ಸಿಲ್ವರ್ ಸ್ಕ್ರೀನ್ ಮೇಲೆ ತಾಕತ್ ತೋರಿಸಿ ಪರಾರಿಯಾಗಿದ್ದ ಶುಭಾಪೂಂಜಾ ಮತ್ತೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ಕಮ್ ಬ್ಯಾಕ್ ಆಗಿದ್ದಾರೆ. ಹೌದು ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ನಾಯಕನಾಗಿ ಅಬಿನಯಿಸುತ್ತಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಮೂಲಕ ಶುಭಾ ಪೂಂಜಾ ನಟಿಸಲಿದ್ದಾರೆ.

ಸಿನಿಮಾದ ಪ್ರಮುಖ ಹಾಡೊಂದರಲ್ಲಿ ಹೆಜ್ಜೆ ಹಾಕಲು ರೆಡಿಯಾಗಿರುವ ಶುಭಾ ಪೂಂಜಾ  ಟ್ರೆಡಿಷನಲ್ ಸ್ಯಾರಿ ಉಟ್ಟಿದ್ದರೂ ಸಹ ಬಬ್ಲಿ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಶುಭಾ ಜತೆಗೆ ಕಾರುಣ್ಯ ರಾಮ್ ಮತ್ತು ರಚನಾ ಕೂಡ ಸಾಥ್ ಕೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕ ರಾಜ್ ಬಿ ಶೆಟ್ಟಿ ನಾಯಕಿ ಹೇಗಿರಬಹುದೆಂದು ಇಮ್ಯಾಜಿನ್ ಮಾಡಿಕೊಳ್ಳುವ ಹಾಡಾಗಿರಲಿದೆಯಂತೆ. ಅಂದಹಾಗೆ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಕವಿತಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.

CG ARUN

ಡರ್ಟಿ ಬ್ಯೂಟಿಯ ಹಾಟ್ ಫೋಟೋ ವೈರಲ್!

Previous article

ವೀಕೆಂಡ್ ಪ್ರೋಗ್ರಾಮು ಪಲ್ಟಿ ಹೊಡೀತು!

Next article

You may also like

Comments

Leave a reply

Your email address will not be published. Required fields are marked *