ಖ್ಯಾತ ನಟ ಕಮಲ ಹಾಸನ್ ಪುತ್ರಿ ಶ್ರುತಿ ಹಾಸನ್, ಬ್ರಿಟಿಷ್ ನಟ ಮೈಕಲ್ ಕೋರ್ಸೆಲ್ ಜೊತೆ ಪ್ರೇಮ ಸಂಬಂಧದಲ್ಲಿದ್ದು, ಇದನ್ನು ಶೃತಿ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ, ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇದಕ್ಕೆ ಪುಷ್ಟಿ ನೀಡಿದ್ದರು. ಇದೀಗ ಬಹಿರಂಗವಾಗಿರುವ ಮಾಹಿತಿಯಂತೆ ಶೃತಿ ಹಾಸನ್ ಹಾಗೂ ಮೈಕಲ್ ಕೊರ್ಸೆಲ್ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆಯಂತೆ.
ಹೀಗಾಗಿ ಕೆಲಕಾಲದಿಂದ ಇವರುಗಳು ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ.ಅಷ್ಟೇ ಅಲ್ಲ, ಶೃತಿ ಹಾಸನ್ ತಾವು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ಹಿಂದೆ ಶೇರ್ ಮಾಡಿದ್ದ ಇಬ್ಬರಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಹಾಗೆಯೇ ಶೃತಿಯ ಕೆಲವೊಂದು ಪೋಸ್ಟ್ ಗಳಿಗೆ ಕಮೆಂಟ್ ಮಾಡುತ್ತಿದ್ದ ಮೈಕಲ್ ಅದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಇದನ್ನೆಲ್ಲ ಗಮನಿಸಿರುವ ಚಿತ್ರರಂಗದ ಮಂದಿ ಇಬ್ಬರ ನಡುವಿನಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದೆ.
Leave a Reply
You must be logged in to post a comment.