಲಿ ಕೌತುಕವನ್ನು ಸೃಷ್ಟಿಸಲಿದೆಯಂತೆ. ಅಂತದ್ದೇನಾಗಬಹುದೆಂದು ಸೇವಂತಿಯನ್ನು ನೋಡಿಯೇ ತಿಳಿದುಕೊಳ್ಳಬೇಕಿದೆ. ಇನ್ನು ಶೃತಿ ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಚಿತ್ರದಲ್ಲಿ ಮಹಾತ್ಮಗಾಂಧಿ ತಾಯಿ ಪುತಲೀಬಾಯಿ ಪಾತ್ರದಲ್ಲಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

CG ARUN

ಕಿಚ್ಚ ಸುದೀಪ್ ಗೆ ಯುವ ನಿರ್ದೇಶಕ ಹೊಸ ಟೈಟಲ್ಲು!       

Previous article

ಅಮಲಾ ಪೌಲ್ ವಿರುದ್ಧ  ದೂರು ದಾಖಲೆ!

Next article

You may also like

Comments

Leave a reply

Your email address will not be published. Required fields are marked *