ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿ ಸಂಸಾರದ ಗುಟ್ಟು ವ್ಯಾದಿ ರಟ್ಟಾಗಿದೆ. ಸ್ವತಃ ಶ್ವೇತಾ ಅವರೇ ಪತಿ ಅಭಿನವ್ ಕೊಹ್ಲಿ ಕೌಟುಂಬಿಕ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಶ್ವೇತಾ ಅಭಿನವ್ ಕೊಹ್ಲಿ ನಡುವೆ ಮದುವೆಯಾದಾಗಿನಿಂದ ಯಾವುದೂ ಸರಿಯಿಲ್ಲ ಎಂದು ಹೇಳಿದ್ದು, ಮನೆಯಲ್ಲಿ ಆಗಾಗ ಜಗಳ, ಮನಸ್ಥಾಪಗಳು ಬರುತ್ತಿತ್ತು ಎಂದು ಆರೋಪಿಸಿದ್ದಾರೆ.
ಅಲ್ಲದೇ ಅಭಿನವ್ ಕುಡಿದ ಮತ್ತಿನಲ್ಲಿ ಪುತ್ರಿ ಪಾಲಕ್ ಗೆ ಹೊಡೆದಿದ್ದಾರೆ. ಮಗಳನ್ನು ಬಿಡಿಸಲು ಹೋದ ನನಗೂ ಹೊಡೆದಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮೊದಲು ರಾಜಾ ಚೌಧರಿ ಎಂಬುವವರನ್ನು ಮದುವೆಯಾಗಿದ್ದ ಶ್ವೇತಾ ಅಭಿನವ್ ರನ್ನು 2013 ರಲ್ಲಿ ಎರಡನೇ ಮದುವೆಯಾಗಿದ್ದಾರೆ. ಮೊದಲ ಪತಿಗೆ ಪಾಲಕ್ ಎಂಬ ಮಗಳಿದ್ದಾಳೆ. ಅಭಿನವ್ ಗೆ ರೇಯಶ್ ಕೊಹ್ಲಿ ಎಂಬ ಮಗನಿದ್ದಾನೆ.